ವಿಜಯಪುರ-ಮಂಗಳೂರು ನೂತನ ರೈಲಿಗೆ ಚಾಲನೆ..!

ಹಾವೇರಿ:

     ಉತ್ತರ ಕರ್ನಾಟಕದ ಜನರ ಬಹುದಿನದ ಬೇಡಿಕೆಯಾದ ವಿಜಯಪುರ-ಮಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಹೊಸ ರೈಲು ಸಂಚಾರಕ್ಕೆ ಸೋಮವಾರ ಸಂಜೆ ಹಸಿರು ನಿಶಾನೆ ತೋರಿದ್ದು, ಅದು ಕಾರ್ಯರೂಪಕ್ಕೆ ಬಂದಂತಾಗಿದೆ.

    ಗುಮ್ಮಟನಗರಿ ವಿಜಯಪುರದಿಂದ ಕರಾವಳಿ ಪ್ರದೇಶ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದ್ದು, ಇದರಿಂದ ಉತ್ತರ ಕರ್ನಾಟಕದ ಜನತೆ ಕರಾವಳಿ ಪ್ರದೇಶದ ಧಾರ್ಮಿಕ ಕ್ಷೇತ್ರಗಳಿಗೆ ತೆರಳಲು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ದುಡಿಯುವ ವರ್ಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಬಹುದು.

    ಈ ರೈಲು ಪ್ರತಿದಿನ ಸಂಜೆ 6 ಗಂಟೆಗೆ ವಿಜಯಪುರದಿಂದ ನಿರ್ಗಮಿಸಿ ಬಾಗಲಕೋಟ, ಗದಗ, ಹಾವೇರಿ, ಬ್ಯಾಡಗಿ, ಹರಿಹರ, ದಾವಣಗೇರಿ, ಕಡೂರು, ಅರಸೀಕೆರೆ, ಹಾಸನ, ಸಕಲೇಶಪುರ, ಕುಕ್ಕೇ ಸುಬ್ರಹ್ಮಣ್ಯ ಮಾರ್ಗದಿಂದ ಮಂಗಳೂರನ್ನು ಮಧ್ಯಾಹ್ನ 12-30ಕ್ಕೆ ತಲುಪಲಿದೆ.

     ಈ ರೈಲು ಸಂಚಾರವನ್ನು ಸ್ವಾಗತಿಸಲು ಸುಬ್ರಹ್ಮಣ್ಯದಲ್ಲಿರುವ ಉತ್ತರ ಕರ್ನಾಟಕದ ಕೆಲ ಜನ ಮಂಗಳವಾರ ಸುಬ್ರಹ್ಮಣ್ಯ ರೈಲು ನಿಲ್ದಾಣಕ್ಕೆ ಹೋಗಿ ಹರ್ಷ ವ್ಯಕ್ತಪಡಿಸಿ ಸಂಭ್ರಮಿಸಿದ್ದಾರೆ. ಇದೇ ವೇಳೆಯಲ್ಲಿ ಕರಬಸ್ಸು ಸುಬ್ರಹ್ಮಣ್ಯ, ಗುರುಪಾದ ಬೆಳ್ಳಿ ಸುಬ್ರಹ್ಮಣ್ಯ, ಈರಣ್ಣ ಪೂಜಾರ ಸೇರಿದಂತೆ ಸಿಬ್ಬಂದಿ ಹಾಗೂ ಸ್ಥಳೀಯ ಜನರು ರೈಲು ನಿಲ್ದಾಣದಲ್ಲಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link