ಚಿತ್ರದುರ್ಗ
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ 24 ರಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿಜಯಂತಿಆಚರಣೆ ಪೂರ್ವಭಾವಿ ಸಭೆಯಲ್ಲಿಅಧ್ಯಕ್ಷತೆ ವಹಿಸಿ ಸಿದ್ದತೆ ಬಗ್ಗೆ ಪರಿಶೀಲನೆ ನಡೆಸಿದರು.ಮಹರ್ಷಿ ವಾಲ್ಮೀಕಿಜಯಂತಿಯನ್ನು ಸರ್ಕಾರದಿಂದಆಚರಿಸಲಾಗುತ್ತಿದೆ.ಪ್ರತಿ ವರ್ಷದಂತೆ ಮೆರವಣಿಗೆ, ವೇದಿಕೆ ಕಾರ್ಯಕ್ರಮವನ್ನುಆಯೋಜಿಸಲಾಗುತ್ತದೆ.
ಮಹರ್ಷಿ ವಾಲ್ಮೀಕಿಯವರ ಭಾವಚಿತ್ರದೊಂದಿಗೆ ಕಲಾತಂಡಗಳ ಜೊತೆ ಮೆರವಣಿಗೆಯನ್ನು ಕನಕವೃತ್ತದಿಂದ ಬೆಳಗ್ಗೆ 10.30 ರಿಂದಆರಂಭವಾಗಲಿದೆ. ಕನಕ ವೃತ್ತದಿಂದ ಆರಂಭ ಮಾಡುವುದರಿಂದ ಟ್ರಾಫಿಕ್ ಸಮಸ್ಯೆ, ವಾಹನ ನಿಲುಗಡೆಗೆ ಸಮಸ್ಯೆಯಾಗುವುದಿಲ್ಲ. ಕಳೆದ ಎರಡು ಭಾರಿಕೋಟೆ ಮುಂಭಾಗ, ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿಂದ ಮೆರವಣಿಗೆಯನ್ನು ನಡೆಸಲಾಗಿತ್ತು ಎಂದು ಕೆಲವು ಮುಖಂಡರು ಸಭೆಯಲ್ಲಿ ಮೆರವಣಿಗೆ ಪ್ರಾರಂಭಿಸುವ ಸ್ಥಳದ ಬಗ್ಗೆ ಪ್ರಸ್ತಾಪಿಸಿದರು.
ಅಂತಿಮವಾಗಿ ಮೆರವಣಿಗೆಯನ್ನು ಕನಕವೃತ್ತದಿಂದ ಪ್ರಾರಂಭಿಸಲು ತೀರ್ಮಾನಿಸಿ ವೇದಿಕೆ ಕಾರ್ಯಕ್ರಮವನ್ನು ಹಳೆ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಅ.24 ರ ಮಧ್ಯಾಹ್ನ 1 ಗಂಟೆಗೆಆರಂಭಿಸಲಾಗುತ್ತದೆ.ವೇದಿಕೆ ಕಾರ್ಯಕ್ರಮವನ್ನು ಶಿಷ್ಟಾಚಾರದಂತೆ ನಡೆಸಲಿದ್ದು ಮಹರ್ಷಿ ವಾಲ್ಮೀಕಿಯವರಕುರಿತಂತೆ ಈ ಭಾರಿ ಸರ್ಕಾರಿ ಕಲಾ ಕಾಲೇಜಿನ ಸ್ನಾತಕೋತ್ತರಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾಗಿರುವ ಡಾ; ಪ್ರೇಮಪಲ್ಲವಿ ಉಪನ್ಯಾಸ ನೀಡಲಿದ್ದಾರೆ.
ವೇದಿಕೆಯನ್ನು ನಗರಸಭೆಯಿಂದ ನಿರ್ಮಾಣ ಮಾಡಲಿದ್ದು ಕುಡಿಯುವ ನೀರಿನ ವ್ಯವಸ್ಥೆ ಮಾಡಲು ತಿಳಿಸಲಾಯಿತು. ಆಗಮಿಸುವ ಜನರಿಗೆ ಊಟ, ಮೆರವಣಿಗೆಗೆ ಸಾರೋಟ ವ್ಯವಸ್ಥೆಯನ್ನು ಸಂಘದಿಂದ ಮಾಡಲಾಗುತ್ತದೆ ಎಂದು ಮುಖಂಡರು ಸಭೆಗೆ ತಿಳಿಸಿದರು.
ವಾಲ್ಮೀಕಿ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಆಗಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಲು ಮುಖಂಡರ ಪ್ರಸ್ತಾಪಕ್ಕೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ರಾಜು ಮಾತನಾಡಿ 9.45 ಕೋಟಿ ರೂ.ಗಳಲ್ಲಿ ವಾಲ್ಮೀಕಿ ಭವನ ನಿರ್ಮಾಣ ಮಾಡಲಾಗುತ್ತಿದ್ದು ಕ್ರೈಸ್‍ನಿಂದ ಟೆಂಡರ್‍ಕರೆಯಲಾಗಿತ್ತು.ಆದರೆ ಗುತ್ತಿಗೆದಾರರು ಅಕಾಲಿಕ ಮರಣ ಹೊಂದಿದ್ದರಿಂದ ಮರುಟೆಂಡರ್‍ಕರೆದು ಅಂತಿಮಗೊಳಿಸಿರುವುದರಿಂದ ಸ್ವಲ್ಪ ವಿಳಂಬವಾಗಿದೆ.
ಈಗಾಗಲೇ ಇಲ್ಲಿನ ಹಳೆ ಮರಮುಟ್ಟು, ಕಬ್ಬಿಣ ಸೇರಿದಂತೆ ಪರಿಕರಗಳನ್ನು ಹರಾಜು ಮೂಲಕ ವಿಲೆ ಮಾಡಿ ಹಳೆ ಕಟ್ಟಡವನ್ನು ಸಂಪೂರ್ಣತೆರವು ಮಾಡಲಾಗಿದೆ.ಮುಂದಿನ 15 ದಿನಗಳಲ್ಲಿ ಕಟ್ಟಡಕಾಮಗಾರಿಆರಂಭವಾಗಲಿದೆಎಂದರು.ಸಭೆಯಲ್ಲಿ ಉಪವಿಭಾಗಾಧಿಕಾರಿ ವಿಜಯಕುಮಾರ್, ತಹಶೀಲ್ದಾರ್ ಮಲ್ಲಿಕಾರ್ಜುನ್, ಮುಖಂಡರಾದ ಹೆಚ್.ಜಿ.ಕೃಷ್ಣಮೂರ್ತಿ, ಬಿ.ಕಾಂತರಾಜ, ನಗರಸಭೆ ಸದಸ್ಯರಾದ ವೆಂಕಟೇಶ್, ದೀಪಕ್‍ಕುಮಾರ್, ಮುಖಂಡರಾದ ಬೋರಯ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
