ಹುಳಿಯಾರು
ಲಾರಿ ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಳಿಯಾರಿನ ಬಳ್ಳೆಕಟ್ಟೆ ಬಳಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಹುಳಿಯಾರು ಹೋಬಳಿ ದಸೂಡಿ ಗ್ರಾಪಂ ವ್ಯಾಪ್ತಿಯ ಕರೇಬಲ್ಲಪ್ಪನಹಟ್ಟಿಯ ಜಯಣ್ಣ (22) ಸಾವನ್ನಪ್ಪಿದ ದುರ್ದೈವಿಯಾಗಿದ್ದಾರೆ. ಇವರು ತನ್ನೂರಿನಿಂದ ಚಿಕ್ಕನಾಯಕನಹಳ್ಳಿಗೆ ಬೈಕ್‍ನಲ್ಲಿ ಹೋಗುವಾಗ ಬಳ್ಳೆಕಟ್ಟೆ ಬಳಿ ಬಳ್ಳಾರಿಗೆ ಸಿಮೆಂಟ್ ತರಲು ಹೋಗುತ್ತಿದ್ದ ಕೇರಳದ ಲಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ.ಪರಿಣಾಮ ಬೈಕ್‍ನ ಸವಾರನ ತಲೆ ಹಾಗೂ ಕಾಲಿಗೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ತೀರ್ವ ರಕ್ತಸ್ತ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಭೀಕರತೆ ಹೇಗಿತ್ತೆಂದರೆ ಬೈಕ್‍ನ ಮುಂಭಾಗದ ಚಕ್ರ ಬೈಕ್‍ನಿಂದ ಬೇರ್ಪಟ್ಟು ತುಂಡಾಗಿತ್ತು.ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
