ನಮ್ಮ ವಾರ್ಡ್ ನಮ್ಮ ಹಕ್ಕು : ಅಲ್ಲಾಬಕಾಶ್

ತಿಪಟೂರು:

     ನಗರಸಭೆ ಚುನಾವಣೆ ಹತ್ತಿದರಲ್ಲೇ ಇದ್ದು ಜನರು ನಮ್ಮ ವಾರ್ಡ್ ನಮ್ಮ ಹಕ್ಕು ಎಂದು ಸೂಕ್ತ ಅಭ್ಯರ್ಥಿಯನ್ನು ಹಾರಿಸಬೇಕೆಂದು ಮತದಾರರಿಗೆ ಸೌಹಾರ್ಧ ತಿಪಟೂರು ಸಮಿತಿಯ ಕಾರ್ಯದರ್ಶಿ ಅಲ್ಲಬಕಾಶ್ ಕರೆನೀಡಿದರು.

ನಗರದ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು ನಗರಸಭೆ ಚುನಾಣೆಗೆ ಸ್ಪರ್ಧಿಸಿರುವ ವಾರ್ಡ್ ನಂ 21 ನ ನೂರಾನಿ ಬಾನು ಮತ್ತು ವಾರ್ಡ್ ನಂ 9 ರಲ್ಲಿ ಸ್ಪರ್ಧಿಸಿರುವ ಉಜ್ಜಜ್ಜಿ ರಾಜಣ್ಣನವರ ಪ್ರನಾಳಿಕೆಯನ್ನು ಬಿಡುಗಡೆಮಾಡಿದ ಅವರು ಚುನಾವಣೆಯಲ್ಲಿ ಇತ್ತೀಚಿನ ಚುನಾವಣೆಗಳು ಹಣ ಮತ್ತು ಹೆಂಡದ ಅಮಲಿನಲ್ಲಿ ಜರುಗುತ್ತಿದ್ದು ನಾವಿದಕ್ಕೆ ವಿರುದ್ದವಾಗಿ ರೈತಸಂಘದ ಬೆಂಬಲದಿಂದ ಮತದಾರಿಂದ ಪಡೆದ ಕಾಣಿಕೆಯಿಂದಲೇ ನಾವು ಚುನಾವಣೆಯನ್ನು ಹೆದುರಿಸುತ್ತಿದ್ದೇವೆ ಮತ್ತು ಮತದಾರರು ಮತಹಾಕಿದಷ್ಟಕ್ಕೆ ತಮ್ಮ ಜವಾಬ್ದಾರಿ ಮುಗಿಯಿತೆಂದು ತಿಳಿದಿದ್ದಾರೆ.

     ಆದರೆ ಇದು ಸರಿಯಲ್ಲಿ ತಾವು ಆರಿಸಿದ ಅಭ್ಯರ್ಥಿಯು ನಮ್ಮ ವಾರ್ಡ್‍ಗಾಗಿ ಏನು ಮಾಡಬೇಕು ಅವನು ಕೊಟ್ಟ ಆಶ್ವಾಸನೆಗಳೇನು ಎಂಬುದನ್ನು ತಿಳಿಸಬೇಕು ಮತ್ತು ಅವುಗಳನ್ನು ಪೂರೈಸುವವರೆಗೂ ನಾವು ಬಿಡಬಾದರು ಆದ್ದರಿಮದ ನಾನು ಇಂದು ಪ್ರನಾಳಿಕೆಯನ್ನು ಜನರಿಗೆ ತಿಳಿಸುವ ಉದ್ದೇಶದಿಂದಲೇ ಪತ್ರಿಕಾಗೋಷ್ಠಿಯಲ್ಲಿ ಪ್ರಣಾಳಿಕೆಯನ್ನು ಬಿಡುಗಡೆಮಾಡುತ್ತಿದ್ದೇನೆಂದು ತಿಳಿಸಿದರು. ಇದು ನಿಮ್ಮದೇ ವಾರ್ಡ್ ನಿಮ್ಮದೇ ಅಬಿವೃದ್ಧಿ ನೀವೆ ಪ್ರಭುಗಳು, ನೀವೆ ಕಾರ್ಮಿಕರಂತೆ ದುಡಿದರೆ ಮಾತ್ರ ವಾರ್ಡ್‍ನೊಂದಿಗೆ ನಗರದ ಅಭಿವೃದ್ಧಿ ಸಾಧ್ಯವೆಂದರು.

      ವಾರ್ಡ್ ನಂ 9ರ ಅಭ್ಯರ್ಥಿ ಉಜ್ಜಜ್ಜಿ ರಾಜಣ್ಣ ಮಾತನಾಡಿ ನಾವಿಂದು ನೋಡುತ್ತಿರುವುದು ಧೂಳಿನಿಂದ ಮತ್ತು ಕಟ್ಟಡಕಟುವುದನ್ನೇ ಅಭಿವೃದ್ಧಿ ತಿಳಿದಿದ್ದೇವೆ ಆದರೆ ಅಭಿವೃದ್ಧಿ ಎಂದರೆ ಅದಲ್ಲ ನಗರವನ್ನು ಸಾಂಸಕೃತಿಕವಾಗಿ, ಚಾರಿತ್ರಿಕವಾಗಿ ಅಭಿವೃದ್ಧಿಗೊಳಿಸುವುದೇ ನಿಜವಾದ ಅಭಿವೃದ್ಧಿ ಎಂದ ಅವರು ಇಲ್ಲಿನ ನಗರಸಭೆಯಲ್ಲಿ ಇರುವ ಅಧಿಕಾರಿಗಳು ಮಹಲಿನಿಂದಲೇ ಬಂದವರು ಅವರು ಬಿಸಲಿನ್ನೇ ನೋಡಿಲ್ಲ ಮತ್ತು ತಮ್ಮ ಕಾರ್ಯಕ್ಷೇತ್ರದಲ್ಲಿ ಎಂದು ಸಹ ಕೆಲಸವನ್ನು ನೋಡದೆ ಬರಿ ಕಛೇರಿಯಲ್ಲ ಕುಳಿತು ಕೆಲಸಮಾಡಲು ಹೋಗಿ ಇಲ್ಲಸಲ್ಲದ ತಪ್ಪುಗಳನ್ನು ಮಾಡುತ್ತಾ ನಗರವನ್ನು ಹಾಳುಮಾಡುತ್ತಿದ್ದಾರೆ.

      ನಗರಸಭೆ ಎನ್ನುವುದು ಸಿಹಿಸುಳ್ಳುಗಳ ಸಭೆ ಎಂದಾಗಿದ್ದು ಇದುವರೆವಿಗೂ 2019-20ರ ಬಜೆಟ್ ಆಗಿಲ್ಲ, ನಗರವು ಗಂಡುಗಲಿ ಕುಮಾರರಾಮನ ಇತಿಹಾಸವನ್ನು ಹೊಂದಿದ್ದು ಮಹಾತ್ಮ ಗಾಂಧಿ, ರಾಮ್‍ಮನೋಹರ್ ಲೋಹಿಯಾರ ಬೇಟಿನೀಡಿದ್ದು, ಖ್ಯಾತನಟರಾದ ಹಾಸ್ಯಚಕ್ರವರ್ತಿ ನರಸಿಂಹರಾಜುರವರು ಹುಟ್ಟೂರು ಅವರ ಭವನವನ್ನೇ ಇನ್ನು ಸರಿಯಾಗಿ ನಿರ್ಮಿಸಿಲ್ಲ, ಮತ್ತು ನಗರಸಭೆಗೆ ಬರುವ ಅನುದಾನಗಳ ಸರಿಯಾಗಿ ಬಳಕೆಯಾಗುತ್ತಿಲ್ಲ ಇದರ ಬಗ್ಗೆ ಕೇಳಿದರೆ ಅಧಿಕಾರಿಗಳು ಸೂಕ್ತ ಉತ್ತರಕೊಡದೆ ಹಾರಿಕೆಯ ಉತ್ತರ ನೀಡುತ್ತಾರೆ.

      ಮುಖ್ಯವಾಗಿ ಕಸದ ಸಮಸ್ಯಯಿದ್ದು ಅದನ್ನು ನಿವಾರಿಸಲು ಅಧಿಕಾರಿಗಳು ಪರದಾಡುತ್ತಿದ್ದಾರೆಂದು ಆರೋಪಿಸಿದ ಅವರು ನಗರದ ಸಮಗ್ರಭಿವೃದ್ಧಿ ಮತ್ತು ಸಾಂಸ್ಕತಿಕ ಮತ್ತು ಚಾರಿತ್ರಿಕ ನಗರವಾಗಿಸಲು ನಮಗೆ ಮತನೀಡಿ ಅಭಿವೃದ್ಧಿಗೆ ಸಹಕರಿಸುವಂತೆ ಕೊರಿದರು.
ಈ ಸಂದರ್ಭದಲ್ಲಿ ವಾರ್ಡ್ ನಂ 21ರ ಅಭ್ಯರ್ಥಿ ನೂರಾನಿಬಾನು, ರೈತಸಂಘದ ಅಧ್ಯಕ್ಷ ಬೆನ್ನಾಯಕನಹಳ್ಳಿ ದೇವರಾಜು, ಬೆಳಕಾವಲು ಸಮಿತಿಯ ಶ್ರೀಕಾಂತ್ ಕೆಳಹಟ್ಟಿ, ಮೊಹಮದ್ ರಫಿ ಮುಂತಾದವರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link