ಲಾರಿಗೆ ಟಾಟಾ ಎಸಿ ಡಿಕ್ಕಿ : ಒರ್ವನ ಸಾವು

ಚಳ್ಳಕೆರೆ

     ನಗರದ ಬೆಂಗಳೂರು ರಸ್ತೆಯ ವೀರಶೈವ ಕಲ್ಯಾಣ ಮಂಟಪದ ಮುಂಭಾಗದಲ್ಲಿ ನಿಂತಿದ್ದ ಲಾರಿಗೆ ಟಾಟಾ ಗೂಡ್ಸ್ ವಾಹನವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮವಾಗಿ ಒರ್ವ ಸ್ಥಳದಲ್ಲೇ ಮೃತಪಟ್ಟು, ಇನ್ನು ಐದು ಜನರಿಗೆ ಗಾಯಗಳಾಗಿದ್ದು, ಅವರನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

      ಚಳ್ಳಕೆರೆ ನಗರದ ಗಾಂಧಿನಗರ ನಿವಾಸಿ ಮಲ್ಲಿಕಾರ್ಜುನ(27) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದು, ಇವರ ಜೊತೆಯಲ್ಲೇ ಪ್ರಯಾಣಿಸುತ್ತಿದ್ದ ತಿಪ್ಪೇಸ್ವಾಮಿ(26) ಗಾಂಧಿನಗರ, ಮುತೇಶ್‍ಬಾಬು(17) ಇವರ ತಲೆಗೆ ತೀರ್ವ ಪೆಟ್ಟು ಬಿದ್ದು ರಕ್ತಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲಾನಿ(35), ಪವನ್(20), ಕಾರ್ತಿಕ್(16) ಇವರು ಗಾಯಗೊಂಡು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

      ಟಾಟಾ ಎಸಿ ವಾಹನ ಇಲ್ಲಿನ ಗಾಂಧಿನಗರದಿಂದ ಹೊರಟು ನೆಹರೂ ಸರ್ಕಲ್‍ನಲ್ಲಿರುವ ತೆಂಗಿನ ಕಾಯಿಯನ್ನು ತುಂಬಿಕೊಳ್ಳಲು ವಾಹನ ಬರುತ್ತಿದ್ದು, ಬೆಂಗಳೂರು ರಸ್ತೆಯ ವೀರಶೈವ ಕಲ್ಯಾಣ ಮಂಟಪದ ಮುಂಭಾಗದಲ್ಲಿ ಮೆರವಣಿಗೆ ಪ್ರಯುಕ್ತ ನಿಂತಿದ್ದ ಲಾರಿಗೆ ಹಿಂದಿನಿಂದ ರಭಸವಾಗಿ ಡಿಕ್ಕಿ ಹೊಡೆದಿದೆ.

     ಸುದ್ದಿ ತಿಳಿದ ಕೂಡಲೇ ವೃತ್ತ ನಿರೀಕ್ಷ ಎನ್.ತಿಮ್ಮಣ್ಣ ಸ್ಥಳಕ್ಕೆ ದಾವಿಸಿ ಪರಿಶೀನೆ ನಡೆಸಿದರು. ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಿದರು. ಪಿಎಸ್‍ಐ ಕೆ.ಸತೀಶ್‍ನಾಯ್ಕ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ಧಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap