ನಿಯಮ ಮೀರಿ ವಾಹನಗಳಲ್ಲಿ ಪ್ರಯಾಣಿಕರನ್ನು ತುಂಬದಂತೆ ಚಾಲಕರಿಗೆ ಎಚ್ಚರಿಕೆ

ಪ.ನಾ.ಹಳ್ಳಿ

    ಸರಕು ಸಾಗಾಟ ವಾಹನಗಳಲ್ಲಿ ಅತ್ಯಂತ ಅಪಾಯಕಾರಿ ರೀತಿಯಲ್ಲಿ ಕಾರ್ಮಿಕರನ್ನು ತುಂಬಿಸಿ ಕೊಂಡು ಸಾಗಾಟ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು ನಿಯಮ ಮೀರಿ ಹೆಚ್ಚು ಜನರನ್ನು ಅಟೋ ರಿಕ್ಷಾ ಹಾಗೂ ಸರಕು ಸಾಗಾಣಿಕೆ ವಾಹನಗಳಲ್ಲಿ ತುಂಬ ಬಾರದು ಎಂದು ಪಿ.ಎಸ್.ಐ. ನಿರ್ಮಲ ಚಾಲಕರಿಕೆ ಎಚ್ಚರಿಕೆ ನೀಡಿದರು.

     ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯಲ್ಲಿ ಪೊಲೀಸ್ ಇಲಾಖೆ ಗುರುವಾರ ಹಮ್ಮಿಕೊಂಡಿದ್ದ ಶಾಲಾ ವಿಧ್ಯಾರ್ಥಿಗಳಿಗೆ ಜಾಗೃತಿ ಆಭಿಯಾನ ಹಾಗೂ ವಾಹನ ಚಾಲಕರಿಗೆ ಪ್ರತಿಜ್ಞವಿಧಿ ಭೋದನಾ ಆಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆಟೋ ರಿಕ್ಷಾ ಚಾಲಕರು ಶಾಲಾ ವಿಧ್ಯಾರ್ಥಿಗಳ ಸುರಕ್ಷಾತಾ ದೃಷ್ಠಿಯಿಂದ ಬೇಕಾಬಿಟ್ಟಿಯಾಗಿ ತುಂಬಿಕೊಂಡು ಹೋಗದಂತೆ ಸಲಹೆ ನೀಡಿದರು.

       ಇದೇ ಸಂಧರ್ಭದಲ್ಲಿ ಕಟ್ಟಡ ಕಾರ್ಮಿಕರು ಹಾಗೂ ಗುತ್ತಿಗೆದಾರಿರ ಸಭೆ ನಡೆಸಿದ ಪಿಎಸ್‍ಐ ವಿ.ನಿರ್ಮಲ ಕಾರ್ಮಿಕರು ಕೆಲಸ ಮಾಡುವಾಗ ಹಾಗೂ ಸಾಗಾಟ ವಾಹನದಲ್ಲಿ ಮತ್ತೊಂದೆಡೆ ಹೋಗುವಾಗ ಸುರಕ್ಷಿತವಾಗಿ ಬೇರೆ ಸ್ಥಳಕ್ಕೆ ಹೋಗುವ ನಿಟ್ಟಿನಲ್ಲಿ ಸಂಚಾರ ನಿಯಮ ಪಾಲಿಸುವಂತೆ ಸೂಚಿಸಿದರು.

      ಸರುಕು ಸಾಗಾಟ ವಾಹನ, ಆಟೋರಿಕ್ಷಾ, ವಿದ್ಯಾಸಂಸ್ಥೆಗಳು ಬಸ್ಸುಗಳನ್ನು ಚಾಲನೆ ಮಾಡುವಂತ ಚಾಲಕರು ಕಡ್ಡಾಯವಾಗಿ ಲೈಸನ್ಸ್ ಹೊಂದಿರಬೇಕು. ಜೊತೆಗೆ ವಾಹನದ ವಿಮೆ ಕೊಡ ಇರಬೇಕು ಇದಾವುದು ಇಲ್ಲ ಎಂದರೆ ಕಾನೂನಿನ ಉಲ್ಲಂಘನೆಯಾಗಲಿದ್ದು ನಿಯಮಾನುಸಾರ ಕ್ರಮ ಜರುಗಿಸುವುದರೊಂದಿಗೆ ಪರವಾನಗಿ ಇಲ್ಲದ ವಾಹನದ ಸಂಖ್ಯೆಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರಕಟಿಸುವುದಾಗಿ ಹೇಳಿದರು.

       ಹನುಮಂತಚಾರ್, ತಿಪ್ಪೇಸ್ವಾಮಿ, ಶಿಕ್ಷಕ ಉಮೇಶ್ ಸೇರಿದಂತೆ ಹಲವಾರು ಆಟೋ ರಿಕ್ಷಾ ಚಾಲಕರು, ಕಟ್ಟಡ ಕಾರ್ಮಿಕರು, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link