2020ಕ್ಕೆ ಹೊಸ ಪ್ರವಾಸ ನೀತಿ ಜಾರಿಗೆ ಪ್ರಯತ್ನ -ಸಚಿವ ಸಿ.ಟಿ.ರವಿ

ಹಾವೇರಿ
    ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು  ಹಾಗೂ ಜಿಲ್ಲಾಧಿಕಾರಿಗಳನ್ನು ಒಳಗೊಂಡ ಜಿಲ್ಲಾ ಮಟ್ಟದ ಟಾಸ್ಕಫೋರ್ಸ್ ಸಮಿತಿ ರಚಿಸಬೇಕು ಎಂದು  ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಸಕ್ಕರೆ ಸಚಿವರಾದ ಸಿ.ಟಿ.ರವಿ ಅವರು ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಕ್ಕರೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಸುಧಾಮೂರ್ತಿ ಅವರ ನೇತೃತ್ವದಲ್ಲಿ ರಾಜ್ಯ ಮಟ್ಟದ ಟಾಸ್ಕಪೋರ್ಸ ಸಮಿತಿ ರಚಿಸಲಾಗಿದೆ. ಹಾವೇರಿ ಜಿಲ್ಲೆಯ ಪ್ರವಾಸಿ ತಾಣಗಳ ಸರ್ವೇಮಾಡಿ  ಹಾಗೂ ನೂರಾರು  ವರ್ಷಗಳ ಹಳೆಯ ಜೈನ, ಹೊಯ್ಸಳ, ಕದಂಬ, ಚಾಲುಕ್ಯ ಹಾಗೂ ವಿಜಯನಗರ ಕ್ಷೇತ್ರ, ಸಂಬಂಧಿಸಿದಂತ ಸ್ಥಳಗಳನ್ನು ಗುರುತಿಸಿ  ಪುರಾತತ್ವ ಇಲಾಖೆ  ನೀಡುವ ಕೆಲಸವಾಗಬೇಕು.
 
     ಕೇಂದ್ರ ಪ್ರಾಚ್ಯವಸ್ತು ಇಲಾಖೆಯಲ್ಲಿ ೧೧೮ ಹಾಗೂ ರಾಜ್ಯ ಪ್ರಾಚ್ಯ ವಸ್ತು ಇಲಾಖೆಯಲ್ಲಿ ೧೫ ಸೇರಿದಂತೆ ಜೆಲ್ಲೆಯಲ್ಲಿ ಸಂರಕ್ಷಣೆ ಅವಶ್ಯಕತೆಯಿರುವ ಸ್ಥಳಗಳನ್ನು  ಗುರುತಿಸಿ ಪ್ರಸ್ತಾವನೆ ಸಲ್ಲಿಸಿ. ಜಿಲ್ಲೆಯ ಪ್ರವಾಸಿ ತಾಣಗಳ ರಸ್ತೆ ಸಂಪರ್ಕದ ವಿವರ, ಮೂಲಭೂತ ಸೌಕರ್ಯ ಹಾಗೂ ಫಲಕಗಳನ್ನು ಅಭಿವೃದ್ಧಿಗೊಳಿಸುವ ಕಾರ್ಯಗಳಾಗಬೇಕು. ಪ್ರವಾಸಿ ತಾಣಗಳಲ್ಲಿ ಬೋಟಿಂಗ್, ವಾಟರ್ ಪಾಲ್ಸ್, ವಾಟರ್ ಗೇಮ್ಸ್, ಟ್ರಕ್ಕಿಂಗ್ ಸೇರಿದಂತೆ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕೆಲಸಕೈಗೊಳ್ಳಬೇಕು. ಶೀಘ್ರದಲ್ಲಿ ಟೂರಿಸಂ ಕಾನ್ಫರನ್ಸ್ ಯೋಜನೆ ಆಯೋಜಿಸಿ ಜಿಲ್ಲೆಯ ರಸ್ತೆ ನಕಾಶೆ ತಯಾರಿಸಬೇಕು. ಮೂಲಭೂತ ಸೌಕರ್ಯಗಳಿಗೆ ಆದ್ಯತೆಯನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. 
 
      ಗೃಹ ಮತ್ತು ಸಹಕಾರ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ರಾಜ್ಯ ಪುರಾತ್ವ ಇಲಾಖೆ ಮೈಸೂರಿನಲ್ಲಿರುವುದರಿಂದ ಅವರು ಈಕಡೆ ತಿರುಗಿಯೂ ನೋಡಲ್ಲ. ಹಾಗಾಗಿ ಉತ್ತರ ಕರ್ನಾಟದಲ್ಲಿ ಪ್ರಾದೇಶಿಕ ಕಚೇರಿ ಸ್ಥಾಪಿಸಬೇಕು ಎಂದು ಮವನಿ ಮಾಡಿಕೊಂಡ ಸಂದರ್ಭದಲ್ಲಿ ಪ್ರವಾಸೋದ್ಯಮ ಸಚಿವರು ಈ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದರು.
      ಶಾಸಕ ನೆಹರು ಓಲೇಕಾರ ಅವರು ಮಾತನಾಡಿ, ಹಾವೇರಿ ನಗರದ ಐತಿಹಾಸಿಕ ಪುರಸಿದ್ದೇಶ್ವರ ದೇವಸ್ಥಾನದ ಜಾಗೆಯನ್ನು ಪೂಜಾರಿ ಹೆಸರಿಗೆ ಮಾಡಲಾಗಿತ್ತು, ಈಗ ಸರಿಮಾಡಲಿದೆ. ದೇವಸ್ಥಾನದ  ಜಾಗೆ ಒತ್ತುವರಿಯಾಗಿದ್ದು, ಕೂಡಲೇ ಒತ್ತುವರಿ ತೆರವುಗೊಳಿಸಲು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲು ಸಚಿವರಿಗೆ ತಿಳಿಸಿದರು.
       ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ,  ದೇವಸ್ಥಾನ ಆಸ್ತಿ ಖಾತೆ ಬದಲಾವಣೆ ಮಾಡಿದವರು ಹಾಗೂ ಮಾಡಲು ಪ್ರಯತ್ನಿಸಿದವರ ಮೇಲೆ ಕೇಸ್ ಹಾಕಿ ಕೂಡಲೇ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು .ಶಾಸಕ ಸಿ.ಎಂ.ಉದಾಸಿ ಅವರು ತಾರಕೇಶ್ವರ ದೇವಸ್ಥಾನದ ಜೀರ್ಣೋದ್ದಾರವಾಗಬೇಕು ಎಂದು  ಪ್ರವಾಸೋದ್ಯಮ ಸಚಿವರಿಗೆ ತಿಳಿಸಿದರು
2020 ಕ್ಕೆ ಹೊಸ ಪ್ರವಾಸ ನೀತಿ:
 
       ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ  ಸಹಯೋಗದಲ್ಲಿ ಕೇಂದ್ರ ಸರ್ಕಾರ, ಖಾಸಗಿ ಸಹಭಾಗಿತ್ವ, ಪ್ರವಾಸಿ ಸ್ಥಳಗಳ ದತ್ತು ನೀಡುವ ಯೋಜನೆ, ಸ್ಥಳ ಸಂರಕ್ಷಣಾ ಯೋಜನೆ, ನೋಡು ಬಾ ನಮ್ಮೂರ, ಈ ರೀತಿಯ ಸಮಗ್ರ ಯೋಜನೆಗಳನ್ನೊಳಗೊಂಡಂತೆ ಹೊಸ ಪ್ರವಾಸಿ ನೀತಿಯನ್ನು 2020ಕ್ಕೆ ಹೊಸ ಪ್ರವಾಸ ನೀತಿಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕಾರ್ಯಕೈಗೊಳ್ಳಲಾಗುತ್ತಿದೆ. ಖಾಸಗಿ ಹೂಡಿಕೆ ಮೇಲೆ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಅಭಿವೃದ್ಧಿಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
      ಜಿಲ್ಲೆಯ ಸಮಗ್ರ ಮಾಹಿತಿ ಕಲೆಹಾಕುವ ನಿಟ್ಟಿನಲ್ಲಿ ಜಾನಪದ ವಿವಿಯ ವಿದ್ಯಾರ್ಥಿಗಳು ಶನಿವಾರ- ಭಾನುವಾರ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಆ ಸ್ಥಳದ ಮಾಹಿತಿ  ಕಲೆಹಾಕುವ ಕಾರ್ಯವಾಗಬೇಕು. ಇದರಿಂದ ಮಕ್ಕಳಿಗೆ ಅಧ್ಯಯನವಾಗುತ್ತದೆ ಹಾಗೂ ಆಸಕ್ತಿ ಬೆಳೆಯುಯುತ್ತದೆ.  ಈ ಕಾರ್ಯಕ್ಕೆ ಸುಮಾರು ಮೂರುಸಾವಿರ ವಿದ್ಯಾರ್ಥಿಗಳು ಬೇಕಾಗುತ್ತಾರೆ. ಕಲಾ ವಿಭಾಗದ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಿ, ಕಡಿಮೆಯಾದಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಿ ಎಂದು ತಿಳಿಸಿದರು. 
     ಈ ರೀತಿ ಕಲೆಹಾಕಿದ ಮಾಹಿತಿಯನ್ನು ವಿಕಿಪಿಡಿಯ ಮಾದರಿ ತಂತ್ರಾಂಶದಲ್ಲಿ ಪ್ರಕಟಿಸಲಾಗುವುದು.  ಈ ತಂತ್ರಾಂಶದಲ್ಲಿ ತಪ್ಪು ತಿದ್ದಬಹುದು ಹಾಗೂ ಹೊಸ ವಿಷಯ ಅಪ್‌ಲೋಡ್ ಮಾಡಬಹುದಾಗಿದೆ.  ಆರ್ಥಿಕ, ಸಾಮಾಜಿಕ, ಸ್ಮಾರಕ ದಾಖಲಿಸುವ ಕೆಲಸವಾಗಬೇಕು ಎಂದು  ತಿಳಿಸಿದರು.
        ಜಿಲ್ಲೆಯ ಪ್ರವಾಸಿ ತಾಣಗಳು ಭೂಪಟದ ನಕ್ಷೆಯಲ್ಲಿ ಮುಂಚೂಣಿಯಲ್ಲಿರಬೇಕು. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಸಕ್ರಿಯವಾಗಿ ತೊಡಗಿಸಿಕೊಂಡು  ಎಲ್ಲ ಸಮಗ್ರ ಮಾಹಿತಿ ಸಂಗ್ರಹಿಸುವ ಮೂಲಕ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕು ಎಂದು ಸೂಚನೆ ನೀಡಿದರು.
      ಖಾಸಗಿಯವರಿಗೆ ೩ ಸ್ಟಾರ್ ಹೋಟೆಲ್ ನಿರ್ಮಿಸಲು, ಮೊಬೈಲ್ ಕ್ಯಾಂಟಿನ್ ಹಾಗೂ  ಮೊಬೈಲ್ ಶೌಚಾಲಯಗಳಿಗೆ  ಸ್ಥಾಪನೆ ಸಬ್ಸಿಡಿ ನೀಡಲಾಗುವುದು.  ಸಾರ್ವಜನಿಕ ಆಕರ್ಷಣೆಗೆ  ತಾಲೂಕಿಗೊಂದು ಚಟುವಟಿಕಾ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಹೇಳಿದರು. 
 
      ಬ್ಯಾಂಕ್ ಸಾಲ ನೀಡಿದ ಕಾರಣ ಪ್ರವಾಸಿ ಟ್ಯಾಕ್ಸಿ ವಿತರಣೆಯಲ್ಲಿ ಭೌತಿಕ ಸಾಧನೆ ಸಾಧ್ಯವಾಗಿಲ್ಲದಿದ್ದಲ್ಲಿ   ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ  ಸಮಿತಿ ರಚಿಸಿ.  ಈಗ ಆಯ್ಕೆಯಾದ  ಫಲಾನುಭವಿಗಳ ಪಟ್ಟಿ ರದ್ದು ಪಡಿಸಿ ಹೊಸ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಜಿಲ್ಲೆಯಲ್ಲಿ ಆರು ಪ್ರವಾಸಿ ತಾಣಗಳಿದ್ದು,  ಹೊಸದಾಗಿ ೧೫ ಸ್ಥಳಗಳನ್ನು ಸೇರಿಸಲು ಪ್ರಸ್ತಾವನೆ ಇದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ನಗರೇಶ್ವರ ದೇವಸ್ಥಾನ, ತಡಸ ಗಾಯತ್ತಿ ಮಂದಿರ,  ರನ್ನನ ವಿದ್ಯಾಭ್ಯಾಸ ಸ್ಥಳ, ಸವಣೂರ ತಾಲೂಕಿನ ವಿಷ್ಣುತೀರ್ಥ ಸೇರಿದಂತೆ ಇನ್ನೂ ಹಲವಾರು ಸ್ಥಳಗನ್ನು ಪ್ರವಾಸಿ ತಾಣಗಳನ್ನಾಗಿ ಗುರುತಿಸಲು ಗೃಹ ಸಚಿವರು ಸೂಚಿಸಿದ ಗೃಹ ಸಚಿವರು ಬಂಕಾಪೂರ ವಿಜಯನಗರ  ಆ ಕಾಲದಲ್ಲಿ ಕ್ಯಾಪಿಟಲ್ ಸಿಟಿಯಾಗಿತ್ತು ಎಂದು ತಿಳಿಸಿದರು.
       ಜಿಲ್ಲೆಯಲ್ಲಿ ಮಹಾತ್ಮಾ ಗಾಂಧೀಜಿಯವರು ಭೇಟಿ ನೀಡಿದ ಸ್ಥಳಗಳಿಗೆ ಶಾಲಾಮಕ್ಕಳನ್ನು ಕರೆದುಕೊಂಡು ಹೋಗಿ, ಅವರಿಗೆ ಗಾಂಧೀಜಿಯವರ ಆದರ್ಶ, ತತ್ವಗಳನ್ನು ತಿಳಿಸಬೇಕು.  ಮೂರು ಗಾಂಧೀಜಿ ತತ್ವ ಹಾಗೂ ವಿಚಾರಗಳನ್ನು ಅಳವಡಿಸಿಕೊಳ್ಳುತ್ತೇವೆ ಎಂಬ ಸಂಕಲ್ಪವನ್ನು ಮಕ್ಕಳಿಂದ ಮಾಡಿಸಬೇಕು  ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳೀಗೆ ಎಂದು ಸೂಚಿಸಿದರು ಹಾಗೂ ನವಂಬರ ಮಾಹೆಯೊಳಗೆ  ಯಾತ್ರಿ ನಿವಾಸದ ನಿವೇಶನದ ದಾಖಲೆ ನೀಡದಿದ್ದಲ್ಲಿ ಅನುದಾನ ರದ್ದಾಗುತ್ತದೆ ಎಂದು ಅಧಿಕಾರಿಗೆ ಎಚ್ಚರಿಸಿದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link