ಅಥಣಿ,ಕಾಗವಾಡ :ನಾಮಪತ್ರ ಸಲ್ಲಿಕೆ ಆರಂಭ

ಬೆಳಗಾವಿ

    ಜಿಲ್ಲೆಯ ಕಾಗವಾಡ ಕ್ಷೇತ್ರದಿಂದ ಶ್ರೀಮಂತ ಪಾಟೀಲ ಹಾಗೂ ಅಥಣಿಯ ಕ್ಷೇತ್ರದಿಂದ ಮಹೇಶ ಕುಮಟಳ್ಳಿ ಅನರ್ಹಾರಾದ ಹಿನ್ನೆಲೆಯಲ್ಲಿ ಈ ಎರಡು ಮತಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಇಂದಿನಿಂದ ಆರಂಭವಾಗಿದ್ದು, ಮೊದಲ ದಿನವೇ ಕೆಲವರು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.

    ಕಾಗವಾಡದ ಉಪಚುನಾವಣೆಗೆ ಚಂದ್ರಕಾಂತ ಬಸಪ್ಪ ಇಮ್ಮಡಿ, ರವೀಂದ್ರ ಗಾಣಿಗೇರ,ಬಾಬಾಸಾಬ್ ಸಿಂಧೆ,ದಿಗ್ವಿಜಯ ಪವಾರ ದೆಸಾಯಿ, ಓಂ ಪ್ರಕಾಶರಾವ್ ಪಾಟೀಲ ಸೇರಿ 5 ಜನ ನಾಮಪತ್ರ ಸಲ್ಲಿಸಿದರು.ಅಥಣಿ ಮತಕ್ಷೇತ್ರದಿಂದ ಮಾಜಿ ಶಾಸಕ ಶಹಜಹಾನ್ ಡೋಂಗರ್ ಗಾಂವ್, ಸತ್ಯಪ್ಪ ಭಾಗೆನ್ನವರ,ಸಿದ್ದರಾಮಗೌಡ ಪಾಟೀಲ. ಗಜಾನನ ಮಂಗಸೂಳಿ ನಾಮಪತ್ರ ಸಲ್ಲಿಸಿದ್ದಾರೆ  ಎಂದು ವರದಿಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ