ಗ್ಯಾಸ್ ರಿಪಿಲಿಂಗ್ ವೇಳೆ ಬೆಂಕಿ : ಓಮ್ನಿ ಕಾರು ಭಸ್ಮ.

ಚಳ್ಳಕೆರೆ

    ನಗರದ ಎಚ್‍ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಿಂಭಾಗದಲ್ಲಿ ಪೌರಕಾರ್ಮಿಕರಿಗಾಗಿ ಸುಮಾರು 20ಕ್ಕೂ ಹೆಚ್ಚು ವಾಸದ ಸ್ವಗೃಹಗಳನ್ನು ನಿರ್ಮಿಸಿ ಪೌರಕಾರ್ಮಿಕರಿಗೆ ನೀಡಲಾಗಿದ್ದು, ಪೌರಕಾರ್ಮಿಕರ ಮನೆಯಲ್ಲಿದ್ದ ಅವರ ಬಂಧು ಒಬ್ಬ ಅವರದ್ದೇ ಕಾರಿಗೆ ಗ್ಯಾಸ್ ರೀಪಿಲಿಂಗ್ ಮಾಡುವ ಸಂದರ್ಭದಲ್ಲಿ ಗ್ಯಾಸ್ ಲಿಕೇಜ್ ಆಗಿ ಓಮ್ನಿ ಕಾರು ಮತ್ತು ಸಿಲೆಂಡರ್‍ಗೆ ಹೊತ್ತಿ ಉರಿದಿದೆ.

   ಕೂಡಲೇ ಅಲ್ಲಿನ ನಿವಾಸಿಗಳು ಪೊಲೀಸ್ ಠಾಣೆ ಮತ್ತು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದು, ಕೂಡಲೇ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಉರಿಯುವ ಓಮ್ನಿ ಕಾರು ಮತ್ತು ಗ್ಯಾಸನ್ನು ನಂದಿಸಲು ಯಶಸ್ವಿಯಾಗಿದ್ಧಾರೆ. ಪೊಲೀಸರು ಸಹ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಗ್ಯಾಸ್ ರಿಪಿಲಿಂಗ್ ಯತ್ನಿಸಿದ ಶಬ್ಬೀರ್ ಎಂಬಾತನನ್ನು ಪಿಎಸ್‍ಐ-2ಮಂಜುನಾಥ ಅರ್ಜುನ ಲಿಂಗಾರೆಡ್ಡಿ ತರಾಟೆಗೆ ತೆಗೆದುಕೊಂಡು ಅವನನ್ನು ವಶಕ್ಕೆ ಪಡೆದಿರುತ್ತಾರೆ.

   ಅಗ್ನಿಶಾಮಕ ಪಡೆ ಆಗಮಿಸದೇ ಇದ್ದರೆ ರಿಪಿಲಿಂಗ್ ಯತ್ನಿಸಿದ್ದ ವ್ಯಕ್ತಿಗೆ ಪ್ರಾಣಾಪಾಯವಾಗುವುದಲ್ಲದೆ, ನಗರಸಭೆಯ ಪೌರಕಾರ್ಮಿಕರ ಮನೆಗಳು ಸಹ ಹೆಚ್ಚಿನ ಪ್ರಮಾಣದಲ್ಲಿ ಹಾನಿಗೊಳಗಾಗುತ್ತಿದ್ದವು. ಪೌರಾಯುಕ್ತ ಪಿ.ಪಾಲಯ್ಯ, ಹಿರಿಯ ಆರೋಗ್ಯ ನಿರೀಕ್ಷಕ ಮಹಲಿಂಗಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಲ್ಲದೆ ಅಲ್ಲಿನ ನಿವಾಸಿಗಳಿಗೂ ಸಹ ಜಾಗೃತರಾಗಿರುವಂತೆ ಎಚ್ಚರಿಕೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link