ಬೆಂಗಳೂರು:
ಸಚಿವರಿಗೆ ಕೆಲಸ ಮಾಡಲು ಸಾಧ್ಯವಾಗದ್ದಿರೆ ಅವರು ರಾಜೀನಾಮೆ ನೀಡಲಿ ಎಂದು ಡಿ.ಸಿ.ತಮ್ಮಣ್ಣ ಅವರಿಗೆ ಮಂಡ್ಯದ ಸಂಸದೆ ಸುಮಲತಾ ಅಂಬರೀಶ್ ಅವರು ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ ಸಚಿವರು ಮಂಡ್ಯದ ಗ್ರಾಮವೊಂದಕ್ಕೆ ಭೇಟಿ ನೀಡಿದಾಗ ಗ್ರಾಮಸ್ಥರ ಮೇಲೆ ಅವರ ದುವರ್ತನೆಯನ್ನು ಖಂಡಿಸಿದರು. ಮಂಡ್ಯದಲ್ಲಿ ನಿಖೀಲ್ ಕುಮಾರ್ ಸ್ವಾಮಿ ಸೋಲಿಗೆ ತಮ್ಮಣ್ಣ ಅವರ ವಿವಾದಾತ್ಮಕ ಹೇಳಿಕೆಗಳೇ ಕಾರಣ. ಸೋಲಿನ ನಂತರ ತಮ್ಮ ಕೋಪವನ್ನು ಬಡ ಜನರ ಮೇಲೆ ತೋರವುದು ಸರಿಯಲ್ಲ ಮತ್ತು ದ್ವೇಶದ ರಾಜಜಕಾರಣ ಮಾಡುವುದು ಸರಿಯಲ್ಲ.
ಮದ್ದೂರಿನಲ್ಲಿ ನಡೆದ ಶಂಕು ಸ್ಥಾಪನೆ ಕಾರ್ಯಕ್ರಮದ ವೇಳೆ ದಲಿತ ಕಾಲೋನಿಗೆ ಚರಂಡಿ ಮತ್ತು ರಸ್ತೆ ನಿರ್ಮಾಣಕ್ಕಾಗಿ ಬೇಡಿಕೆ ಮುಂದಿಟ್ಟಾಗ ಸಚಿವ ತಮ್ಮಣ್ಣ ಅವರು ಜನರ ವಿರುದ್ಧ ಕಿಡಿ ಕಾರಿದ್ದರು. ಕೆಲಸ ಮಾಡಲು ನಾವು ಬೇಕು, ವೋಟು ಹಾಕಲು ಅವರು ಬೇಕಾ ? ನಾಚಿಗೆಯಾಗಲ್ವಾ ಎಂದು ಗ್ರಾಮಸ್ಥರ ಮೇಲೆ ರೇಗಾಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
