ಬೆಂಗಳೂರು
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಸಕ್ತ ಸಾಲಿನ ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ದರ್ಜೆ ಪಟ್ಟಿ(ಎನ್ ಐಆರ್ ಎಫ್ )ಬಿಡುಗಡೆ ಮಾಡಿರುವುದರಲ್ಲಿ ಸಾಕಷ್ಟು ತಪ್ಪಿದೆ ಎಂದು ಪಿಎಎಸ್ ವಿಶ್ವವಿದ್ಯಾಲಯ ಕುಲಪತಿ ಡಾ.ಎಂ.ಆರ್ ದೊರೆಸ್ವಾಮಿ ಆರೋಪಿಸಿದ್ದಾರೆ.
ದೇಶದ ಶಿಕ್ಷಣ ಸಂಸ್ಥೆಗಳ ದರ್ಜೆ ಅನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಪ್ರಕಟಿಸಿದ್ದು ಇದರಲ್ಲಿ ತಮ್ಮ ವಿವಿಗೆ ನೀಡಿರುವ ದರ್ಜೆ, ಅಂಕಿ ಅಂಶಗಳು ತಪ್ಪಾಗಿವೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ದೂರಿದರು.
ದೇಶ ವ್ಯಾಪ್ತಿಯ ಪ್ರಖ್ಯಾತ 100 ವಿಶ್ವ ವಿದ್ಯಾಲಯಗಳ ದರ್ಜೆ ಪಟ್ಟಿಯಲ್ಲಿ ಪಿಇಎಸ್ ವಿವಿಗೆ 2016ರಲ್ಲಿ 98ನೇ ದರ್ಜೆಯಲ್ಲಿತ್ತು. 2017ರಲ್ಲಿ 94ಕ್ಕೆ ತಲುಪಿತ್ತು.ಆದರೆ, 2018ನೇ ಸಾಲಿನಲ್ಲಿ ಮತ್ತೆ ಹಿಂದಕ್ಕೆ ಬಂದಿದ್ದು, 99ನೇ ದರ್ಜೆ ನೀಡಿದ್ದಾರೆ ಎಂದು ತಿಳಿಸಿದರು.
ಅದೇ ರೀತಿ, ಇಂಜಿನಿಯರಿಂಗ್ ವಿಭಾಗದಲ್ಲಿ ತಮ್ಮ ವಿವಿಯೂ, 2017ರಲ್ಲಿ 86ನೇ ಸ್ಥಾನಕ್ಕೆ ಹೋಗಿದ್ದು, 2018ರಲ್ಲಿ 87 ದರ್ಜೆ ಬಂದಿದೆ ಎಂದ ಅವರು, ವೇತನ ಸಂಬಂಧಪಟ್ಟಂತೆಯೂ ತಪ್ಪುಗಳಾಗಿವೆ. ಇದರಿಂದ, ವಿವಿ ಮತ್ತು ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ.ಹೀಗಾಗಿ, ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ, ಕಾನೂನು ಹೋರಾಟ ನಡೆಸಲಾಗುವುದು ಎಂದು ದೊರೆಸ್ವಾಮಿ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
