ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿ ದರ್ಶನಕ್ಕೆ ಪಾದಯಾತ್ರೆ

ತುರುವೇಕೆರೆ:

        ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿ ದರ್ಶನಕ್ಕೆ ಪಾದಯಾತ್ರೆಯ ಮೂಲಕ ಪಟ್ಟಣಕ್ಕೆ ಆಗಮಿಸಿದ ಉತ್ತರ ಕರ್ನಾಟಕದ ವಿವಿಧ ಮಠಗಳ ಸ್ವಾಮಿಗಳು ಮತ್ತು ಭಕ್ತಾಧಿಗಳನ್ನು ಲಯನ್ಸ್ ಕ್ಲಬ್ ಪಧಾದಿಕಾರಿಗಳು ಭಕ್ತಿಯಿಂದ ಬರಮಾಡಿಕೊಂಡು ಬೀಳ್ಕೊಟ್ಟರು. 

        ನಿರಂಜನ ಪ್ರಣವ ಸ್ವರೂಪ ಗುದ್ದಲಿಶಿವಯೋಗೀಶ್ವರ ಸ್ವಾಮಿ ಮಾತನಾಡಿ ಜಿಲ್ಲೆಯ ಹೆಸರಾಂತ ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿಯು ಭಕ್ತಿ ಮತ್ತು ಆಧ್ಯಾತ್ಮಕ್ಕೆ ಪ್ರಸಿದ್ದತೆಯನ್ನು ಪಡೆದುಕೊಂಡು ರಾಜ್ಯದ ಮೂಲೆ ಮೂಲೆಯಲ್ಲೂ ಆಪಾರ ಭಕ್ತರನ್ನೊಳಗೊಂಡಿದೆ. ಕಳೆದ 30 ವರ್ಷಗಳಿಂದ ಸಿದ್ದಲಿಂಗೇಶ್ವರ ಸ್ವಾಮಿಯ ದರ್ಶನಕ್ಕೆ ನವಲಗುಂದ, ಹಾವೇರಿ, ಸಾಗರ್, ಸವಣೂರು, ರಾಣಿಬೆನ್ನೂರು, ಇನ್ನೂ ಮೊದಲಾದ ಭಾಗಗಳಿಂದ ಪ್ರತಿ ವರ್ಷ ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಆಗಮಿಸುತ್ತಾರೆ. ನಮ್ಮ ಪಾದಯಾತ್ರೆಯು ನವಲಗುಂದಿಂದ ಪ್ರಾರಂಭವಾಗಿ ತಿಪಟೂರು, ನೊಣವಿನಕೆರೆ, ತುರುವೇಕೆರೆ, ಮಾಯಸಂದ್ರ ಕಲ್ಪತರು ಆಶ್ರಮದಲ್ಲಿ ದಾನಿಗಳ ಭಕ್ತರ ಸೇವೆಯೊಂದಿಗೆ ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿ ಸನ್ನಿಧಾನಕ್ಕೆ ತಲುಪುತ್ತೇವೆ. ಭಕ್ತರ ಆದರಕ್ಕೆ ನಾವೆಲ್ಲರು ಕೃತಜ್ಞರು ಎಂದರು.

       ತಾಲೂಕು ಲಯನ್ಸ್ ಕ್ಲಬ್‍ನ ಬ್ಯಾಂಕ್ ಮೂಡಲಗಿರಿಯಪ್ಪ ಮಾತನಾಡಿ, ಉತ್ತರ ಕರ್ನಾಟಕದಿಂದ ಇಲ್ಲಿನ ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿಯ ದರ್ಶನಕ್ಕೆ ಆಗಮಿಸುವ ಎಲ್ಲಾ ಭಕ್ತರಿಗೂ ಊಟ, ವಸತಿ ವ್ಯವಸ್ಥೆಯನ್ನು ಪ್ರತಿ ವರ್ಷ ಮಾಡಿಕೊಂಡು ಬರಲಾಗುತ್ತಿದೆ ಎಂದರು.

       ಈ ಸಂದರ್ಬದಲ್ಲಿ ಗುದ್ದಲಿಶಿವಯೋಗೀಶ್ವರ ಸ್ವಾಮಿಗಳ ದರ್ಶನಕ್ಕೆ ಬಂದ ಜನರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು. ಲಕ್ಕುಂಡಿಶ್ರೀಗಳು, ಚನ್ನವೀರೇಶ್ವರ ಮಹಾಸ್ವಾಮಿ, ಲಯನ್ಸ್ ಕಾರ್ಯದರ್ಶಿ ಬಸವರಾಜು, ಖಜಾಂಚಿ ನಟೇಶ್, ಮಾಜಿ ಅಧ್ಯಕ್ಷರುಗಳಾದ ಗಂಗಾಧರದೇವರಮನೆ, ಮಲ್ಲಿಕಾರ್ಜುನ್ ದುಂಡ, ಸುನೀಲ್ ಬಾಬು, ಲೋಕೇಶ್, ಪ್ರಸನ್ನ, ಗುಂಡಣ್ಣ ಸೇರಿದಂತೆ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link