ಕೊರೋನಾ ಸೋಂಕಿನ ವಿರುದ್ಧ ಚಿತ್ರ ಜಾಗೃತಿ

ಬ್ಯಾಡಗಿ:

     ಕೋವಿಡ್-19(ಕೊರೋನಾ ವೈರಸ್)ನಿಯಂತ್ರಣಕ್ಕಾಗಿ ಸಾರ್ವಜನಿಕರು ಬೀದಿಗಿಳಿಯದೇ ಮನೆಯಲ್ಲಿದ್ದು ಸಹಕರಿ ಸುವಂತೆ ರಾಣೆಬೆನ್ನೂರಿನ ಸತ್ಯಾ ಡೆಕೋರ್ ರೇಣುಕಾ ಆಟ್ರ್ಸ ಹಾಗೂ ಮುದ್ರಣ ಭಾರತಿ ಉತ್ಸಾಹಿ ಯುವಕರ ತಂಡವು ಪಟ್ಟಣದ ರಸ್ತೆಗಳ ಮದ್ಯದಲ್ಲಿ ಬೃಹತ್ ಪೇಂಟಿಂಗ್ ಮೂಲಕ ಅರಿವು ಮೂಡಿಸುವ ವಿನೂತನ ಪ್ರಯತ್ನ ಮುಂದಾಗಿವೆ.

     ಮುಖ್ಯರಸ್ತೆಯಲ್ಲಿನ ಸುಭಾಸ್ ಸರ್ಕಲ್, ಹಳೇ ಪುರಸಭೆ ಎದುರು ಹಾಗೂ ಸರ್ಕಾರಿ ಆಸ್ಪತ್ರೆ ಬಳಿ ಹೀಗೇ 3 ಕಡೆಗಳಲ್ಲಿ ಇಂತಹದ್ದೊಂದು ಬೃಹತ್ ಪೇಂಟಿಂಗ್‍ನಿಂದ ಚಿತ್ರಗಳನ್ನು ಬಿಡಿಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಸಿದರು. ಈಗಾಗಲೇ ರಾಣೆಬೆನ್ನೂರಿನಲ್ಲಿ 4 ಕಡೆಗಳಲ್ಲಿ ಇಂತಹ ಪೇಂಟಿಂಗ್ ರಚಿಸಿರುವ ಸದರಿ ತಂಡವು ಜಿಲ್ಲಾಡಳಿತ ಅನುಮತಿ ನೀಡಿದರೇ ಜಿಲ್ಲೆಯಾದ್ಯಂತ ರಚಿಸುವ ಇರಾದೆ ಹೊಂದಿದೆ.

ದಿನವಿಡೀ ಶ್ರಮ:

        ಪಟ್ಟಣದ ಮೂರು ಭಾಗದಲ್ಲಿ ಪೇಂಟಿಂಗ್ ನಡೆಸಲು ದಿನವೀಡಿ ಶ್ರಮ ಹಾಕಿರುವ ತಂಡದಲ್ಲಿ ಸ್ಥಳೀಯರು ಸೇರಿದಂತೆ ಹತ್ತಕ್ಕೂ ಹೆಚ್ಚು ಯುವಕರು ಭಾಗಿಯಾಗಿದ್ಧಾರೆ, ಬಿಸಿಲನ್ನೂ ಲೆಕ್ಕಿಸದೇ ಪೇಂಟಿಂಗ್ ನಡೆಸಿದ ಯುವಕರ ಪ್ರಯ ತ್ನಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.

ಸುಂದರ ಸ್ಲೋಗನ್:

        ಬೃಹದಾಕಾರದ ‘ವೈರಸ್’ ಚಿತ್ರದ ಎರಡೂ ಕಡೆಗಳಲ್ಲಿ ‘ಲಕ್ಷಣ ರೇಖೆ ದಾಟಿ ನೀ ಹೊರಬಂದರೆ ನಾ ಬರುವೆ ಕೊರೊನಾ ಎಚ್ಚರಿಕೆ’ ‘ಭಯಬೇಡ ಎಚ್ಚರವಿರಲಿ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ” ಎಂಬುದಾಗಿ ಸುಂದರವಾದ ಸ್ಲೋಗನ್‍ಗಳನ್ನು ಬರೆಯಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link