ರಸ್ತೆ ಬದಿಯ ಮರಗಳ ತೆರವಿಗೆ ಸೂಚನೆ

ತುರುವೇಕೆರೆ:

       ಪಟ್ಟಣದ ದಬ್ಬೇಗಟ್ಟ ರಸ್ತೆ ಅಗಲೀಕರಣ ಕಾಮಗಾರಿಗೆ ತೊಡಕಾಗಿರುವ ರಸ್ತೆ ಬದಿಯ ಮರಗಳ ತೆರವು ಕಾರ್ಯಾಚರಣೆಯನ್ನು ಕೂಡಲೇ ಅರಣ್ಯ ಇಲಾಖೆ ಮಾಡಬೇಕು ಎಂದು ಶಾಸಕ ಮಸಾಲಜಯರಾಮ್ ಸೂಚಿಸಿದರು.

        ಪಟ್ಟಣದ ದಬ್ಬೇಗಟ್ಟ ರಸ್ತೆಯಲ್ಲಿರುವ ಅರಣ್ಯ ಇಲಾಖೆ ಆವರಣದಲ್ಲಿ ಸುಮಾರು 12 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಸಾಮಾಜಿಕ ಅರಣ್ಯ ವಲಯ ಕಚೇರಿಯ ಉಧ್ಘಾಟನೆ ನೆರವೇರಿಸಿ ಮಾತನಾಡಿದ ಅವರು ದಬ್ಬೇಗಟ್ಟ ರಸ್ತೆ ಅಗಲೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲು ರಸ್ತೆ ಬದಿಯಲ್ಲಿರುವ ಮರಗಳು ತೆರವು ಗೊಳಿಸಲು ವಿಳಂಬವಾಗುತ್ತಿದೆ. ಮರಗಳ ತೆರವು ಕಾರ್ಯಾಚರಣೆ ಮುಗಿದ ಕ್ಷಣದಿಂದಲೇ ರಸ್ತೆ ಅಗಲೀಕರಣ ಕಾಮಗಾರಿಗೆ ಚಾಲನೆ ನೀಡಲಾಗುವುದು, ರಸ್ತ ಅಗಲಿಕರಣಕ್ಕೆ ಕಟ್ಟದ ಮಾಲೀಕರ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ. ಇದೇ ರಸ್ತೆಯಲ್ಲಿ ನಮ್ಮ ಪಕ್ಷದ ಕಚೇರಿಯಿದೆ ಆದರೂ ಕಾಮಗಾರಿ ಆರಂಭವಾಗುತ್ತದೆ ನನಗೆ ಪಟ್ಟಣದ ಅಭಿವೃದ್ದಿ ಹಾಗೂ ಸಾವಿರಾರು ಜನರ ಒಳಿತು ಮುಖ್ಯ ಎಂದು ತಿಳಿಸಿದರು.

         ಸ್ಥಳದಲ್ಲಿಯೇ ಇದ್ದ ಪ್ರಾದೇಶಿಕ ಅರಣ್ಯ ವಲಯಾಧಿಕಾರಿ ಸುನಿಲ್ ಮಾತನಾಡಿ ಮರಗಳ ತೆರವು ಕಾರ್ಯಚರಣೆಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಕೂಡಲೇ ಶಾಸಕರ ನೇತೃತ್ವದಲ್ಲೇ ಮರಗಳ ತೆರವು ಕಾರ್ಯಚರಣೆಗೆ ಚಾಲನೆ ನೀಡಲಾಗುವುದು ಎಂದರು.
ಡಿ.ಎಫ್.ಓ. ಸತೀಶ್ ಬಾಬಾರೈ ಮಾತನಾಡಿ ಕಟ್ಟಡದ ವಿನ್ಯಾಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ತಾ.ಪಂ ಅಧ್ಯಕ್ಷೆ ನಾಗರತ್ನ, ಡಿ.ಎಫ್.ಓ.ಸತೀಶ್‍ಬಾಬಾರೈ ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಗಂಗಾಧರನ್.ಜಿ.ಡಿ. ತಾ.ಪಂ.ಸದಸ್ಯ ಹಾಗು ತುಮಲ್ ನಿರ್ದೇಶಕ ಮಹಾಲಿಂಗಯ್ಯ, ತಾ.ಪಂ. ಉಪಾಧ್ಯಕ್ಷ ನಂಜೇಗೌಡ ತಾ.ಪಂ.ಸದಸ್ಯರುಗಳಾದ ಮಹಾಲಿಂಗಪ್ಪ, ಭೈರಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಆರ್.ಜಯರಾಮ್, ಇಲಾಖೆಯ ಎ.ಸಿ.ಫ್. ಸಂತೋಶ್‍ನಾಯ್ಕ್ ಮತ್ತು ಚಂದ್ರಪ್ಪ, ಆರ್.ಎಫ್.ಒ. ನಿಸಾರ್‍ಅಹ್ಮದ್, ತಿಮ್ಮರಾಜು, ಶಿಲ್ಪ, ಸುಜಾತ, ಸಿಬ್ಬಂದಿಗಳಾದ ಗಂಗಾಧರ್, ಭೀಮಗೌಡ, ಜಯಲಕ್ಮಮ್ಮ, ಚಂದ್ರಯ್ಯ, ಹೊನ್ನಪ್ಪ, ಯೋಗೇಂದ್ರ, ಫಾರ್ಥಸಾರಥಿ ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link