ಚರಂಡಿ ವ್ಯವಸ್ಥೆ ಇಲ್ಲದೆ ನೀರು ನಿಂತು ದುರ್ವಾಸನೆ : ಸಾರ್ವಜನಿಕರಿಗೆ ತೊಂದರೆ

ಗುತ್ತಲ

     ರಾಜ್ಯ ಹಾಗೂ ಜಿಲ್ಲೆಯ ಜನತೆ ಕಣ್ತೆರೆದು ನೋಡುವಂತೆ ಮಾಡಿದ 21 ಅಡಿ ಎತ್ತರದ ಬಸವೇಶ್ವರರ ಏಕಶಿಲಾ ಮೂರ್ತಿಯನ್ನು ಬಿಡದೆ ಕಾಡುತ್ತಿರುವ ಅಸ್ವಚ್ಚತೆ. ಬಸವೇಶ್ವರರ ಮೂರ್ತಿಯ ಎದುರಿಗೆ ಸ್ವಚ್ಚತೆಯೇ ಮರೆ ಮಾಚಿ ಪಟ್ಟಣದ ಘನತೆಯನ್ನು ಮೂರುಕಾಸಿಗೆ ಹರಾಜಾಗುವಂತೆ ಮಾಡುತ್ತಿದೆ ನಮ್ಮ ಗುತ್ತಲ ಪಟ್ಟಣ ಪಂಚಾಯಿತಿ. ಇದಕ್ಕೆ ಒಂದು ನೈಜ ಉದಾಹರಣೆಯೆ ಹಾವೇರಿ ರೋಡಿನಲ್ಲಿ ಅವ್ಯವಸ್ಥೆಯ ಆಗರವಾಗಿರುವ ಚರಂಡಿ ವ್ಯವಸ್ಥೆ.

        ಸ್ವಚ್ಛ ಭಾರತ ಯೋಜನೆಯು ಇಲ್ಲಿ ನೆಪಮಾತ್ರಕ್ಕೆ ಮಾತ್ರ ಸೀಮಿತವಾಗಿದೆ ಹೊರತು ಕಾರ್ಯ ರೂಪಕ್ಕಲ್ಲ ಎಂದರೆ ತಪ್ಪಾಗುವುದಿಲ್ಲ. ಗುತ್ತಲ ಪಟ್ಟಣವನ್ನು ಇತಿಹಾಸ ಪುಟದಲ್ಲಿ ಸೇರುವಂತೆ ಮಾಡಿದ ಸ್ಥಳೀಯ ಕಲ್ಮಠದ ಆವರಣದಲ್ಲಿ ನೆಲೆ ನಿಂತಿರುವ 21 ಅಡಿ ಏಕಶಿಲಾ ಮೂರ್ತಿ ಎದುರಿನ ರಸ್ತೆ ಜಿಲ್ಲಾ ಕೇಂದ್ರ ಹಾವೇರಿಗೆ ಸಂಪರ್ಕವನ್ನು ಕಲ್ಪಿಸುವ ದಾರಿ ಇದಾದರೆ ಇದೆ ರಸ್ತೆಯ ಎದುರಿಗೆ ಶ್ರೀಮಠವಿದೆ ಹಾಗೂ ಬಸವೇಶ್ವರರ ಮೂರ್ತಿ ನಿರ್ಮಾಣವಾಗಿದೆ.

        ಇಲ್ಲಿ ಸೂಕ್ತವಾದ ಚರಂಡಿ ಇಲ್ಲದೆ ಪಟ್ಟಣದ ಹಲವು ವಾರ್ಡಗಳಿಂದ ಹರಿದು ಬರುವ ನೀರು ಅಲ್ಲಿಯೇ ನಿಂತು ದುರ್ನಾತ ಬೀರುತ್ತಾ ಹಂದಿಗಳ ವಾಸಸ್ಥಳವಾಗಿ ಮತ್ತು ರೋಗಗಳ ಉಲ್ಬಣದ ಸ್ಥಳವಾಗಿ ಮಾರ್ಪಟ್ಟಿದೆ ಇದು ಸಂಬಂದಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ಸಾಕ್ಷಿಯಾಗಿದೆ.

        ಪಟ್ಟಣದ ಕೇಂದ್ರ ಸ್ಥಾನ ಬಸ್ಸ್ ನಿಲ್ದಾಣ: ಚರಂಡಿಯ ಅವ್ಯವಸ್ಥೆ ಬಸವೇಶ್ವರರನ್ನೆ ಬಿಟ್ಟಿಲ್ಲಾ ಇನ್ನು ಸಾಮಾನ್ಯ ಮನುಷ್ಯರು ಹಾಗೂ ಪ್ರಯಾಣ ಮಾಡುವಂತ ಪ್ರಯಾಣಿಕರು ಯಾವ ಲೆಕ್ಕಾ ಸ್ವಾಮೀ? ದಿನ ನಿತ್ಯ ಬಸ್‍ಗಳ ಮೂಲಕ ಸಂಚರಿಸುವ ಪ್ರಯಾಣಿಕರ ಗೋಳನ್ನು ಕೂಡಾ ಹೇಳದಂತಾಗಿದೆ. ಈ ರಸ್ತೆಯ ಮುಖಾಂತರ ಹಾದು ಹೋಗಬೇಕಾದರೆ ಸಾರ್ವಜನಿಕರು ತಮ್ಮ ಮುಗನ್ನು ಮುಚ್ಚಿಕೊಂಡು ಹೋಗುವದನ್ನು ಬಿಟ್ರೆ ಅವರಿಗೆ ಬೇರೆ ಯಾವುದೇ ಮಾರ್ಗವಿಲ್ಲಾ.

          ನೆಪಕ್ಕೆ ಮಾತ್ರ ಸೀಮಿತವಾದ ಸ್ವಚ್ಚ ಭಾರತ ಯೋಜನೆ : ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೆ ತಂದರೆ ಅದರ ಅರಿವೆ ಇಲ್ಲದಂತೆ ವರ್ತಿಸುತ್ತಿದ್ದಾರಾ ನಮ್ಮ ಪಟ್ಟಣದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎನ್ನುವ ಅನುಮಾನ ಪಟ್ಟಣದ ಪ್ರಜ್ಞಾವಂತರನ್ನು ಕಾಡತೊಡಗಿದೆ. ಸ್ವಚ್ಚ ಭಾರತ ಯೋಜನೆಯ ಅಡಿಯಲ್ಲಿ ಸ್ವಚ್ಚ ಪಟ್ಟಣಗಳ ಪಟ್ಟಿ ಅಂತಾ ಸರಕಾರ ಬಿಡುಗಡೆ ಮಾಡಿದರೆ ಅದರಲ್ಲಿ ಅಪ್ಪಿತಪ್ಪಿಯು ಕೂಡಾ ನಾವು ನಮ್ಮ ಪಟ್ಟಣದ ಹೆಸರು ಬಂದರೆ ಅದು ನಮ್ಮ ಪಟ್ಟಣ ಜನತೆಯ ಪುಣ್ಯ ಎನ್ನಬೇಕು ಅಷ್ಟೇ.ಇನ್ನಾದರು ಎಚ್ಚೆತ್ತುಕೊಂಡು ಅಸ್ವಚ್ಚತೆಯಿಂದ ನಮ್ಮ ಪಟ್ಟಣದ ಸಾರ್ವಜನಿಕರನ್ನು ಪಾರು ಮಾಡ್ತಾರಾ ನಮ್ಮ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಂಬುದನ್ನಾ ಕಾದು ನೋಡಬೇಕಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link