ಹಾವೇರಿ:
ತಾಲೂಕ ಪಂಚಾಯತಿ ವತಿಯಿಂದ ಶ್ರೀ ಶಿವಲಿಂಗೆಶ್ವರ ಪದವಿ ಮಹಿಳಾ ಮಹಾವಿದ್ಯಾಲಯದ ಹುಕ್ಕೇರಿಮಠದ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಮಿಂಚಿನ ಮತದಾನ, ಜಾಗೃತಿ ಅಭಿಯಾನ ಜಾಥಾ ಜರುಗಿತು. ಈ ಸಂಧರ್ಭದಲ್ಲಿ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಯಾದ ಶ್ರೀಮತಿ ಅನ್ನಪೂರ್ಣ ಮುದುಕಮ್ಮನವರ ಮಾತನಾಡಿ ಮತದಾನ ಎನ್ನುವುದು ಪ್ರಜಾ ಪ್ರಭುತ್ವದ ಆಧಾರ ಸ್ತಂಭ. ಈ ಸ್ತಂಭ ಗಟ್ಟಿಯಾಗಿರಬೇಕಾದರೆ ಮತದಾನದ ಪ್ರಮಾಣ ಹೆಚ್ಚಾಗಬೇಕಿದೆ.
ಅಂದಾಗ ಮಾತ್ರ ಪ್ರಜಾ ಪ್ರಭುತ್ವ ಯಶಸ್ಸಿನ ಹಾದಿಯಲ್ಲಿ ಸಿಗಲಿದೆ ಎಂದು ತಿಳಿಸಿದರು. ಎಲ್ಲರೂ ತಮ್ಮ ವ್ಯಾಪ್ತಿಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಮತ್ತು ವಿವಿ ಪ್ಯಾಟ ಪ್ರಾತ್ಯಕ್ಷಿಕೆಯ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಮುಂದುವರೆದು ಪ್ರಜ್ಞಾವಂತ ಮತದಾರರು ಪ್ರಜಾ ಪ್ರಭುತ್ವದ ಮೂಲ ಕ್ರಿಯೆಯಾಗಿರುವ ಮತದಾನದಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಕರಪತ್ರಗಳನ್ನು ಹಂಚುವ ಮುಖಾಂತರ ಕಾಲೇಜಿನ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ನಾವು ಮತದಾನ ಮಾಡುವುದಲ್ಲದೆ ನಮ್ಮ ಸುತ್ತಮುತ್ತಲಿನವರು ಮತದಾನ ಮಾಡುವಂತೆ ಪ್ರೇರೆಪಣೆ ನಿಡಬೇಕು ಮತ್ತು ಮತದಾನದಿಂದ ದೂರ ಉಳಿದವರಿಗೆ ಮತದಾನದ ಮಹತ್ವಕುರಿತು, ತಿಳಿಹೇಳುವ ಮೂಲಕ ಮತದಾನ ಮಾಡುವಂತೆ ಪ್ರೇರೆಪಿಸಬೇಕು ಎಂದರು. ತಾಲೂಕ ವ್ಯಾಪ್ತಿಯಲ್ಲಿ ಮತದಾನ ಶೇಕಡಾ ಪ್ರಮಾಣ ಹೆಚ್ಚಿಸುವಲ್ಲಿ ಕಾಳಜಿವಹಿಸಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ತಾಲೂಕ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಶ್ರೀಮತಿ ಪುಷ್ಪಲತಾ ಬಿದರಿ, ಎನ್ ಹೆಚ್ ಕರೆಗೌಡ್ರ, ಪ್ರಶಾಂತಯ್ಯ, ತಾಲೂಕ ಪಂಚಾಯತಿ ಸಿಬ್ಬಂದಿ ವರ್ಗದವರು, ಸೆಕ್ಟರ ಅಧಿಕಾರಿಳಾದ ಶ್ರೀ ಸಿ ಎಸ್ ಭಗವಂತಗೌಡ್ರ, ಶ್ರೀ ಚಂದ್ರಕಾಂತ ಭಾಗವಹಿಸಿದ್ದರು.