ಮಧುಗಿರಿ
ಪಾವಗಡ ರಾಜ್ಯ ಹೆದ್ದಾರಿ ಕೆ.ಶಿಫ್.ರಸ್ತೆ ರಾಜ್ಯದ ಗಡಿ ಭಾಗದ ಚಂದ್ರಬಾವಿ ಗ್ರಾಮದ ಬಸ್ ನಿಲ್ದಣದ ಬಳಿ ಖಾಸಗಿ ಬಸ್ ನಿಲ್ಲಿಸಿದ್ದರು ತಾ 27-05-2019 ರಂದು ಬೆಳಗಿನ ಜಾವ 5-20 ಗಂಟೆಯ ಸಮಯದಲ್ಲಿ ತಮಿಳುನಾಡಿಗೆ ಸೇರಿದ ಕುರಿಸಾಗಾಣಿಕೆಯ ಈಚರ್ ಲಾರಿ ವಾಹನವು ಬೆಂಗಳೂರಿನಿಂದ ಪಾವಗಡ ಪಟ್ಟಣದಲ್ಲಿ ಪ್ರತಿ ಸೋಮವಾರ ನಡೆಯಲಿರುವ ಕುರಿ ಸಂತೆಯಲ್ಲಿ ಕುರಿಗಳನ್ನು ಕೊಂಡು ಕೊಂಡು ಹೊತ್ತೋಯ್ಯಲು ಬಂದಿದ್ದಂತ ಲಾರಿಯು ಚಂದ್ರಬಾವಿ ಬಳಿ ನಿಂತಿದ್ದ ಬಸ್ಸಿಗೆ ಡಿಕ್ಕಿ ಹೊಡೆದಿದೆ.
ಪರಿಣಾಮದಿಂದ ಲಾರಿಯಲ್ಲಿದ್ದ ನಾಲ್ಕು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಈಚರ್ ಚಾಲಕ ಮಹೇಂದ್ರನ್ (40) ನ ಎದೆಗೆ ಪೆಟ್ಟು ಬಿದ್ದಿದ್ದು ಸದರಿ ಗಾಯಾಳುಗಳವರನ್ನು ಕೆ.ಶಿಪ್.ನ ಅಂಬುಲೆನ್ಸ್‍ನಲ್ಲಿ ಮಧುಗಿರಿ ತಾಲ್ಲೂಕು ಸಾರ್ಕಾರಿ ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆಯೇ ಮಹೇಂದ್ರನ್ ಸಾವಿಗೇಡಾಗಿರುತ್ತಾನೆ.
ಸದರಿ ಅಪಘಾತದ ಬಗ್ಗೆ ಮೃತನ ಸಂಭಂಧಿ ಮಿಡಿಗೇಶಿ ಪೋಲೀಸ್ ಠಾಣೆಗೆ ಲಿಖಿತ ದೂರನ್ನು ನೀಡಿರುತ್ತಾರೆ ಇದೇ ಸಂದರ್ಭದಲ್ಲಿ ಚಂದ್ರಬಾವಿ ಗ್ರಾಮದ ಲಕ್ಷಮ್ಮ ಎಂಬುವರ ಮನೆಗೂ ಈಚರ್ ಲಾರಿ ಗುದ್ದಿದ್ದು ಬಾಗಿಲು ಶಿಥಿಲವಾಗಿದೆ ಖಾಸಗಿ ಬಸ್ಸಿನ ಮಾಲೀಕರಾದ ಮಹಮದ್ ಖಾಸಿಂ ಸಾಬ್‍ರವರು ಸಹ ಮಿಡಿಗೇಶಿ ಠಾಣೆಗೆ ದೂರನ್ನ ನೀಡಿರುತ್ತಾರೆ ಬಸ್ ಮತ್ತು ಈಚರ್ ಎರಡು ಜಖಂ ಗೊಂಡಿರುತ್ತವೆ ಘಟನಾಸ್ಥಳಕ್ಕೆ ಸಿ.ಪಿ.ಐ ದಯಾನಂದ, ಶೇಷಗುಣಿ ಹಾಗೂ ಪಿ.ಎಸ್.ಐ ಗಂಗಾಧರ್‍ರವರು ಭೇಟಿನೀಡಿದ್ದು ಮಿಡಿಗೇಶಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆಯನ್ನು ಸಿ.ಪಿ.ಐ ರವರು ನಡೆಸುತ್ತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ