ಹರಪನಹಳ್ಳಿ:
ಸ್ಥಳೀಯ ಪುರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಮೇ 9ರಿಂದ ಆರಂಭಗೊಳ್ಳಲಿದೆ. ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಸೇರಿ ಒಟ್ಟು ಎಂಟು ಜನ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಉಪವಿಭಾಗಾಧಿಕಾರಿ ಡಾ.ಬಿ.ಎಸ್. ಮಂಜುನಾಥಸ್ವಾಮಿ ತಿಳಿಸಿದರು.
ಈ ಕುರಿತು ಬುಧವಾರ ಪಟ್ಟಣದ ಮಿನಿವಿಧಾನ ಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 1 ರಿಂದ 7ನೇ ವಾರ್ಡ್ ವರೆಗೂ ಚುನಾವಣಾಧಿಕಾರಿಯಾಗಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕ ಚೇತನ (9964489775) ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಕೃಷಿ ಕಚೇರಿಯ ಜಿ.ಪ್ರದೀಪಕುಮಾರ (8217427365) ನಾಮಪತ್ರ ಸಲ್ಲಿಸುವ ಸ್ಥಳ- ಎಸ್ .ಜಿ.ಎಸ್ ಆರ್ ವೈ ಕಟ್ಟಡ , ಪುರಸಭಾ ಕಾರ್ಯಾಲಯ.
ವಾರ್ಡ 8ರಿಂದ 14ರವರೆಗೆ ಚುನಾವಣಾಧಿಕಾರಿಯಾಗಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸಿ.ನಾಗರಾಜ(9611614932), ಸಹಾಯಕ ಚುನಾವಣಾಧಿಕಾರಿಯಾಗಿ ಬಿಇಒ ಕಚೇರಿಯ ಇಸಿಒ ಉದಯಶಂಕರ(9972424800) ನಾಮಪತ್ರ ಸಲ್ಲಿಸುವ ಸ್ಥಳ- ಕೊಠಡಿ ಸಂಖ್ಯೆ-1, ಪುರಸಭೆ.
ವಾರ್ಡ 15ರಿಂದ 21ರವರೆಗೆ ಚುನಾವಣಾಧಿಕಾರಿಯಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಎಂ.ವಿಜಯಕುಮಾರ (7676659328) ಸಹಾಯಕ ಚುನಾವಣಾಧಿಕಾರಿಯಾಗಿ ಬಿಇಒ ಕಚೇರಿಯ ಇಸಿಒ ಬಿ.ಜಯಮಾಲತೇಶ (9449911105) ನಾಮಪತ್ರ ಸಲ್ಲಿಸುವ ಸ್ಥಳ- ಕೊಠಡಿ ಸಂಖ್ಯೆ-2, ಪುರಸಭಾ ಕಾರ್ಯಾಲಯ.
ವಾರ್ಡ್ 22ರಿಂದ 27ರವರೆಗೆ ಚುನಾವಣಾಧಿಕಾರಿಯಾಗಿ ಸ.ಪ್ರ.ದರ್ಜೆ ಕಾಲೇಜು ಉಪನ್ಯಾಸಕ ಜಿ.ರಹಮತ್ (9449681952) ಸಹಾಯಕ ಚುನಾವಣಾಧಿಕಾರಿಯಾಗಿ – ಕೃಷಿ ಇಲಾಖೆಯ ಪ್ರದೀಪ ಹಿರೇಮಠ್ (9902992765) ನಾಮಪತ್ರ ಸಲ್ಲಿಸುವ ಸ್ಥಳ- ಪುರಸಭಾ ಕಾರ್ಯಾಲಯ ಸಭಾಂಗಣದ ಮೊದಲನೇ ಮಹಡಿ.
`ಒಟ್ಟು 27 ವಾರ್ಡಗಳಿಂದ 19728 ಪುರುಷ, 19688 ಮಹಿಳೆಯರು ಸೇರಿ ಒಟ್ಟು 39420 ಮತದಾರರಿದ್ದಾರೆ. ಪ್ರತಿದಿನ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆವರೆಗೆ ಎರಡನೇ ಶನಿವಾರ ದಿನವೂ ನಾಮಪತ್ರ ಸ್ವೀಕರಿಸಲಾಗುವುದು. ಸರ್ಕಾರಿ ರಜಾ ದಿನಗಳಲ್ಲಿ ಮಾತ್ರ ಸ್ವೀಕರಿಸುವುದಿಲ್ಲ’ ಎಂದು ಎಸಿ ಅವರು ತಿಳಿಸಿದರು.
ತಹಶೀಲ್ದಾರ ಎ.ಎಸ್. ಪ್ರಸಾದ್, `27 ವಾರ್ಡಗಳಲ್ಲಿ 42 ಮತಗಟ್ಟೆ ಸ್ಥಾಪನೆ ಮಾಡಲಾಗುವುದು. ಮತದಾನಕ್ಕೆ ಇವಿಎಂ ಯಂತ್ರಗಳಿದ್ದು, ಆದರೆ ವಿವಿ ಪ್ಯಾಟ್ ಗಳು ಈ ಚುನಾವಣೆಯಲ್ಲಿ ಇರುವುದಿಲ್ಲ’ ಎಂದರು.`ಮತಯಂತ್ರದಲ್ಲಿ ಅಭ್ಯರ್ಥಿಗಳ ಭಾವಚಿತ್ರ ಇರುತ್ತದೆ. ನಾಮಪತ್ರ ಸಲ್ಲಿಸಲು ಅಭ್ಯರ್ಥಿ ಸೇರಿ ಒಟ್ಟು 5 ಜನರು ಮಾತ್ರ ಚುನಾವಣಾಧಿಕಾರಿ ಬಳಿ ಹೋಗತಕ್ಕದ್ದು, ನಾಮಪತ್ರ ಸಲ್ಲಿಸಲು ಸಾಮಾನ್ಯ ವರ್ಗಕ್ಕೆ 1 ಸಾವಿರ ರೂ. ಹಾಗೂ ಎಸ್ಸಿ, ಎಸ್ಟಿ, ಓಬಿಸಿ ಹಾಗೂ ಮಹಿಳಾ ಅಭ್ಯ.ರ್ಥಿಗಳಿಗೆ 500 ರೂ.ಮಾತ್ರ ಶುಲ್ಕ ನೀಡಬೇಕು’ ಎಂದು ಹೇಳಿದರು.
`ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾದರೆ ಒಬ್ಬ ಅಭ್ಯರ್ಥಿಗೆ ಒಬ್ಬರೇ ಸೂಚಕರು, ಪಕ್ಷೇತರ ಅಭ್ಯರ್ಥಿಗಳಾದರೆ 4 ಜನ ಸೂಚಕರಿರಬೇಕು. ಒಬ್ಬ ಅಭ್ಯರ್ಥಿಗೆ ಚುನಾವಣಾ ವೆಚ್ಚ 1.50 ಲಕ್ಷ ರೂ.ಮಿತಿಗೊಳಿಸಲಾಗಿದೆ. ಅಭ್ಯರ್ಥಿಗಳ ಖರ್ಚು ವೆಚ್ಚ ಪರಿಶೀಲಿಸಲು 1 ರಿಂದ 13ರವರೆಗೆ ದಾದಾಖಲಂದರ ಹಾಗೂ 14ರಿಂದ 27ರವರೆಗೆ ವಿರುಪಾಕ್ಷಪ್ಪ ಎಂಬುವವರು ನೇಮಕಗೊಂಡಿದ್ದಾರೆ’ ಎಂದರು.
`ನೀತಿಸಂಹಿತೆ ಉಲ್ಲಂಘನೆ ಪ್ರಕರಣ ಪರಿಶೀಲಿಸಲು ತಹಶೀಲ್ದಾರ ನೇತೃತ್ವದಲ್ಲಿ ಇಒ, ಸಿಪಿಐ, ಹರಪನಹಳ್ಳಿ ಪಟ್ಟಣದ ಗ್ರಾಮ ಲೆಕ್ಕಿಗ, ಕಂದಾಯ ಅಧಿಕಾರಿ, ಪುರಸಭಾ ಮುಖ್ಯಾಧಿಕಾರಿಗಳ ತಂಡ ಕಾರ್ಯನಿರ್ವಹಿಸುತ್ತದೆ. ಮತಗಟ್ಟೆ ಅಧಿಕಾರಿಗಳಿಗೆ ತರಬೇತಿಯನ್ನು ಶಿಕ್ಷಣ ಇಲಾಖೆಯ ಮಹೇಶ ಪೂಜಾರ, ಡಿ.ಎಸ್ .ಲಿಂಗೇಶ ನೀಡುವರು’ ಎಂದು ತಹಶೀಲ್ದಾರ ಪ್ರಸಾದ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಂದಾಯ ಸಿಬ್ಬಂದಿ ಅರವಿಂದ, ಸುನೀಲ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








