ಲಕ್ಷ್ಮೀರಂಗನಾಥ ಸ್ವಾಮಿಗೆ 1.5 ಲಕ್ಷ ರೂ ನೋಟುಗಳಿಂದ ಅಲಂಕಾರ…!!!

ದೊಡ್ಡೇರಿ :

       ಹೊಸ ವರುಷದ ಪ್ರಯುಕ್ತ ತಾಲೂಕಿನ ದೊಡ್ಡೇರಿ ಹೋಬಳಿಯ ಬಡವನಹಳ್ಳಿ ಗ್ರಾಮದ ಲಕ್ಷ್ಮೀರಂಗನಾಥ ಸ್ವಾಮಿಗೆ ಸುಮಾರು 1.5 ಲಕ್ಷ ರೂ ವೆಚ್ಚದ ಹೊಸ ನೋಟಗಳಿಂದ ಆಲಂಕಾರ ಮಾಡಲಾಗಿತ್ತು.

       ಶ್ರೀ ಸ್ವಾಮಿಯ ಅಲಂಕಾರಕ್ಕಾಗಿ ಗ್ರಾಮಸ್ಥರ ಸಹಕಾರದೊಂದಿ ಈ ಆಲಂಕಾರ ನೇರವೇರಿಸಲಾಗಿದ್ದು ಪ್ರತಿ ವರ್ಷವು ಒಂದೊಂದು ರೀತಿಯ ಸ್ವಾಮಿ ಆಲಂಕಾರ ಮಾಡಲಾಗುತ್ತಿದ್ದು ಈ ಬಾರಿ ಹೊಸ ನೋಟುಗಳಿಂದ ಶ್ರೀ ಸ್ವಾಮಿ ಆಲಂಕಾರ ಮಾಡಲಾಗಿತ್ತು. 

        ಹೊಸ ನೋಟುಗಳಾದ 500, 200, 100, 50 ಮತ್ತು 20 ರೂಗಳ ಹೊಸ ನೋಟಗಳನ್ನು ಸ್ವಾಮಿ ಆಲಂಕಾರಕ್ಕಾಗಿ ಬಳಸಿಕೊಂಡಿದ್ದಾರೆ.

         ಪ್ರತಿ ವರ್ಷವೂ ಧನುರ್ ಮಾಸದಲ್ಲಿ ಪ್ರತಿ ದಿನವೂ 5 ಗಂಟೆಗೆ ಶ್ರೀ ಸ್ವಾಮಿಗೆ ವಿಶೇಷ ಪೂಜೆಯನ್ನು ನೇರವೇರಿಸಲಾಗುತ್ತದೆ .ಭಕ್ತಾಧಿಗಳು ಪೂಜೆಗೆ ಬಂದು ಹೋಗುತ್ತಾರೆ ವೈಕುಂಠ ಏಕಾದಶಿ . ಸಂಕ್ರಾಂತಿ ಹಾಗೂ ಹೊಸ ವರ್ಷನ್ನು ದೇವಾಲಯದಲ್ಲಿ ವಿಶೇಷವಾಗಿ ಭಕ್ತಾಧಿಗಳ ಸಹಕಾರದೊಂದಿಗೆ ಆಚರಿಸಲಾಗುತ್ತದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link