ಗುತ್ತಲ:
ಸಮೀಪದ ಹಾವನೂರ ಗ್ರಾಮದ ಬಳಿ ಲಾರಿ ಹಾಗೂ ದ್ವಿಚಕ್ರ ವಾಹನದ ಮದ್ಯೆ ಅಪಘಾತವಾಗಿದ್ದು ಸ್ಥಳದಲ್ಲಿಯೇ ಓರ್ವ ಮೃತಪಟ್ಟಿದ್ದು ಇನ್ನೊರ್ವ ವ್ಯಕ್ತಿಯ ತಲೆಗೆ ತೀವ್ರವಾದ ಗಾಯವಾದ ಘಟನೆ ಸಂಭವಿಸಿದೆ
ಗುತ್ತಲ ಹಾಗೂ ಹಾವನೂರ ಮಾರ್ಗ ಮಧ್ಯೆ ಪೆಟ್ರೊಲ ಬಂಕ್ ಹತ್ತಿರ ಹೊಟಿದ್ದ ಲಾರಿ ಚಾಲಕನ ನಿಷ್ಕಾಳಜಿಯಿಂದ ರಸ್ತೆ ಬದೀಯಲ್ಲಿ ಚಲಿಸುತ್ತಿದ್ದ ದ್ವಿಚಕ್ರವಾನಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಸ್ಥಳದಲ್ಲಿಯೇ ಓರ್ವ ವ್ಯಕ್ತಿ ಮೃತಪಟ್ಟಿರುತ್ತಾನೆ. ಮೃತ ವ್ಯಕ್ತಿಯನ್ನು ಸವಣೂರ ತಾಲೂಕ ಕೃಷ್ಣಾಪುರ ತಾಂಡಾದ ಉಮೇಶ ಹರೀಶ್ಚಂದ್ರಪ್ಪ ಲಮಾಣಿ (28) ಎಂದು ಗುರುತಿಸಲಾಗಿದೆ.
ಗಂಬೀರವಾಗಿ ಗಾಯಗೊಂಡ ಇನ್ನೊರ್ವ ವ್ಯಕ್ತಿ ಹಿಂಬದಿ ಸವಾರ ಗುತ್ತಲ ತಾಂಡಾದ ಮಲ್ಲೇಶ ರಾಮಪ್ಪ ನಾಯಕ ಇತನ ತಲೆಗೆ ತೀವ್ರವಾದ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಗುತ್ತಲ ಸಮುದಾಯ ಆರೋಗ್ಯ ಕೇಂದ್ರದಿಂದ ಹಾವೇರಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಪ್ರತಿಭಟನೆ: ಘಟನೆ ನಡೆದ ಸ್ಥಳದಲ್ಲಿ ಕೆಲ ಹೊತ್ತು ಹಾವನೂರ ಮತ್ತು ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು ಪೋಲಿಸ ಅಧಿಕಾರಿಗಳ ವಿರುದ್ದ ಘೋಷಣೆ ಕೂಗುತ್ತಾ ಹರಿಹಾಯ್ದರು, ಪ್ರತಿಭಟನಾಗಾರರು ಶವ ಮುಟ್ಟದಂತೆ ಕೆಲ ಕಾಲ ಪೊಲೀಸ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ಕಂಡು ಬಂತು ವೇಗವಾಗಿ ಚಲಿಸುವ ಲಾರಿಗಳ ಮೇಲೆ ಕ್ರಮಕೈಗೊಳ್ಳಬೇಕು ಎಂದು ಆರೋಪಿಸಿದರು. ಘಟನಾ ಸ್ಥಳದಿಂದ ಪರಾರಿಯಾದ ಚಾಲಕನ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಪ್ರತಿಭಟನಾಗಾರರು ಆಗ್ರಹಿಸಿದರು. ಮೃತ ಸಂಭಂದಿಕರ ರೋಧನ ನೆರೆದವರು ಕಣ್ಣೀರು ಹಾಕುವಂತಿತ್ತು.
ಘಟನಾ ಸ್ಥಳಕ್ಕೆ ಪಿಎಸ್ಐ ಸಿದ್ಧಾರೂಡ ಬಡಿಗೇರ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲಿಸಿದರು. ಈ ಕುರಿತು ಗುತ್ತಲ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
