ಹುಳಿಯಾರು:
ಪಠ್ಯ ಶಿಕ್ಷಣದೊಂದಿಗೆ ಪ್ರಾಪಂಚಿಕ ಜ್ಞಾನ ಅರಿಯಲು ಹಾಗೂ ಸಾಮಾಜದೊಂದಿಗೆ ಹೊಂದಿಕೊಳ್ಳುವಿಕೆಯ ಗುಣ ಕಲಿಯು ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಸಿ.ಸಿದ್ದರಾಮಯ್ಯ ಹೇಳಿದರು.ವಾರ್ಷಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
ಹುಳಿಯಾರು–ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಚಿಕ್ಕಬಿದರೆ ಗ್ರಾಮದಲ್ಲಿ ಒಂದು ವಾರ ನಡೆಯುವ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಅಧುನಿಕ ಜಗತ್ತಿನಲ್ಲಿ ವಿಫುಲವಾದ ಅವಕಾಶಗಳಿದ್ದಂತೆ ಸ್ಪರ್ದೆಯೂ ಅಧಿಕವಿದೆ ಸಂಪೂರ್ಣ ಜ್ಞಾನ ಸಂಪನ್ನ ವ್ಯಕ್ತಿ ಮಾತ್ರ ಅಭಿವೃದ್ಧಿ ಹೊಂದಲು ಅವಕಾಶ ಲಭಿಸುತ್ತದೆ. ಪಠ್ಯೇತರ ಜ್ಞಾನ ಸಂಪನ್ನತೆಗೆ ರಾಷ್ಟ್ರೀಯ ಸೇವಾ ಯೋಜನೆ ಬಹಳ ಪೂರಕವಾಗಿದೆ ಎಂದರು.
ಪ್ರಾಂಶುಪಾಲ ಪ್ರಸನ್ನಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಗ್ರಾಮದಲ್ಲಿ ಮಾಡುವ ಕೆಲಸಗಳು ಗ್ರಾಮಸ್ಥರಿಗೆ ಮಾದರಿಯಾಗಬೇಕು. ಒಂದು ವಾರ ಉತ್ತಮವಾಗಿ ಕೆಲಸ ಮಾಡಿ ಗ್ರಾಮಸ್ಥರ ಮೆಚ್ಚುಗೆ ಪಡೆಯಬೇಕು. ಯಾವುದೇ ಅವಘಡಗಳಿಗೆ ಆಸ್ಪದ ನೀಡಬಾರದು ಎಂದರು.ಸೇವಾ ಯೋಜನೆಯ ಶಿಬಿರಾಧಿಕಾರಿ ಶಶಿಭೂಷಣ್, ಸಹಶಿಬಿರಾಧಿಕಾರಿ ನಟರಾಜು, ಉಪನ್ಯಾಸಕರಾದ ಮಲ್ಲಿಕಾರ್ಜುನ್, ಯೋಗೀಶ್, ನಾರಾಯಣ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ