ಬೆಂಗಳೂರು
ಗಿರಾಕಿಗಳನ್ನು ಐಟಿಬಿಟಿ ಉದ್ಯೋಗಿಗಳನ್ನು ವಾಟ್ಸ್‌ಆಪ್ ಸಂದೇಶದ ಮೂಲಕ ಸಂಪರ್ಕಿಸಿ ಕೊಕೇನ್ ಮಾರಾಟ ಮಾಡುತ್ತಿದ್ದ ನೈಜೀರಿಯನ್‌ನೊಬ್ಬನನ್ನು ಜಯನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ನೈಜೀರಿಯಾದ ವಿಕ್ಟರ್ ಜೆಕ್ವೆ(33)ಬಂಧಿತ ಆರೋಪಿಯಾಗಿದ್ದಾನೆ,ಬಂಧಿತನಿಂದ 1ಲಕ್ಷ ಮೌಲ್ಯದ 14ಗ್ರಾಂ ಕೊಕೇನ್ 3 ಸಾವಿರ ನಗದು,ಮೊಬೈಲ್ ಹೊಂಡಾ ಆಕ್ಟೀವಾ ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ.
ವಿದ್ಯಾರ್ಥಿ ವೀಸಾ ಮೇಲೆ ನಗರಕ್ಕೆ ಬಂದಿದ್ದ ಆರೋಪಿಯು ನಗರದಲ್ಲಿಯೇ ಅಕ್ರಮವಾಗಿ ಉಳಿದು ಐಷಾರಾಮಿ ಜೀವನ ನಡೆಸಲು ಬೇರೆ ಕಡೆಯಿಂದ ಕೊಕೇನ್ ತಂದು ನಗರದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ತೊಡಗಿದ್ದನು.ಆರೋಪಿಯನ್ನು ಗಿರಾಕಿಯೊಬ್ಬ ನೀಡಿದ ಮಾಹಿತಿ ಆಧರಿಸಿ ಜಯನಗರದ 22ನೇ ಕ್ರಾಸ್‌ನ 5ನೇ ಮುಖ್ಯರಸ್ತೆಗೆ ಕರೆಸಿಕೊಂಡು ಕಾರ್ಯಾಚರಣೆ ನಡೆಸಿ ಜಯನಗರ ಪೊಲೀಸರು ಬಂಧಿಸಿದ್ದಾರೆ ಎಂದು ಡಿಸಿಪಿ ಡಾ.ರೋಹಿಣಿ ಕಟೋಚ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
