ಹುಳಿಯಾರು
ಹುಳಿಯಾರು ಸರ್ವೆನಂ 67 &70 ರಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿರುವ ಚೆಕ್ ಡ್ಶಾಂ ಕಾಣೆಯಾಗಿದ್ದು ಇವುಗಳನ್ನು ಹುಡುಕಲು ನರೇಗಾ ಯೋಜನೆಯ ಒಂಬುಡ್ಸ್ ಮನ್ ಬರುತ್ತಿದ್ದಾರೆ ಎಂದು ಲಂಚ ಮುಕ್ತ ವೇದಿಕೆಯ ಭಟ್ಟರಹಳ್ಳಿ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಚೆಕ್ ಡ್ಯಾಂ ನಿರ್ಮಿಸದೆ ಬಿಲ್ ಮಾಡಿಕೊಂಡಿದ್ದಾರೆಂದು 18/07/2018 ರಂದು ದೂರು ನಿಡಲಾಗಿತ್ತು. ಆದರೆ ಕೆಲ ಪ್ರಭಾವಿಗಳ ಸಹಕಾರದಿಂದ ಈ ಹಗರಣ ಮುಚ್ಚಿ ಹಾಕುವ ಪ್ರಯತ್ನಗಳು ನಡೆದವು. ಆದರೂ ದೂರುದಾರರ ಒತ್ತಡದ ಪರಿಣಾಮ ಜೂನ್ 27 ರಂದು ಬೆಳಿಗ್ಗೆ 11 ಕ್ಕೆ ತುಮಕೂರಿನ ನರೇಗಾ ಯೋಜನೆಯ ಒಂಬುಡ್ಸ್ ಮನ್ ತನಿಖೆಗೆ ಬರುತ್ತಿದ್ದಾರೆ.
ಈ ಹಗರಣದಲ್ಲಿ ಲೂಟಿಯಾಗಿರುವ ಹುಳಿಯಾರಿನ ಜನತೆಯ ಶ್ರಮದ ಬೆವರಿನ ದುಡಿಮೆಯ ತೆರಿಗೆ ಹಣವನ್ನು ವಸೂಲಿ ಮಾಡಿಸಲೇ ಬೇಕಿದ್ದು ಹುಳಿಯಾರಿನ ಎಲ್ಲಾ ನಾಗರೀಕರು ತಪ್ಪದೇ ಜೂ.27 ರಂದು ಬಂದು ಹೋರಾಟಗಾರರ ಬೆಂಬಲಕ್ಕೆ ನಿಲ್ಲುವಂತೆ ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
