ತುಮಕೂರು:
ದೇಶವನ್ನೆ ಬೆಚ್ಚಿ ಬೀಳಿಸಿರುವ ಮಹಾಮಾರಿ ಕರೋನ ವೈರಸ್, ಕರ್ನಾಟಕದಲ್ಲೂ ಕಂಡು ಬಂದಿದ್ದು ಸರ್ಕಾರ ಸಾಧ್ಯವಾದಷ್ಟು ಮುಂಜಾಗ್ರತೆ ಕ್ರಮಗಳನ್ನ ತೆಗೆದುಕೊಂಡಿದೆಯಾದರು ಅಧಿಕಾರಿಗಳ ಬೇಜವಾಬ್ದಾರಿಗಳಿಂದ
ಸಾರ್ವಜನಿಕ ಸ್ಥಳದಲ್ಲಿ ಥರ್ಮಲ್ ಸ್ಕ್ಯಾನ್ ಕಡ್ಡಾಯವಾಗಿ ಮಾಡಲಾಗುತ್ತಿದೆ. ಇದೇ ರೀತಿ ತುಮಕೂರು ರೈಲ್ವೆ ನಿಲ್ದಾಣದಲ್ಲಿ ಪ್ರಾಯಾಣಿಕರ ಥರ್ಮಲ್ ಸ್ಕ್ಯಾನ್ ಮಾಡಲು ಹಿರಿಯ ಆರೋಗ್ಯ ಸಹಾಯಕ ನರಸಿಂಹಮೂರ್ತಿ ರವರನ್ನು ನೇಮಕ ಮಾಡಲಾಗಿತ್ತು.
ನಿನ್ನೆ ಮಧ್ಯಾಹ್ನ ಕಾರ್ಯ ನಿರ್ವಹಿಸುವ ವೇಳೆ ಮೊಬೈಲ್ ನಲ್ಲಿ ಮಾತನಾಡುತ್ತಾ ಬೇಕಾಬಿಟ್ಟಿ, ಕಾಟಾಚಾರಕ್ಕೆ ಥರ್ಮಲ್ ಸ್ಕ್ಯಾನ್ ಮಾಡುತ್ತಿದ್ದು, ಇದನ್ನು ಕಂಡ ಸಾರ್ವಜನಿಕರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ ಮಾಡಿದ್ದರು.ಕೆಲವೇ ನಿಮಿಷದಲ್ಲಿ ವೈರಲ್ ಆದ ವೀಡಿಯೋ ತುಮಕೂರು ಡಿ.ಹೆಚ್.ಒ ಡಾ.ಚಂದ್ರಿಕಾ ಅವರ ಗಮನಕ್ಕೆ ಬಂದಿದ್ದು, ತಕ್ಷಣವೇ ವಿಡಿಯೋ ಆದಾರದ ಮೇರೆಗೆ ಹಿರಿಯ ಆರೋಗ್ಯ ಸಹಾಯಕ ನರಸಿಂಹಮೂರ್ತಿ ರವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
