ತಮಿಳುನಾಡು ಚಂಡಮಾರುತ ಸಂತ್ರಸ್ಥರಿಗೆ ಸ್ವಾಮಿ ಜಪಾನಂದಜೀ ತಂಡದಿಂದ ನೆರವು

 ತುಮಕೂರು  : 

      ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಇನ್ಫೋಸಿಸ್ ಫೌಂಡೇಶನ್ ನೆರವಿನೊಂದಿಗೆ ಪರಿಹಾರ ವಿತರಿಸಿದ ಸಂತ್ರಸ್ತರಿಗೆ ಸ್ಪಂದಿಸಿದ್ದ ಪಾವಗಡದ ಸ್ವಾಮಿ ಜಪಾನಂದಜೀ ಅವರ ನೇತೃತ್ವದ ಸ್ವಾಮಿ ವಿವೇಕಾನಂದ ತಂಡ ಸದ್ಯ ನಿವಾರ್ ಚಂಡಮಾರುತದ ಹೊಡೆತದಿಂದ ತತ್ತರಿಸಿರುವ ತಮಿಳುನಾಡಿನ ಅತ್ಯಂತ ಹಿಂದುಳಿದ ಕಡಲೂರು ಜಿಲ್ಲೆಯ ಗುಡಿಸಲುವಾಸಿಗಳಿಗೆ ಮಳೆಯನ್ನು ಲೆಕ್ಕಿಸದೆ ಪರಿಹಾರ ವಿತರಣೆ ಕಾರ್ಯ ಮಾಡುತ್ತಿದೆ.

      ತಂಡದ ಸೇವಾ ಕಾರ್ಯಕ್ಕೆ ಕಡಲೂರಿನ ಜನತೆ ಮೆಚ್ಚುಗೆ ಅಚ್ಚರಿ ವ್ಯಕ್ತಪಡಿಸುತ್ತಿದ್ದು, ದೋ ಎಂದು ಸುರಿಯುವ ಮಳೆಯ ನಡುವೆಯೂ ಕುಂಡುಸಲೈ, ಪಿ.ಎನ್.ಪಾಳ್ಯಂ, ಇರುಳೂರು ಕಾಲೋನಿ, ಹಾಗೂ ಸಮುದ್ರ ತೀರದ ಕೊಂಗರಯನ್ನೂರ್ಗಳಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದಾರೆ. ನಿಹಾರ್ ಜೊತೆಗೆ ಪುರವಿ ಚಂಡಮಾರುತ ಸಹ ಅಪ್ಪಳಿಸುತ್ತಿದ್ದು ಪರಿಹಾರ ಕಾರ್ಯ ವಿತರಣೆಗೆ ಅಡ್ಡಿಯಾಗುತ್ತಿದೆ.

      ಆದರೂತಂಡದ ಸದಸ್ಯರು ಸೈನಿಕರಂತೆ ಸ್ಥಳೀಯ ಅಧಿಕಾರಿಗಳಾದ ಮಹೇಶ್ ಹಾಗೂ ರಾಮಪ್ರಸಾದ್ ರವರ ಸಹಕಾರದಿಂದ ಅತ್ಯಂತ ಹೀನ ಸ್ಥಿತಿಯಲ್ಲಿರುವ ಚಂಡಮಾರುತದಿಂದ ತತ್ತರಿಸಿರುವ ಜನರಿಗೆ ಸೊಳ್ಳೆಪರದೆ, ಟಾರ್ಪಾಲಿನ್, ದಿನಸಿ ಹಾಗೂ ವಸ್ತ್ರಗಳನ್ನೊಳಗೊಂಡ ಪರಿಹಾರ ಪ್ಯಾಕೇಟುಗಳನ್ನು 500 ಕುಟುಂಬಗಳಿಗೆ ವಿತರಿಸಿದ್ದಾರೆ. ಈ ಪರಿಹಾರ ಕಾರ್ಯಕ್ಕೆ ನೆರವಾದ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಡಾ.ಸುಧಾಮೂರ್ತಿ ಅವರ ಕೊಡುಗೆಯನ್ನು ಶ್ರೀಗಳು ಸ್ಮರಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link