ಮಧುಗಿರಿ :
ತಾಲ್ಲೂಕಿನ ರೈತರು ಬೆಳೆದಿರುವ ತರಕಾರಿಯನ್ನು ಕೊರೋನಾ ಕಾರಣದಿಂದಾಗಿ ಮಾರಲು ಸಾಧ್ಯವಾಗದೆ ತೊಳಲಾಡುತ್ತಿರುವುದನ್ನು ಮನಗಂಡ ರಾಷ್ಟ್ರೀಯ ಸಹಾಕಾರಿ ಕ್ರಿಬ್ಕೋ ನಿರ್ದೇಶಕ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್.ರಾಜೇಂದ್ರರವರು ತಾಲ್ಲೂಕಿನ ಮಿಡಿಗೇಶಿ ಹೋಬಳಿ ವ್ಯಾಪ್ತಿಯಲ್ಲಿ 10.50 ಟನ್ ತರಕಾರಿಯನ್ನು ರೈತರ ಹೊಲಗಳಿಗೆ ಭೇಟಿ ನೀಡಿ ಖರೀದಿಸಿದ್ದಾರೆ.
ಇಂದು ಮಿಡಿಗೇಶಿ ಹೋಬಳಿಯ ಬೇಡತ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಹಾಗೂ ರೆಡ್ಡಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳು ಸೇರಿದಂತೆ 12 ಹಳ್ಳಿಗಳ 2300 ಕುಟುಂಬಗಳಿಗೆ ತರಕಾರಿ ವಿತರಿಸಲು ತಯಾರಿ ಮಾಡಿಕೊಳ್ಳಲಾಗಿದೆ. ಜೂನ್ -3ರ ಗುರುವಾರ ತಾಲ್ಲೂಕಿಗೆ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಹಾಗೂ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾರಾಮಯ್ಯ ಆಗಮಿಸುತ್ತಿದ್ದು, ಅವರ ಸಮ್ಮುಖದಲ್ಲಿ ತರಕಾರಿಗಳನ್ನು ಗ್ರಾಮದ ಜನರಿಗೆ ವಿತರಿಸಲಾಗುವುದು. ಈಗಾಗಲೇ ಮಾಜಿ ಶಾಸಕ ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣರವರ ಮಾರ್ಗದರ್ಶನದಲ್ಲಿ ತಾಲ್ಲೂಕಿನ ಕೊಡಿಗೇನಹಳ್ಳಿ- ಐಡಿಹಳ್ಳಿ ಹೋಬಳಿಗಳಲ್ಲಿ ರೈತರಿಂದ ಖರೀದಿಸಿದ ತರಕಾರಿಗಳನ್ನು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ದೊಡ್ಡೇರಿ ಹೋಬಳಿ ಹಾಗೂ ಕಸಬಾ ಹೋಬಳಿಗಳಲ್ಲಿ ವಿತರಿಸಲಾಗುವುದು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರುಗಳಾದ ಬಿ.ನಾಗೇಶ್ ಬಾಬು, ಜಿ.ಎ. ಮೂರ್ತಿ. ರಾಜೇಂದ್ರ ಪ್ರಸಾದ್. ಯುವ ಕಾಂಗ್ರಸ್ ಅಧ್ಯಕ್ಷ ವೆಂಕಟೇಶ್, ಗ್ರಾಪಂ ಮಾಜಿ ಅಧ್ಯಕ್ಷ ತಿಮ್ಮಾರೆಡ್ಡಿ, ಪ್ರಮೀಳಮ್ಮ, ಬಿ.ಎನ್.ಮಲ್ಲಪ್ಪ, ಜಗದೀಶ್, ರಾಕೇಶ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ರಾಮಕೃಷ್ಣಪ್ಪ ಮತಿತ್ತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
