ದೇವಾಲಯಗಳಲ್ಲಿ ಇಂದಿನಿಂದ ಪೂಜಾ ಕೈಂಕರ್ಯಗಳು ಪ್ರಾರಂಭ..!

ಬೆಂಗಳೂರು

    ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲಾ ಅಧಿಸೂಚಿತ ಮುಜರಾಯಿ ದೇವಾಲಯಗಳಲ್ಲಿ ಇಂದಿನಿಂದ ವಿವಿಧ ಪೂಜೆ ಮತ್ತು ಸೇವಾ ಕಾರ್ಯಗಳನ್ನು ಪುನರಾರಂಭಿಸಲಾಗಿದೆ.

    ಈ ಕುರಿತು ಮುಜರಾಯಿ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದು, ಆಯಾ ದೇವಾಲಯಗಳ ಸಂಪ್ರದಾಯಗಳಿಗೆ ಅನುಸಾರ ಸೇವಾ ಕಾರ್ಯಗಳನ್ನು ಕೈಗೊಳ್ಳಬಹುದಾಗಿದೆ.ಸೋಂಕು ನಿಯಂತ್ರಣ ಕ್ರಮಗಳ ಪರಿಪಾಲನೆಯೊಂದಿಗೆ ಸೇವಾ ಕಾರ್ಯಗಳನ್ನು ಕೈಗೊಳ್ಳಲು ಅವಕಾಶ ನೀಡಲಾಗಿದೆ. ದೇವಾಲಯಗಳಲ್ಲಿ ಜಾತ್ರಾ ಉತ್ಸವಗಳು, ಬ್ರಹ್ಮರಥೋತ್ಸವ ಮುಂತಾದ ವಿಶೇಷ ಉತ್ಸವಗಳನ್ನು ಸಾರ್ವಜನಿಕವಾಗಿ ನಡೆಸುವುದನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.ಇಂತಹ ಉತ್ಸವಗಳನ್ನು ದೇವಾಲಯದ ಆವರಣದೊಳಗೆ ಜನಸಂದಣಿ ಇಲ್ಲದಂತೆ ನಡೆಸಬಹುದು. ಜನರನ್ನು ಸೇರಿಸುವಂತಿಲ್ಲ ಎಂದು ಹೇಳಿದೆ.

   ಸೋಂಕು ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಣೆ ಮಾಡಿರುವ ಕುರಿತಂತೆ ಸಂಬಂಧಪಟ್ಟ ಉಪ ವಿಭಾಗಾಧಿಕಾರಿಗಳು ಮತ್ತು ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರು ಪರಿಶೀಲಿಸಿ, ಕ್ರಮ ಕೈಗೂಳ್ಳಬೇಕು. ಜತೆಗೆ ಮುಜರಾಯಿ ಇಲಾಖೆ ಆಯುಕ್ತರಿಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap