ಪಾನ್ ಮಸಾಲ ಸಾಗಿಸುತ್ತಿದ್ದ ಲಾರಿ ಅಡ್ಡಗಟ್ಟಿ ದರೋಡೆಗೆ ಯತ್ನ  

ಚಳ್ಳಕೆರೆ
 
    ಖಾಸಗಿ ಕಂಪನಿ ಪಾನ್ ಮಸಾಲವನ್ನು ಹೊತ್ತು ಹೋಗುತ್ತಿದ್ದ ಈಚರ್ ಲಾರಿಯನ್ನು ತಡೆದ ನಾಲ್ವರ ಗುಂಪೊಂದು ಲಾರಿ ಚಾಲಕ, ಕ್ಲಿನರ್ ಮೇಲೆ ಹಲ್ಲೆ ನಡೆಸಿ ಲಾರಿಯಲ್ಲಿದ್ದ ಸುಮಾರು 30 ಲಕ್ಷ ಮೌಲ್ಯದ ಪಾನ್ ಮಸಾಲವನ್ನು ಮತ್ತೊಂದು ಲಾರಿಗೆ ತುಂಬಿಸಿಕೊಳ್ಳುವ ಯತ್ನದಲ್ಲಿದ್ದಾಗ ಪೊಲೀಸರು ದಾಳಿ ನಡೆಸಿರುತ್ತಾರೆ. 
    ತುಮಕೂರಿನಿಂದ ಬಳ್ಳಾರಿಗೆ ಪಾನ್ ಮಸಾಲವನ್ನು ಹೊತ್ತು ಬರುತ್ತಿದ್ದ ಲಾರಿಯನ್ನು ತಾಲ್ಲೂಕಿನ ಗೊಲ್ಲಹಳ್ಳಿ ಬಳಿ ತಡೆದ ನಾಲ್ವರ ತಂಡ ಪಾನ್ ಮಸಾಲ ತುಂಬಿದ್ದ ಲಾರಿಯನ್ನು ಅಡ್ಡಗಟ್ಟಿ ಚಾಲಕ ಹನುಮಂತು(40) ಎಂಬುವವರ ಮೇಲೆ ಹಲ್ಲೆ ನಡೆಸಿ ತಮಿಳುನಾಡು ಮೂಲಕ ಲಾರಿಯೊಂದಕ್ಕೆ ಪಾನ್ ಮಸಾಲವನ್ನು ತುಂಬಿಕೊಳ್ಳುತ್ತಿರುವಾಗ ಖಚಿತ ಮಾಹಿತಿಯನ್ನು ಪಡೆದ ಚಳ್ಳಕೆರೆ ಪೊಲೀಸರು ದಾಳಿ ನಡೆಸಿದ್ದಾರೆ.
 
    ಈ ಸಂದರ್ಭಲ್ಲಿ ಲಾರಿಯನ್ನು ಬಿಟ್ಟು ಆರೋಪಿಗಳು ಪರಾರಿಯಾಗಿರುತ್ತಾರೆ. ಡಿವೈಎಸ್ಪಿ ರೋಷನ್ ಜಮೀರ್, ವೃತ್ತ ನಿರೀಕ್ಷಕ ಈ.ಆನಂದ್‍ರವರ ಮಾರ್ಗದರ್ಶನಲ್ಲಿ ತಂಡ ರಚಿಸಿ ಆರೋಪಿಗಳ ಪತ್ತೆಗೆ ಬಲೆಬಿಸಿದ್ಧಾರೆ. ನಗರದ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap