ಹುಳಿಯಾರು
ಸರ್ಕಾರಿ ರಜೆ ಮತ್ತು ವಾರದ ರಜಾ ದಿನದಂದು ಮಾರ್ಗ ಮುಕ್ತತೆ ಪಡೆದು ಕೆಲಸ ನಿರ್ವಹಿಸಲು ಇಲಾಖೆಯ ನಿಯಮ ಇರುವುದಿಲ್ಲ ಎಂದು ಹುಳಿಯಾರು ಬೆಸ್ಕಾಂನ ಶಾಖಾಧಿಕಾರಿ ಉಮೇಶ್ ನಾಯ್ಕ ಅವರು ತಿಳಿಸಿದ್ದಾರೆ.
ಹುಳಿಯಾರಿನ ಕೆಲ ಕಾರ್ಖಾನೆ ಮಾಲೀಕರು ಭಾನುವಾರ ಕಾರ್ಖಾನೆಗಳಿಗೆ ರಜೆಯಿದ್ದು ಆ ದಿನ ವಿದ್ಯುತ್ ಕಡಿತ ಮಾಡಿ ವಿದ್ಯುತ್ ಸಂಬಂಧ ಕೆಲಸಗಳನ್ನು ಮಾಡಿಕೊಳ್ಳುವಂತೆ ಮನವಿ ಸಲ್ಲಿಸಿದ್ದರು. ಸರ್ಕಾರಿ ನೌಕರರೂ ಸಹ ಭಾನುವಾರ ವಿದ್ಯುತ್ ಕಡಿತ ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಲೈನ್ ಟ್ರಬಲ್ ಹೊರತುಪಡಿಸಿ ಭಾನುವಾರ 1 ಗಂಟೆಗೂ ಹೆಚ್ಚು ಕಾಲ ವಿದ್ಯುತ್ ಕಡಿತ ಮಾಡುವಂತಿಲ್ಲ.
ಹಾಗಾಗಿ ಹುಳಿಯಾರು ಪಟ್ಟಣದಲ್ಲಿನ ಹೈವೆ ಕಂಬಗಳ ಸ್ಥಳಾಂತರದ ಕೆಲಸ ಇನ್ನೂ 15 ದಿವಸಗಳು ಬಾಕಿ ಉಳಿದಿರುತ್ತದೆ, ಪ್ರತಿ ವಾರಕ್ಕೆ 2 ದಿನದಂತೆ ಶುಕ್ರವಾರ ಮತ್ತು ಶನಿವಾರ ಮಾರ್ಗ ಮುಕ್ತತೆ ಪಡೆದು ಕೆಲಸ ನಿರ್ವಹಿಸಲು ಮೇಲಾಧಿಕಾರಿಗಳ ಮೌಖಿಕ ಆದೇಶ ನೀಡಿರುತ್ತಾರೆ.
ಇದರಂತೆ ಈ ವಾರದಿಂದ ಶುಕ್ರವಾರ ಮತ್ತು ಶನಿವಾರ ಬೆಳಿಗ್ಗೆ 10 ರಿಂದ ಸಂಜೆ 5 ರ ವರೆವಿಗೆ ವಿದ್ಯುತ್ ವ್ಯತ್ಯಯವಾಗಲಿದ್ದು ಗ್ರಾಹಕರು ಎಂದಿನಂತೆ ಸಹಕರಿಸಬೇಕಾಗಿ ಕೋರಿದ್ದಾರೆ.