ನ.16ಕ್ಕೆ ‘ಸುರ್ ಸುರ್ ಬತ್ತಿ’ ಚಿತ್ರ ತೆರೆಗೆ

0
26

ದಾವಣಗೆರೆ:

        ರಂಗಭೂಮಿ ಕಲಾವಿದ, ಕಿರುತೆರೆ ನಟ ಆರ್ವ ನಾಯಕ ನಟನಾಗಿ ಅಭಿನಯಿಸಿರುವ ‘ಸುರ್ ಸುರ್ ಬತ್ತಿ’ ಚಿತ್ರವು ನ.16ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

        ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಆರ್ವ, ರಾಜ್ಯದ 120ರಿಂದ 150 ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಾಣಲಿದ್ದು, ಮುಗಿಲ್ ಅವರ ನಿರ್ದೇಶನದಲ್ಲಿ ನಿರ್ಮಾಣವಾಗಿರುವ ಸುರ್ ಸುರ್ ಬತ್ತಿ ಚಿತ್ರ ಹಾಸ್ಯ ಪ್ರಧಾನವಾಗಿದ್ದು, ಈ ಚಿತ್ರದ ಟ್ರೇಲರ್‍ಗೆ ಉತ್ತಮ ಪ್ರತಿಕ್ರಿಯೆ ಆಗುತ್ತಿದೆ ಎಂದು ಹೇಳಿದರು.

        ಚಿತ್ರದಲ್ಲಿ ಬಹುಭಾಷ ನಟಿ ಊರ್ವಶಿ ನಾಯಕನ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಸ್ಯ ನಟ ಸಾಧು ಕೋಕಿಲ, ನಟಿ ವೈಷ್ಣವಿ ಮೆನನ್ ಸೇರಿದಂತೆ ದೊಡ್ಡ ತಾರ ಬಳಗವೇ ಅಭಿನಯಿಸಿದೆ. ನಾನು ನಾಯಕನಟನಾಗಿ ಆಭಿನಯಿಸಿದ ಎರಡನೇ ಚಿತ್ರವಾಗಿದ್ದು, ಈ ಚಿತ್ರಕ್ಕೆ ನನ್ನ ಆಯ್ಕೆಗೆ ಸಾಕಷ್ಟು ಸವಾಲುಗಳಿದ್ದರೂ ನಿರ್ದೇಶಕರು ಕಿರುತೆರೆಯ ನನ್ನ ಆಭಿನಯ ಮೆಚ್ಚಿ ಆಯ್ಕೆ ಮಾಡಿದ್ದಾರೆ. ಅವರ ನಿರೀಕ್ಷೆಗೆ ಮೀರಿ ಚಿತ್ರದಲ್ಲಿ ಉತ್ತಮವಾಗಿ ಅಭಿನಯಿಸಿದ್ದೇನೆ. ಹೊಸಬರ ಚಿತ್ರಗಳಿಗೆ ಪ್ರೇಕ್ಷಕರ ಪ್ರೋತ್ಸಾಹ ಅವಶ್ಯವಾಗಿದೆ. ಆದ್ದರಿಂದ ಎಲ್ಲರೂ ಚಿತ್ರ ನೋಡಿ ಆಶೀರ್ವದಿಸಬೇಕೆಂದು ಮನವಿ ಮಾಡಿದರು.

        ಚಿತ್ರದ ನಿರ್ದೇಶಕ ಮುಗಿಲ್ ಮಾತನಾಡಿ, ಸುರ್ ಸುರ್ ಬತ್ತಿ ಚಿತ್ರವು ಒಂದು ಹಾಸ್ಯಪ್ರಧಾನ ಚಿತ್ರವಾಗಿದೆ. ತಾಯಿ, ಮಗನ ವಾತ್ಯಲ್ಸ, ಪ್ರೀತಿ, ಪೇಮದ ಅಂಶಗಳನ್ನುಒಳಗೊಂಡಿದೆ. ಕಥೆ ಅತ್ಯಂತ ಸರಳವಾಗಿ ಎಣೆದಿದ್ದು, ನಗಿಸುವ ಪ್ರಯತ್ನ ಮಾಡಲಾಗಿದೆ. ಮೂರು ಜನ ಅನಾಥರ ಮಧ್ಯೆ ನಡೆಯುವ ಕಥೆಯಾಗಿದ್ದು, ಸಮಯವೇ ಚಿತ್ರದಲ್ಲಿ ವಿಲನ್ ಆಗಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here