ಕಂಪ್ಲಿ
ಶಿಕ್ಷಣದ ಯೋಜನೆಗಳೊಂದಿಗೆ ವಿದ್ಯಾರ್ಥಿಗಳು ದೇಶದ ಉತ್ತಮ ಪ್ರಜೆಗಳಾಗಿ ಹೊರ ಹೊಮ್ಮಬೇಕು ಎಂದು ದೇವಸಮುದ್ರ ಜಿಪಂ ಸದಸ್ಯ ಕೆ.ಶ್ರೀನಿವಾಸರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕು ಸಮೀಪದ ದೇವಸಮುದ್ರ ಗ್ರಾಮದ ಆಶ್ರಯ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2017-18ನೇ ಸಾಲಿನ ಎಚ್‍ಕೆಆರ್‍ಡಿಬಿಯ ಪರಿಶಿಷ್ಟ ಜಾತಿ ಮತ್ತು ಗಿರಿಜನ ಯೋಜನೆಯಡಿಯ 8.70 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಶಾಲಾ ಕೊಠಡಿ ಉದ್ಘಾಟಿಸಿದ ನಂತರ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಅಡಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಕೊಠಡಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಶಿಕ್ಷಣವಂತರನ್ನಾಗಿ ರೂಪಿಸಬೇಕಾಗಿದೆ ಎಂದರು.
ನಂತರ ಹೊಸಪೇಟೆ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಷಣ್ಮುಖಪ್ಪ ಮಾತನಾಡಿ, ಕಲಿಕಾ ಹಂತದಲ್ಲಿ ಮಕ್ಕಳಿಗೆ ಶಿಕ್ಷಣದ ಬುನಾದಿ ಹಾಕಬೇಕಾಗಿದೆ. ಶಿಕ್ಷಣದಿಂದ ಮಕ್ಕಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಈಗಾಗಲೇ ತಾಪಂಯ ಯೋಜನೆಗಳನ್ನು ಶಾಲೆಗಳಿಗೆ ಸದುಪಯೋಗಪಡಿಸಲಾಗಿದೆ. ಈ ಶಾಲೆಗೆ ಇನ್ನೂ ಒಂದು ಶಾಲಾ ಕೊಠಡಿ ಅವಶ್ಯಕತೆಯಿದೆ. ಹೀಗಾಗಿ ಇನ್ನೊಂದು ಶಾಲಾ ಕೊಠಡಿಗೆ ಅನುವು ಮಾಡಿಕೊಡಬೇಕಾಗಿದೆ ಎಂದರು. ಶಿಕ್ಷಕ ಎನ್.ದ್ಯಾಮನಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಗುರು ಜಡಿಯಪ್ಪ ಸಮಾರಂಭದ ಅಧ್ಯಕ್ಷತೆವಹಿಸಿದ್ದರು.
ಈ ಸಂದರ್ಭದಲ್ಲಿ ಹೊಸಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಡಿ.ಜ್ಯೋಶಿ, ಬೆಂಗಳೂರು ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ಸದಸ್ಯ ಹೆಚ್.ಸಿ.ರಾಘವೇಂದ್ರ, ಗ್ರಾಪಂ ಅಧ್ಯಕ್ಷ ಕೊರವರ ಶಂಕ್ರಪ್ಪ, ಉಪಾಧ್ಯಕ್ಷ ಸಣಾಪುರ ರುದ್ರಪ್ಪ, ಸದಸ್ಯರಾದ ನಾಯಕರ ವೆಂಕೋಬಣ್ಣ, ಕೆ.ನಾಗರಾಜ, ದೊಡ್ಡ ಬಸಪ್ಪ, ಬಸವರಾಜ, ಪಿಡಿಒ ಸಾವಿತ್ರಿ ಗೌರೋಜಿ, ಶರಣಪ್ಪ, ಸ್ಥಳದಾನಿಗಳಾದ ಪ್ರಭುಸ್ವಾಮಿ, ದೊಡ್ಡಯ್ಯಸ್ವಾಮಿ, ಸಿಆರ್‍ಪಿಗಳಾದ ಜೆ.ಮಂಜುನಾಥ, ಶ್ರೀಕಾಂತ್, ಸಂಯೋಜಕ ಗುರುರಾಜ, ಎಸ್ಡಿಎಂಸಿ ಅಧ್ಯಕ್ಷ ನಾಗರಾಜ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಗುರು ದೊಡ್ಡಬಸಪ್ಪ, ಬಿಆರ್‍ಪಿ ಬಸವರಾಜ, ಮುಖಂಡರಾದ ಜಿ.ಪಂಪಣ್ಣ, ಹೆಚ್.ಗುಂಡಪ್ಪ, ರಾಮಣ್ಣ, ಚನ್ನಬಸುವ, ರುದ್ರಪ್ಪ, ತಿಪ್ಪೇಸ್ವಾಮಿ, ನಾಗಪ್ಪ ಶಿವರಾಜ್ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
