ಬೆಂಗಳೂರು
ಸಿಗ್ನಲ್ ಬಳಿ ನಿಲ್ಲಿಸಿದ ಲಾರಿಗೆ ಹಿಂದಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಟಿಬೇಟಿಯನ್ನೊಬ್ಬರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಚಿಕ್ಕಜಾಲ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.ಬೈಲಗುಪ್ಪೆಯ ದುರೇಜೆ (60)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ.
ಗಾಯಗೊಂಡಿರುವ ಕಾರು ಚಾಲಕ ಸೇರಿ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದ್ದರೆ, ಉಳಿದೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಬೈಲುಗುಪ್ಪೆಯಿಂದ ಹೊರಟು ಬೆಳಿಗ್ಗೆ 7.30ರ ವೇಳೆ ನಗರಕ್ಕೆ ಕಾರಿನಲ್ಲಿ ಮೂವರನ್ನು ಕೂರಿಸಿಕೊಂಡು ಬಂದ ಚಾಲಕ ಸಾದರಹಳ್ಳಿ ಗೇಟ್ ಬಳಿ ಸಿಗ್ನಲ್ ಹಾಕಿದ್ದಕ್ಕೆ ನಿಲ್ಲಿಸಿದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ಅಪಘಾತಕ್ಕೆ ಕಾರು ಚಾಲಕನ ಅತಿ ವೇಗವೇ ಕಾರಣವಾಗಿದ್ದು, ಪ್ರಕರಣ ದಾಖಲಿಸಿರುವ ಚಿಕ್ಕಜಾಲ ಸಂಚಾರ ಪೆÇಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆಂದು ಡಿಸಿಪಿ ಸಾರಾ ಫಾತೀಮಾ ತಿಳಿಸಿದ್ದಾರೆ.