ಪದ್ಮಶಾಲಿ ನೇಕಾರ ರಕ್ಷಣಾ ವೇದಿಕೆ ಅಸ್ತಿತ್ವಕ್ಕೆ

ದಾವಣಗೆರೆ:

       ಪದ್ಮಶಾಲಿ ನೇಕಾರ ಸಮಾಜ ಬಾಂಧವರ ಸಂಘಟನೆ ಮತ್ತು ರಾಜಕೀಯ ಪ್ರಜ್ಞೆ ಮೂಡಿಸುವುದು, ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಸಮಾಜ ಬಾಂಧವರಿಗೆ ತಿಳಿಸುವ ಉದ್ದೇಶದಿಂದ ನೂತನವಾಗಿ ಜಿಲ್ಲಾ ಪದ್ಮಶಾಲಿ ನೇಕಾರ ರಕ್ಷಣಾ ವೇದಿಕೆ ಅಸ್ತಿತ್ವಕ್ಕೆ ತರಲಾಗಿದೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ವದ್ದಿ ನರಸಿಂಹಮೂರ್ತಿ ತಿಳಿಸಿದರು.

      ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸುಮಾರು 15-20 ಸಾವಿರ ಪದ್ಮಶಾಲಿ ನೇಕಾರರು ಇದ್ದಾರೆ. ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಕಡುಬಡವರು ಹೆಚ್ಚಾಗಿ ಉಳಿಯಲು ಸಂಘಟನೆಯ ಕೊರತೆಯೇ ಕಾರಣವಾಗಿದೆ ಎಂದು ಹೇಳಿದರು.

        ಸಮಾಜ ಸಂಘಟನೆಗೆ ತಾಲೂಕು ಮಟ್ಟದಲ್ಲಿ ಸಭೆಗಳನ್ನು ಮಾಡಲಾಗುತ್ತಿದೆ. ಪದಾಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ. ಅಲ್ಲದೆ ಮುಂಬರುವ ಪಾಲಿಕೆಯ ಚುನಾವಣೆಗಾಗಿ ರಾಜಕೀಯ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೇ, ಸಮಾಜ ಬಾಂಧವರ ಸಮಸ್ಯೆಗೆಳಿಗೆ ಸ್ಪಂದಿಸುತ್ತಿದ್ದೇವೆಂದು ಅವರು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಜಿಲ್ಲಾ ಗೌರಾವಾಧ್ಯಕ್ಷ ಶೇಪೂರು ಹೆಚ್.ಸತ್ಯನಾರಾಯಣ, ಉಪಾಧ್ಯಕ್ಷ ರಾಹುಲ್ ಬಿ.ಜಿ., ಮಧುಸೂಧನ್ ಬಿ.ಹೆಚ್, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಟಿ.ಎಸ್., ರವಿ ಪಿ.ಟಿ, ಲಕ್ಷ್ಮಣ್ ಎಸ್.ಎನ್. ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link