ಕುಣಿಗಲ್
ವಿದ್ಯಾರ್ಥಿಗಳು ಓದುವ ಸಂದರ್ಭದಲ್ಲಿ ಬಡತನ ಎದುರಾದರೆ ಅದನ್ನು ಹಿಮ್ಮೆಟ್ಟಿಸಿ ಮುನ್ನೆಡೆಯುವಂತಹ ಶಕ್ತಿಯನ್ನು ಪ್ರತಿಯೊಬ್ಬ ವಿದ್ಯಾರ್ಥಿ ಬೆಳೆಸಿಕೊಳ್ಳವ ಮೂಲಕ ಜೀವನ ರೂಪಿಸಿಕೊಳ್ಳಬೇಕೆಂದು ತಹಸೀಲ್ದಾರ್ ವಿ.ಆರ್. ವಿಶ್ವನಾಥ್ ಕಿವಿಮಾತು ಹೇಳಿದರು.
ಪಟ್ಟಣದ ಜ್ಞಾನ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ ಹಿರಿಯ ವಿದ್ಯಾರ್ಥಿಗಳಿಂದ ಕಿರಿಯರಿ ವಿದ್ಯಾರ್ಥಿಗಳಿಗೆ ಸ್ವಾಗತ ಕೊರುವ ಹಾಗೂ ಸಸಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿ ಜೀವನದಲ್ಲಿ ಶ್ರಮದ ಜೊತೆಯಲ್ಲಿ ಮಾನಸಿಕ ಸೀಮಿತವನ್ನು ಕಳೆದುಕೊಳ್ಳಬಾರದು, ಯಾವುದೇ ಒಂದು ಕಹಿ ಘಟನೆ ಹಾಗೂ ತಿರಸ್ಕಾರದ ಮಾತುಗಳು, ನಿಮ್ಮ ಬಧುಕನ್ನು ನಿರ್ಧರಿಸುವುದಿಲ್ಲ, ಇದಕ್ಕೆ ಓದುವ ಶಕ್ತಿ ಮತ್ತು ಶ್ರದ್ದೆ ಅವಶ್ಯಕವಾಗಿದ್ದು, ಇವೆರೆಡನ್ನೂ ನಿಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಂಡರೇ ಯಾವುದೇ ಪ್ರತಿಬಂಧಕಗಳಿಗೆ ನಿಂತ ನೀರಾಗದೇ ಸುಸೂತ್ರವಾಗಿ ಸಾಗಲು ಸಾಧ್ಯವಾಗುತ್ತದೆ.
ಶಾಲಾ ಜೀವನಕ್ಕೂ ಕಾಲೇಜಿನ ಜೀವನಕ್ಕೂ ವ್ಯತ್ಯಾಸವಿದೆ, ಕಾಲೇಜಿನ ಜೀವನ ಚಿನ್ನದ ಜೀವನ ಇದ್ದಂತೆ, ಇಲ್ಲಿ ನಿಮ್ಮ ಮನಸ್ಸನ್ನು ಸೀಮಿತವಾಗಿ ಇಟ್ಟುಕೊಂಡು, ಸಾಮಥ್ರ್ಯದ ಬಗ್ಗೆ ನಂಬಿಕೆ ಇಟ್ಟುಕೊಳ್ಳಬೇಕು ಆಗ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯವೆಂದರು. ಮೋಬೈಲ್ ಹಾಗೂ ಟಿ.ವಿಯಿಂದ ಆದಷ್ಟು ದೂರ ಉಳಿದು ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಬೇಕೆಂದ ಅವರು ಶಿಕ್ಷಕರು ಮಕ್ಕಳೋಟ್ಟಿಗೆ ಇದ್ದುಕೊಂಡು ಅವರ ಸಾಧನೆಯನ್ನು ಕಣ್ಣತುಂಬಿಕೊಂಡು, ಖುಷಿ ಪಡುವ ಶಿಕ್ಷಕ ವೃತ್ತ ಪವಿತ್ರ ಹಾಗೂ ಧನ್ಯತಾ ಭಾವದ್ದಾಗಿದೆ, ಶಿಕ್ಷಕರ ವೃತ್ತಿಯಲ್ಲಿ ಸಿಗುವ ತೃಪ್ತಿ ಬೇರೊಂದರಲ್ಲಿ ಸಿಗುವುದಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಶಿಕ್ಷಕರು ಹೇಳುಕೊಡುವ ಪಾಠ ಪ್ರವಚನವನ್ನು ಶ್ರದ್ದೆ, ಭಕ್ತಯಿಂದ ಕೇಳಿ ಅದನ್ನು ಮನನ ಮಾಡಿಕೊಳ್ಳಬೇಕೆಂದರು.
ಪ್ರಕೃತಿಯೂ ಮಾನವನಿಗೆ ಏನೆಲ್ಲಾ ಕೊಡುತ್ತದೆ, ಆದರೆ ನಾವು ಪ್ರಕೃತಿಗೆ ಏನು ಕೊಡುತ್ತಿದ್ದೇವೆ ಎಂದು ಪ್ರಶ್ನಿಸಿದ ವಿಶ್ವನಾಥ್ ಮನುಷ್ಯನ ಸ್ವಾರ್ಥಕ್ಕೆ ಪರಿಸರವನ್ನು ನಾಶ ಮಾಡಲಾಗುತ್ತಿದೆ, ಹೀಗಾಗಿ ಪಟ್ಟಣ ನಗರ ಪ್ರದೇಶಗಳು ಕಲುಷಿತಗೊಂಡಿದೆ. ಇಲ್ಲಿನ ಜನ ಜೀವನದ ಬಧುಕು ನರಕಯಾತನೆಯಾಗಿದೆ, ಉತ್ತಮ ಗಾಳಿ, ಶುದ್ದ ಕುಡಿಯುವ ನೀರು ಸಿಗುತ್ತಿಲ್ಲ, ಆರೋಗ್ಯವಂತರ ಏಳ ತೀರದ್ದಾಗಿದೆ. ಇದನ್ನು ತಡೆಗಟ್ಟಬೇಕಾದರೆ, ಪ್ರತಿಯೊಬ್ಬರು ಮರಗಿಡಗಳನ್ನು ಪೋಷಿಸಿ ಬೆಳೆಸಬೇಕಂದರು.
ಒಕ್ಕಲಿಗರ ಸಂಘದ ಕಾರ್ಯದರ್ಶಿ ಜಿ.ಕೆ ಅನಂತಯ್ಯ, ಖಜಾಂಚಿ ಗಂಗಶಾನಯ್ಯ, ಪ್ರಾಚಾರ್ಯ ಗೋವಿಂದೇಗೌಡ, ಕಾಲೇಜು ಪ್ರಾಚಾರ್ಯ ಕಪನಿಪಾಳ್ಯ ಡಾ.ರಮೇಶ್, ಸೇವಾ ಭಾಗ್ಯ ಪೌಡೇಂಷನ್ ಗುರುಚರಣ್‍ಸಿಂಗ್, ದಲಿತ್‍ನಾರಾಯಣ್, ವಿನೋದ್‍ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.