ಬೆಂಗಳೂರು
ಸುಮಾರು 18 ಲಕ್ಷ ಮೌಲ್ಯದ ಐಷರಾಮಿ ಹಾರ್ಲೆ ಡೇವಿಡ್‍ಸನ್ ಬೈಕ್‍ನ ಸಾಲದ ಮಾಸಿಕ ಕಂತನ್ನು ಪಡೆಯಲು ಹೋದಾಗ ನಡೆದ ಜಗಳ ವಿಕೋಪಕ್ಕೆ ತಿರುಗಿ ಬೈಕ್‍ನ ಮಾಲೀಕನ ಸಂಬಂಧಿ ಹಾರಿಸಿದ ಗುಂಡಿಗೆ ಯುವಕನೋರ್ವ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಹೆಣ್ಣೂರು ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ನಡೆದಿದೆ.
ಮೂರು ಸುತ್ತು ಹಾರಿಸಿದ ಗುಂಡುಗಳಲ್ಲಿ ಒಂದು ಎದೆ ಭಾಗಕ್ಕೆ ತಗುಲಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಿ.ಜೆ. ಹಳ್ಳಿಯ ಸೈಯದ್ ಸಲೀಂ (30) ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾನೆ.
ಗುಂಡು ಹಾರಿಸಿದ ಜಾರ್ಖಂಡ್ ಮೂಲದ ಉದ್ಯಮಿ ಅಮರೇಂದರ್‍ನನ್ನು ಬಂಧಿಸಿ ಬೈಕ್‍ನ ಮಾಲೀಕ ಮಯೂರೇಶ್ ಸಾಲದ ಕಂತಿನ ಪಾವತಿಗೆ ಹೋಗಿ ಜಗಳ ಮಾಡಿದ ಡಿ.ಜೆ. ಹಳ್ಳಿಯ ಸೈಯದ್ ಅರ್ಫಾದ್ ಸೇರಿ ನಾಲ್ವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಉದ್ಯಮಿಯಾಗಿದ್ದ ಜಾರ್ಖಂಡ್ ಮೂಲದ ಉದ್ಯಮಿ ಮಯೂರೇಶ್ ಸುಮಾರು 18 ಲಕ್ಷ ಮೌಲ್ಯದ ಹಾರ್ಲೆ ಡೇವಿಡ್‍ಸನ್ ಬೈಕ್‍ನ್ನು ವರ್ಷದ ಹಿಂದೆ ಹೆಚ್‍ಡಿಎಫ್‍ಸಿ, ಬ್ಯಾಂಕ್ ನಲ್ಲಿ ತಿಂಗಳ ಕಂತಿನ ಮೇಲೆ ಸಾಲ ಪಡೆದು ಖರೀದಿಸಿದ್ದರು. ಸಾಲದ ಕಂತನ್ನು ವಸೂಲಿ ಮಾಡಲು ಬ್ಯಾಂಕ್ ಖಾಸಗಿ ಹಣ ವಸೂಲಿಗಾರ ಸೈಯದ್ ಅರ್ಫಾದ್‍ಗೆ ಜವಾಬ್ದಾರಿ ನೀಡಿತ್ತು.
ಪ್ರತಿ ತಿಂಗಳು ಸರಿಯಾಗಿಯೇ ಸಾಲದ ಕಂತು ಪಾವತಿಸುತ್ತಿದ್ದ ಮಯೂರೇಶ್ ಜ. 5 ರ ತಿಂಗಳಿನ ಕಂತಿಗೆ ಹಣ ಪಾವತಿಸಲು ತಡ ಮಾಡಿದ್ದ ಬ್ಯಾಂಕ್‍ನಿಂದ ಸಾಲದ ಕಂತು ಪಾವತಿಗೆ ಹಾಕಲಾಗಿದ್ದ ಚೆಕ್ ಬೌನ್ಸ್ ಆಗಿತ್ತು. ಸಾಲದ ಕಂತು ಪಾವತಿಗೆ ಮಯೂರೇಶ್ ಅವರನ್ನು ಸಂಪರ್ಕಿಸಿದ್ದ ಸೈಯದ್ ಅರ್ಫಾದ್ ಕೂಡಲೇ ಕಂತು ಪಾವತಿಸಬೇಕು. ಇಲ್ಲದಿದ್ದರೆ ಬೈಕ್ ಅನ್ನು ಬ್ಯಾಂಕ್ ಸೀಜ್ ಮಾಡಲಾಗುವುದು ಎಂದು ಹೆದರಿಸಿದ.
ಆದರೆ ಮಯೂರೇಶ್ ನಾನು ಕಂತು ಪಾವತಿಸುವುದು ತಡವಾಗಿದೆ ಮುಂದಿನ ತಿಂಗಳು ಪಾವತಿಸುತ್ತೇನೆ ಅಲ್ಲಿಯವರೆಗೆ ಕಾಯಬೇಕು ನೀನು ಅದು ಹೇಗೆ ಬೈಕ್ ಸೀಜ್ ಮಾಡುತ್ತೀಯೋ ನಾನು ನೋಡುತ್ತೇನೆ ಎಂದಾಗ ಇಬ್ಬರ ನಡುವೆ ಮಾತಿ ಚಕಮಕಿ ನಡೆದಿತ್ತು.
ಗಾಳಿಯಲ್ಲಿ ಗುಂಡು
ಸೈಯದ್ ಅರ್ಫಾದ್ ಬುಧವಾರ ಸಂಜೆ ಕೂಡ ಕಂತು ಪಾವತಿ ಮಾಡುವಂತೆ ಮಯೂರೇಶ್ ಗೆ ಹೇಳಿದಾಗ ಮತ್ತೆ ಇಬ್ಬರ ನಡುವೆ ಜಗಳವಾಗಿದೆ. ಬೈಕ್ ಅದೆಗೇ ಸೀಜ್ ಮಾಡುತ್ತಿಯೋ ಬಾ ಎಂದು ಕರೆದಿದ್ದಾನೆ. ಇದರಿಂದ ಆಕ್ರೋಶಗೊಂಡ ಸೈಯದ್ ಅರ್ಫಾದ್ ತನ್ನ ಬಾಮೈದ ಸೈಯದ್ ಸಲೀಂ ಇನ್ನಿತರ ಮೂವರನ್ನು ಕರೆದುಕೊಂಡು ಮಯೂರೇಶ್ ವಾಸಿಸುತ್ತಿದ್ದ ಹೆಣ್ಣೂರು ಜಂಕ್ಷನ್‍ನ ಅನದರ್ ಸ್ಕೈ ಅಪಾರ್ಟ್‍ಮೆಂಟ್ ಬಳಿ ರಾತ್ರಿ 9.15ರ ವೇಳೆ ಹೋಗಿದ್ದಾನೆ.
ಅಪಾರ್ಟ್ ಮೆಂಟ್ ನಲ್ಲಿದ್ದ ಮಯೂರೇಶ್ ಅನ್ನು ಸೈಯದ್ ಅರ್ಫಾದ್ ಕೆಳಗೆ ಕರೆದಿದ್ದು ಸಾಲದ ಕಂತಿನ ವಿಚಾರದಲ್ಲಿ ಮತ್ತೆ ಇಬ್ಬರ ನಡುವೆ ಜಗಳ ನಡೆದಿದೆ. ಅಲ್ಲಿಗೆ ಮಯೂರೇಶ್‍ನ ಸೋದರ ಸಂಬಂಧಿ ಬಂದಿದ್ದು ಆತನು ಜಗಳಕ್ಕಿಳಿದ್ದಿದ್ದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.
ಈ ವೇಳೆ ಅಮರೇಂದರ್ ಗಾಳಿಯಲ್ಲಿ 2 ಸುತ್ತು ಗುಂಡು ಹಾರಿಸಿ ಮತ್ತೊಂದು ಸುತ್ತು ಗುಂಡನ್ನು ಸೈಯದ್ ಸಲೀಂ ಕಡೆ ಹಾರಿಸಿದ್ದು ಅದು ಆತನ ಎದೆಗೆ ತಗುಲಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ.
ಪರವಾನಗಿ ಪಡೆದಿದ್ದ
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ದಾವಿಸಿದ ಹೆಣ್ಣೂರು ಪೊಲೀಸರು ಗಲಾಟೆಯಲ್ಲಿದ್ದ ಎಲ್ಲರನ್ನು ವಶಕ್ಕೆ ತೆಗೆದುಕೊಂಡು ಗಾಯಗೊಂಡಿದ್ದ ಸಲೀಂನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ರಿವಾಲ್ವರ್ ಅನ್ನು ಉದ್ಯಮಿ ಅಮರೇಂದರ್ ಪೊಲೀಸ್ ಪರವಾನಗಿ ಪಡೆದು ಖರೀದಿಸಿರುವುದು ಪತ್ತೆಯಾಗಿದ್ದು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








