ಹರಪನಹಳ್ಳಿ:
ಸರಳತೆ ಮತ್ತು ಪ್ರಾಮಾಣಿಕತೆ ಬದುಕಿಗೆ ಮುಖ್ಯ ಭಾಗಗಳು. ವಿದ್ಯಾರ್ಥಿ ದೆಶೆಯಲ್ಲೇ ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ರಾಣೆಬೆನ್ನೂರು ತಾಲ್ಲೂಕಿನ ಸುಣಕಲ್ಲ ಬಿದರಿ ಸದ್ಗುರು ಶಿವಾನಂದ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಚ್.ಶಿವಾನಂದ ಹೇಳಿದರು.
ತಾಲ್ಲೂಕಿನ ಹಾರಕನಾಳು ಗ್ರಾಮದಲ್ಲಿ ಎಚ್.ಪಿ.ಎಸ್ ಪಿಯ ಕಾಲೇಜು ವತಿಯಿಂದ ಹಮ್ಮಿಕೊಂಡಿರುವ ಎನ್.ಎಸ್.ಎಸ್. ವಾರ್ಷಿಕ ಶಿಬಿರದ ನಾಲ್ಕನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎನ್ನೆಸ್ಸೆಸ್ ಗಾಂಧೀಜಿ ಕಂಡ ಕನಸುಗೊಳಿಸುವುದು ಎನ್ನೆಸ್ಸೆಸ್ ಉದ್ದೇಶ. ಎನ್ನೆಸ್ಸೆಸ್ ಎಂದರೆ `ನಾನು ಸದಾ ಸಿದ್ಧ’ ಅಥವಾ `ನಾನು ಶಿಸ್ತಿನ ಸಿಪಾಯಿ’ ಎಂದು ಅರ್ಥೈಸಬಹುದು. `ಎನ್ನೆಸ್ಸೆಸ್ ದೇಶ ಕಟ್ಟಿದರೆ, `ಎನ್.ಸಿ.ಸಿ ದೇಶ ರಕ್ಷಿಸುತ್ತದೆ. ಗ್ರಾಮೀಣ ಬದುಕಿನ ಚಿತ್ರಣದ ಅರಿವಿಗಾಗಿ ಶಿಬಿರದಲ್ಲಿ ಪಾಲ್ಗೊಳ್ಳುವುದು ಅತ್ಯವಶ್ಯ ಎಂದರು.
ಕನ್ನಡ ಉಪನ್ಯಾಸಕ ಮಂಜುನಾಥ ಮಾಳ್ಗಿ ಮಾತನಾಡಿ, ಸ್ವಚ್ಛತೆ ರೋಗರುಜಿನಗಳಿಂದ ದೂರವಿಡುತ್ತದೆ. ಕಸವನ್ನು ಎಲ್ಲೆಂದರಲ್ಲಿ ಬೀಸಾಕದೇ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮನೆಯ ಸುತ್ತಲಿನ ವಾತಾವರಣ ಶುಚಿಯಾಗಿದ್ದಲ್ಲಿ ಮಕ್ಕಳು ಆರೋಗ್ಯವಂತರಾಗಿ ಬೆಳೆಯಲು ಸಾಧ್ಯ ಎಂದರು.
ಮಾಧ್ಯಮ ಕುರಿತು ವಿಷಯ ಕುರಿತು ಉಪನ್ಯಾಸ ನೀಡಿದ ಮಂಜ್ಯಾನಾಯ್ಕ್, ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸುವಲ್ಲಿ ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳ ಪಾತ್ರ ಅಪಾರ. ತಂತ್ರಜ್ಞಾನ ಬೆಳೆದಂತೆ ಮಾಧ್ಯಮ ಕ್ಷೇತ್ರ ವಿಸ್ತಾರಗಳ್ಳುತ್ತಿದೆ. ಮಾಧ್ಯಮ ಕ್ಷೇತ್ರ ವೃತ್ತಿಯಾಗಿ ಉಳಿಯದೇ ಉದ್ಯಮವಾಗಿ ಪರಿವರ್ತನೆಯಾಗುತ್ತಿದೆ. ಹೀಗಿದ್ದರೂ ಮಾಧ್ಯಮ ರಂಗ ಸಾಮಾಜಿಕ ಜವಾಬ್ದಾರಿ ಮರೆತ್ತಿಲ್ಲ ಎಂದರು.
ಶಿಬಿರಾಧಿಕಾರಿ, ಡಿ.ಸಿ.ಪ್ರದೀಪ್, ಉಪನ್ಯಾಸಕರಾದ ಬಿ.ಓ.ಸುಧಾ, ಅರುಣ್ ಕುಮಾರ್, ಗ್ರಾಮ ಪಂಚಾಯ್ತಿ ಸದಸ್ಯರಾದ ನಿಂಗಪ್ಪ, ಪಂಪನಾಯ್ಕ, ಕೊಟ್ರಬಸಯ್ಯ, ಮಂಜುನಾಥ, ಪ್ರಕಾಶ ಗೌಡರು, ಕಲ್ಲನಗೌಡ್ರು, ಶೆಟ್ಟರ್ ವೀರೇಶ್, ಶಿವಕುಮಾರ್, ನಾಗಪ್ಪ ಇವರೂ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
