ಶಿವಮೂರ್ತಿ ಮುರುಘಾಶರಣರಿಂದ ಪರಿಶೀಲನೆ

0
11

ಚಿತ್ರದುರ್ಗ :

          ಶರಣಸಂಸ್ಕೃತಿ-2018ರ ಕಾರ್ಯಕ್ರಮಗಳಿಗೆ ದಿ. 13-10-2018ರಿಂದ ಚಾಲನೆ ದೊರೆಯಲಿದ್ದು, ಡಾ. ಶಿವಮೂರ್ತಿ ಮುರುಘಾ ಶರಣರು ಪೂರ್ವಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದರು.

         12ನೇ ಶತಮಾನದ ಬಸವಾದಿ ಶರಣರ ಸಂಪೂರ್ಣ ಕ್ರಾಂತಿಯ ಫಲಿತಗಳಾದ ಅನುಭವ ಮಂಟಪ, ಶೂನ್ಯಪೀಠ ಮತ್ತು ವಚನಸಾಹಿತ್ಯ ಶರಣಸಂಸ್ಕತಿಯನ್ನೇ ಪರಂಪರೆ ಆಗಿಸಿಕೊಂಡಿರುವ ಚಿತ್ರದುರ್ಗದ ಶ್ರೀ ಮುರುಘಾಮಠವು ಡಾ. ಶಿವಮೂರ್ತಿ ಮುರುಘಾ ಶರಣರು ನೇತೃತ್ವದಲ್ಲಿ ಶರಣಸಂಸ್ಕತಿ ಉತ್ಸವವನ್ನು ಪ್ರತಿವರ್ಷ ಜನೋತ್ಸವವಾಗಿ ಮಧ್ಯಕರ್ನಾಟಕದ ನಾಡಹಬ್ಬವಾಗಿ ಆಚರಿಸಿಕೊಂಡು ಬರುತ್ತಿದೆ.

       ಈ ಉತ್ಸವವು ಸಾಂಪ್ರದಾಯಿಕ ಆಚರಣೆಯಾಗಿರದೆ ವೈಚಾರಿಕತೆ ಬಿತ್ತುವ ಸಮಾನತೆ ಸಾರುವ ಸರ್ವರು ಪಾಲ್ಗೊಳ್ಳುವಿಕೆಯ ಮತ್ತು ಸರ್ವೋದಯ ಪ್ರೇರಣೆಯ ಹಬ್ಬವಾಗಿದೆ. ಈ ಬಾರಿಯ ಉತ್ಸವದ ಕಾರ್ಯಕ್ರಮಗಳಲ್ಲಿ ಪ್ರಸ್ತುತ ಸಂದರ್ಭಕ್ಕೆ ತಕ್ಕಂತೆ ಜನಸಾಮಾನ್ಯರ ಬದುಕಿನಲ್ಲಿ ಹೊಸ ಬದಲಾವಣೆಗೆ, ಸಮಷ್ಟಿ ಪ್ರಜ್ಞೆಯ ಜಾಗೃತಿಯನ್ನುಂಟು ಮಾಡಲು ಉಪನ್ಯಾಸ, ಸಂವಾದ, ವಿಚಾರ ಸಂಕಿರಣಗಳಿಂದ ಪರಸ್ಪರ ವಿಚಾರ ವಿನಿಮಯಕ್ಕೆ ಹಾಗು ಅರಿವಿನ ವಿಸ್ತರಣೆಗೆ ಅವಕಾಶ ಕಲ್ಪಿಸಲಾಗಿದೆ.

         ಅಕ್ಟೋಬರ್ 13ರಿಂದ 22ರವರೆಗೆ ನಡೆಯುವ ಉತ್ಸವದಲ್ಲಿ ನಾಡಿನ ಹಲವಾರು ಚಿಂತಕರು, ಲೇಖಕರು, ಚುನಾಯಿತ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಉತ್ಸವದ ಸಿದ್ದತೆಗಳು ಈಗಾಗಲೇ ಬಹುತೇಕ ಪೂರ್ಣಗೊಂಡಿದೆ.

       ದಿ. 13-10-18ರಂದು ಬೆಳಗ್ಗೆ 8 ಗಂಟೆಗೆ ನಮ್ಮ ನಡಿಗೆ ಶರಣಸಂಸ್ಕತಿಯ ಕಡೆಗೆ ಘೋಷವಾಕ್ಯದೊಂದಿಗೆ ಗಾಂಧಿಸರ್ಕಲ್‍ನಿಂದ ಪ್ರಾರಂಭವಾಗಲಿರುವ ಕಾರ್ಯಕ್ರಮಕ್ಕೆ ಖ್ಯಾತ ಚಲನಚಿತ್ರ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಚಾಲನೆ ನೀಡಲಿದ್ದು, ಖ್ಯಾತ ಚಲನಚಿತ್ರ ನಟ ದರ್ಶನ್ ಭಾಗವಹಿಸಲಿದ್ದಾರೆ.

        ಪೂರ್ವಸಿದ್ಧತೆಗಳ ವೀಕ್ಷಣೆ ಸಂದರ್ಭದಲ್ಲಿ ಉತ್ಸವ ಸಮಿತಿ ಕಾರ್ಯದರ್ಶಿ ಡಿ.ಎಸ್.ಮಲ್ಲಿಕಾರ್ಜುನ್, ಎನ್.ಜಿ. ಶ್ರೀನಿವಾಸ್, ಶ್ರೀ ಶರಣಬಸವದೇವರು, ಶ್ರೀ ಮಹಂತಸ್ವಾಮಿಗಳು, ದೇವರಹಿಪ್ಪರಗಿ, ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಚಡಚಣ, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯನಿರ್ವಹಣಾ ನಿರ್ದೇಶಕ ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ ಮೊದಲಾದವರು ಇದ್ದರು. ಅನುಭವ ಮಂಟಪ ಸೇರಿದಂತೆ ವಾಲಿಬಾಲ್ ಕ್ರೀಡಾಕೂಟದ ಮೈದಾನ, ನೂರಾರು ಮಹಿಳೆಯರಿಂದ ವಚನ ಗಾಯನ ರಿಹರ್ಸಲ್ ವೀಕ್ಷಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here