ಹರಪನಹಳ್ಳಿ
ಪುರಸಭೆ ಕಚೇರಿಗೆ ನಿತ್ಯ ತಡವಾಗಿ ಆಗಮಿಸುವ ಸಿಬ್ಬಂದಿಗಳಿಗೆ ನೊಟೀಸ್ ಜಾರಿ ಮಾಡುವಂತೆ ಆಡಳಿತಾಧಿಕಾರಿ ವಿ.ಕೆ.ಪ್ರಸನ್ನ ಕುಮಾರ್ ಮಂಗಳವಾರ ಆದೇಶ ಮಾಡಿದ್ದಾರೆ.ಬೆಳಿಗ್ಗೆ 10.30 ಗಂಟೆಗೆ ಆಗಮಿಸಿದ ಉಪವಿಬಾಗಾಧಿಕಾರಿ ವಿ.ಕೆ.ಪ್ರಸನ್ನ ಕುಮಾರ್ ಅವರು, ಹಾಜರಾತಿ ಪುಸ್ತಕ ಪರಿಶೀಲಿಸಿದರು. ಪುಸ್ತಕದಲ್ಲಿ ಸಹಿ ಮಾಡದ ಸಿಬ್ಬಂದಿಗಳ ವಿವರ ಪಡೆದು, ಗೈರಾದ ಸಿಬ್ಬಂದಿಗಳಿಗೆ ಕಾರಣ ಕೇಳಿ ನೊಟೀಸ್ ಜಾರಿ ಮಾಡುವಂತೆ ಪುರಸಭೆ ಮುಖ್ಯಾಧಿಕಾರಿ ನಾಗರಾಜ್ ನಾಯ್ಕ ಅವರಿಗೆ ಆದೇಶಿಸಿದರು.
ಸಿಬ್ಬಂದಿಗಳ ನಿರ್ಲಕ್ಷ್ಯತನಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಶೀಘ್ರ ಹಾಜರಾತಿ, ಸಮಯ ಪ್ರಜ್ಞೆ ಹಿತದೃಷ್ಟಿಯಿಂದ ತಕ್ಷಣ ಬಯೊಮೆಟ್ರಿಕ್ ಯಂತ್ರ ಅಳವಡಿಸಲು ಸೂಚಿಸಿದರು.ಪುರಸಭೆ ಮುಖ್ಯಾಧಿಕಾರಿ ನಾಗರಾಜ್ ನಾಯ್ಕ, ಸಿಬ್ಬಂದಿಗಳಿದ್ದರು.