ನ. 22 ರಿಂದ ನ. 30ರವರೆಗೆ ತಾಲೂಕು ಮಟ್ಟದ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ- ಹಜರತ್‍ ಅಲಿ

ಜಗಳೂರು :

        ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನ. 22 ರಿಂದ ನ. 30ರವರೆಗೆ ತಾಲೂಕು ಮಟ್ಟದ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾ.ಕ.ಸಾ.ಪ.ಅಧ್ಯಕ್ಷ ಅಧ್ಯಕ್ಷರ ಹಜರತ್‍ಅಲಿ ಹೇಳಿದರು.ಪಟ್ಟಣದ ವಿದ್ಯಾನಗರದಲ್ಲಿರುವ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.ಪಟ್ಟಣದ ಜೆ.ಎಂ. ಇಮಾಂ ಸ್ಮಾರಕ ಆಂಗ್ಲ ಪ್ರೌಢಶಾಲೆಯಲ್ಲಿ ನ. 22 ರಿಂದ ನ. 30ರವರೆಗೆ ಶಾಲಾ, ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ ಹಾಗೂ ದತ್ತಿ ಉಪನ್ಯಾಸಗಳು ಮತ್ತು ತಾಲೂಕು ಮಟ್ಟದ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿದೆ.

           ನ. 22 ರಂದು ಪ್ರಾರಂಭವಾಗುವ ಕಾರ್ಯಕ್ರಮವನ್ನು ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಉದ್ಘಾಟಿಸಲಿದ್ದು, ಕಾರ್ಯಕ್ರಮದಲ್ಲಿ ಜಿಲ್ಲಾ ಕ.ಸಾ.ಪ ಅಧ್ಯಕ್ಷ ಹೆಚ್.ಎಸ್.ಮಂಜುನಾಥಕುರ್ಕಿ, ಜಿಲ್ಲಾ ಕ.ಸಾ.ಪ.ಮಾಜಿ ಅಧ್ಯಕ್ಷ ಎಂ.ಜಿ.ಈಶ್ವರಪ್ಪ, ತಾಲೂಕು ಕ.ಸಾ.ಪ. ಮಾಜಿ ಅಧ್ಯಕ್ಷ ಜಿ.ಎಸ್.ಸುಭಾಸ್‍ಚಂದ್ರಭೊಸ್, ಜೆ.ಕೆ.ಹುಸೇನ್‍ಮಿಯಾಸಾಬ್, ಬಸವರಾಜ್ ಹನುಮಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಯುವರಾಜನಾಯ್ಕ, ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷೆ ಎ.ಎಲ್.ಪುಷ್ಪಾಲಕ್ಷ್ಮಣಸ್ವಾಮಿ, ಪ್ರಾ.ಶಾ.ಶಿಕ್ಷಕರ ಸಂಘದ ಅಧ್ಯಕ್ಷ ಶಾಮಣ್ಣ, ವಿಶೇಷ ಆಹ್ವಾನಿತರಾಗಿ ಪ್ರೌ.ಶಾ.ಸಹ ಶಿಕ್ಷಕರ ಸಂಗದ ಅಧ್ಯಕ್ಷ ಎಲ್.ಟಿ.ಬಸವರಾಜ್, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿದಾನಂದ ಜಿ.ಎಸ್., ವರ್ತಕರಾದ ಬೆಲ್ಲದ ಬಸವರಾಜ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

         ದಿನಾಂಕ 30-11-2018 ರ ಶುಕ್ರುವಾರ ಸಮಾರೋಪ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಶಾಸಕ ಎಸ್.ವಿ.ರಾಮಚಂದ್ರ, ಸ.ಪ.ಪೂ.ಕಾಲೇಜುನ ಪ್ರಾಚಾಯ್ ಸಿ.ಪಿ.ಜಗದೀಶ್ ಸಭೆಯ ಅಧ್ಯಕ್ಷತೆಯನ್ನು, ಡಾ.ಕೆ.ರುದ್ರಪ್ಪ, ಜಿ.ಎನ್.ಶಿವನಗೌಡ,ಟಿ.ದೇವೇಂದ್ರಪ್ಪ,ಎಸ್. ಆನಂದಪ್ಪ ಮುಖ್ಯ ಅತಿಥಿಗಳಾಗಿ ಬಾಗವಹಿಸಲಿದ್ದಾರೆ.ಮಾಜಿ ಜಿ.ಪಂ.ಸದಸ್ಯ ಹೆಚ್.ನಾಗರಾಜ್, ಸ.ಪ.ಪೂ.ಕಾ.ಉಪ ಪ್ರಾಂಶುಪಾಲರಾದ ಡಿ.ಡಿ.ಹಾಲಪ್ಪ, ಜನತಾವಾಣಿ ಉಪ ಸಂಪಾದಕರಾದ ಬಿ.ಪಿ.ಸುಬಾನ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.

          ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಎನ್.ಎಸ್.ರಾಜು, ನಾ.ರಾಜಪ್ಪ , ಎಂ.ಎಸ್.ಪಾಟೀಲ್ ,ಜಿ.ಸಿದ್ದಪ್ಪ ದಾನಿಗಳಾಗಿದ್ದಾರೆ. ನಾಳೆಯಿಂದ 29 ರವರೆಗೆ ವಿವಿಧ ಶಾಲಾಕಾಲೇಜುಗಳಲ್ಲಿ ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದವರು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷ ಹೆಚ್.ಎಂ.ಕರಿಬಸಯ್ಯ, ಸದಸ್ಯ ಶಿವಕುಮಾರ್ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap