ಬೆಂಗಳೂರು
ವೃತ್ತಿಪರ ಕಾಲೇಜುಗಳ ವಿದ್ಯಾರ್ಥಿಗಳು ಐಟಿ ಬಿಟಿ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಗಾಂಜಾ ಕೊಕೇನ್ ಮಾರಾಟ ಮಾಡುತ್ತಿದ್ದ ನೈಜೀರಿಯನ್ ನೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಕಣ್ಣೂರಿನ ಇಜಾಕ್ ನ್ಯೂಜಿಗೂವ್ (40) ಬಂಧಿತ ಆರೋಪಿಯಾಗಿದ್ದು, ನೈಜೀರಿಯಾದ ಅನ್ಬೇರಾ ಮೂಲದ ಬಂಧಿತನಿಂದ ಒಂದು ಕೆಜಿ ಗಾಂಜಾ, 19 ಗ್ರಾಂ ಕೊಕೇನ್, ಎರಡು ಮೊಬೈಲ್,ತೂಕದ ಯಂತ್ರ 1 ಸಾವಿರ ನಗದು ವಶ ಪಡಿಸಿಕೊಳ್ಳಲಾಗಿದೆ.
ವಿದ್ಯಾರ್ಥಿ ವೀಸಾದ ಅಡಿ ನಗರಕ್ಕೆ ಬಂದಿದ್ದ ಇಜಾಕ್ ನ್ಯೂಜಿಗೂವ್ ವಿಲಾಸಿ ಜೀವನ ನಡೆಸಲು ತನ್ನದೇ ದೇಶದ ಮತ್ತೊಬ್ಬ ಆರೋಪಿ ಸ್ಕೈ ಇಗ್ಬು ನಿಂದ ಕಡಿಮೆ ಬೆಲೆಗೆ ಗಾಂಜಾ, ಕೊಕೇನ್ ತಂದು ಪ್ರತಿಷ್ಠಿತ ಕಾಲೇಜು ಹಾಗೂ ಶಾಲೆಗಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದ.
ಇಜಾಕ್ ಬಾಗಲೂರು ಸುತ್ತಮುತ್ತ ಮಾದಕವಸ್ತು ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್‌ಪಾಟೀಲ್ ತಿಳಿಸಿದ್ದಾರೆ.ಇಜಾಕ್ ನ್ಯೂಜಿಗೂವ್ ವಿರುದ್ಧ ಬಾಗಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








