ಪಂಚಕಲ್ಯಾಣ ಪ್ರತಿಷ್ಠಾಪನಾ ಮಹೋತ್ಸವ

ಬ್ಯಾಡಗಿ:

          ಜನನ-ಮರಣ ಮನುಷ್ಯ ಜೀವನದ ವಿಶೇಷವಲ್ಲ ಪಂಚೇಂದ್ರಿಯಗಳ ಸುಖಕ್ಕಾಗಿ ಮನುಷ್ಯ ಜನ್ಮವು ಹುಟ್ಟಿ ಬಂದಿಲ್ಲ, ಜೀವನದ ತಳಮಳಕ್ಕೆ ಬಲಿಯಾದ ವ್ಯಕ್ತಿ ಸುಖದಿಂದ ಇರುವುದಕ್ಕಾಗಿ ದುಖಃವನ್ನು ಸ್ವಾಗತಿಸಿಕೊಳ್ಳತ್ತಿದ್ದಾನೆ, ಯಾರು ಶಾಂತವಾಗಿದ್ದಾರೆ ಅವರೇ ಸಂತರು ಅವರೇ ಸಾಧುಗಳು, ಸದ್ಯದ ವಾತಾವರಣವನ್ನು ಅವಲೋಕಿಸಿದರೇ ಇನ್ನೆಂದೂ 25ನೇ ತೀರ್ಥಂಕರು ಉದಯಿಸಲು ಸಾಧ್ಯವಿಲ್ಲ ಎಂದು ದಿಗಂಬರ ಮುನಿಶ್ರೀ 108 ಆದಿತ್ಯ ಸಾಗರ ಮಹಾರಾಜರು ಅಭಿಪ್ರಾಯ ವ್ಯಕ್ತಪಡಿಸಿದರು.

          ಭಗವಾನ್ ಶಾಂತಿನಾಥ ತೀರ್ಥಂಕರರ ಜನಬಿಂಬದ ಪಂಚಕಲ್ಯಾಣ ಪ್ರತಿಷ್ಠಾಪನಾ ಮಹೋತ್ಸವ (ನೂತನ ಜಿನಮಂದಿರ ಉದ್ಘಾಟನೆ) ಕಾರ್ಯಕ್ರಮ ಅಂಗವಾಗಿ ತಾಲ್ಲೂಕಿನ ತಾಲ್ಲೂಕಿನ ಚಿನ್ನಿಕಟ್ಟಿ ಗ್ರಾಮದಲ್ಲಿ ಮಹಾವೀರ ಜೈನ್ ದಿಗಂಬರ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಧರ್ಮಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

         ಬದುಕಿನ ಜಂಜಾಟಗಳಿಗೆ ಬಲಿಯಾಗುತ್ತಿರುವ ವ್ಯಕ್ತಿ ಆಂತರಿಕ ಸುಖಕ್ಕೆ ಬಾಹ್ಯ ಸುಖವನ್ನು ಕಳೆದುಕೊಳ್ಳಲಾಗುತ್ತಿದೆ, ಬದುಕಿನ ನಶ್ವರಗಳ ಬೆನ್ನು ಹತ್ತಿದ ವ್ಯಕ್ತಿ ತಳಮಳಕ್ಕೊಳಗಾಗುತ್ತಿದ್ದು ಅರ್ಥವಿಲ್ಲದ ಇಷ್ಟಾರ್ಥ ಸಿದ್ಧಿಗಳಿಗಾಗಿ ಬದುಕಿನ ಸುಖವನ್ನು ಕಳೆದುಕೊಳ್ಳುವ ವ್ಯಕ್ತಿಗಳಿಗೆ ಏನನ್ನೇಬೇಕು ಅರ್ಥವಾಗುತ್ತಿಲ್ಲ, ಆತ್ಮ ಪರಮಾತ್ಮ ಸುಖದಲ್ಲಿ ಎಲ್ಲವನ್ನೂ ಸಿದ್ಧಿಸಿಕೊಳ್ಳಲಾಗುತ್ತಿದೆ, ಸಾತ್ವಿಕತೆ ಎಂಬುದು ಕೇವಲ ಆಹಾರಲ್ಲಷ್ಟೇ ಅಲ್ಲ, ವೃತ್ತಿ, ಪ್ರವೃತ್ತಿ ಆಚರಣೆಯಲ್ಲಿರಬೇಕು ಎಂದರು.

          ಭಕ್ತನಾಗದೇ ಭಗವಾನ್ ಆಗಲು ಸಾಧ್ಯವಿಲ್ಲ: ಪರಮಪೂಜ್ಯ ಕ್ಷುಲಕ 105 ಜಿನದತ್ತ ಸಾಗರ ಮಹಾರಾಜರು ಮಾತನಾಡಿ, ಭಕ್ತನಾಗದೇ ಭಗವಾನ್ ಆಗಲು ಸಾಧ್ಯವಿಲ್ಲ, ದಾರ್ಶನಿಕರ ಜೀವನ ತ್ಯಾಗಮಯವಾಗಿದ್ದು, ಬದುಕಿ ತೋರಿಸಿದ ವಿಶ್ವಶ್ರೇಷ್ಠರು, ಇತ್ತೀಚೆಗೆ ದೇವಸ್ಥಾನಕ್ಕೆ ಹೋಗುವವರು ಸಂಖ್ಯೆ ಕಡಿಮೆಯಾಗುತ್ತಿದೆ, ಹೀಗಾಗಿ ಸಮಾಜ ಸಂಸ್ಕಾರವನ್ನು ಕಳೆದುಕೊಳ್ಳುತ್ತಿದೆ, ಮಾಂಸ ತಿಂದವನಿಗೆ ವ್ಯಸನಗಳು ಜಾಸ್ತಿ ಎಂದ ಅವರು, ಬದುಕಿನ ಆಸೆಗಳು ಮನುಷ್ಯನನ್ನು ತಪ್ಪು ದಾರಿಗೆ ಎಳೆಯುತ್ತಿವೆ ಎಂದರು.

         ಬದುಕು ಕರ್ಮಗಳ ಫಲಿತಾಂಶ: ಮುನಿಶ್ರೀ 108 ಸಹಜಸಾಗರ ಮಹಾರಾಜರು ಮಾತನಾಡಿ, ಜೀವನ ಪಾಪ, ಪುಣ್ಯ, ಕರ್ಮಗಳ ಫಲಿತಾಂಶವಾಗಿದೆ, ನಮ್ಮ ಆಚಾರ ವಿಚಾರ ಭಾವನೆಗಳು ಶುದ್ಧವಾಗಿದ್ದರೇ ದೇವರು ಎಲ್ಲವನ್ನೂ ಕರುಣಿಸಲಿದ್ದಾನೆ, ಇದನ್ನು ಹೊರತುಪಡಿಸಿ ಜೀವನದಲ್ಲಿ ಇನ್ನೇನನ್ನೂ ಪಡೆದುಕೊಳ್ಳಲು ಸಾಧ್ಯವಿಲ್ಲ, ಕಾಯಕದೊಂದಿಗೆ ಭಕ್ತಿಯ ಮಾರ್ಗದಲ್ಲಿ ನಡೆಯವ ವ್ಯಕ್ತಿಗೆ ಜೀವನ್ಮುಕ್ತಿ ಹೊಂದಲು ಸಾಧ್ಯವಿದ ಹೊರತು ಅಧರ್ಮಗಳ ಸರಮಾಲೆಯನ್ನು ಹೊತ್ತವನಿಗೆ ಮಣ್ಣೇ ಗತಿಯಾಗಲಿದೆ ಎಂದರು.

        ಜಾತಿಗಾಗಿ ಬದುಕಿದವರಲ್ಲ ಜಗತ್ತಿಗಾಗಿ ಬದುಕಿದವರು:ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಹಾವೇರಿ ಹೊಸಮಠದ ಬಸವಶಾಂತಲಿಂಗಶ್ರೀ ಧರ್ಮಗಳು ಸೃಜನಾತ್ಮಕ ಕಾರ್ಯಗಳು ಮಾಡಬೇಕಾಗಿದೆ, ಅಹಿಂಸೋ ಪರಮಧರ್ಮ ಎಂಬ ಉತ್ತಮ ಧ್ಯೇಯದೊಂದಿಗೆ ಜೈನ ಧರ್ಮ ಎಲ್ಲ ಧರ್ಮಗಳಿಗೆ ನಿದರ್ಶನವಾಗಿದೆ, ಒಳ್ಳೆಯತನಕ್ಕೆ ಸಧಾಸಿಧ್ಧವಾಗಿರುವ ಧರ್ಮ, ಗರ್ಭ ಸಂಸ್ಕಾರಕ್ಕೆ ಆದ್ಯತೆ ನೀಡುವ ಜೈನ ಧರ್ಮ ಕೇವಲ ತನ್ನ ಸಮುದಾಯಕ್ಕೆ ಬೆಳಕು ನೀಡಿಲ್ಲ ಬದಲಾಗಿ ಜಗತ್ತಿಗೆ ಬೆಳಕನ್ನು ನೀಡಿದೆ ದಾರಿ ಬೇರೆ ಇರಬಹುದು ಆದರೆ ಅವರೆಲ್ಲರ ಉದ್ದೇಶ ಒಂದೇ ಬದುಕಿಗೆ ಒಂದಿಷ್ಟು ಧಾರ್ಮಿಕ ಬೋಧನೆಗಳು ಬೇಕು, ಅದರಲ್ಲೂ ಶಾಂತಿ ಭೋಧನೆ ಬಹಳ ಶ್ರೇಷ್ಠವಾಗಿದೆ ಎಂದರು.

         ಸ್ವಸ್ತಶ್ರೀ ಭಟ್ಟಾಕಲಂಕ ಭಾನುಕೀರ್ತಿ ಭಟ್ಟಾರಕಶ್ರೀ ಮಾತನಾಡಿ, ಸುಖವನ್ನು ಹುಡುಕುತ್ತಿದ್ದೇವೆ, ಕೆಲವರಿಗೆ ಸುಖದ ಜಾಗವೂ ಗೊತ್ತು ಆದರೆ ಹೋಗಲು ಮನಸ್ಸು ಮಾಡುತ್ತಿಲ್ಲ, ಪ್ರಾಮಾಣಿಕತೆಗೆ ಇನ್ನೊಂದು ಹೆಸರು ಜೈನ ಧರ್ಮ, ಸದಾಚಾರಿಗಳಾದವರು, ಸದ್ಗುಣಿಗಳು ಧರ್ಮವನ್ನು ಪ್ರೀತಿಸಬೇಕು, ಕೇವಲ ಅಂಕಿ ಅಂಶಗಳಿಂದ ಜೈನಧರ್ಮ ಜನಾಂಗವು ಎಂದಿಗೂ ಅಲ್ಪಸಂಖ್ಯಾತರೆಂದು ಭಾವನೆಗೆ ಬರುವ ಅವಶ್ಯಕತೆಯಿಲ್ಲ ಎಂದರು.

        ಕ್ಷುಲಕ 105 ಸುಧರ್ಮಗುಪ್ತ ಮಹಾರಾಜರು, ಮುಖಂಡ ಭರತರಾಜ ಹಜಾರೆ, ಗ್ರಾಪಂ ಅಧ್ಯಕ್ಷೆ ಲಲಿತಾ ಶಂಭನಗೌಡ ಪಾಟೀಲ, ಚಂದ್ರಣ್ಣ ಶೆಟ್ಟರ, ಶಿವಾನಂದ ಕಡಗಿ, ರವೀಂದ್ರ ಪಟ್ಟಣಶೆಟ್ಟಿ, ಬೀರಪ್ಪ ಬಣಕಾರ, ದಿಲೀಪಕುಮಾರ ಮೇಗಳಮನಿ, ದೇವರಾಜ ಬುಡ್ಡನಗೌಡ್ರ, ಶಂಭನಗೌಡ ಪಾಟೀಲ, ಶೇಖರಗೌಡ ಗೌಡ್ರ, ಸಿ.ಸಿ.ಗಡಾದ, ಎಂ.ಸಿ.ಯರಗಲ್ಲ, ಜಯಣ್ಣ ಅಪ್ಪಣ್ಣನವರ, ಶ್ರೇಣಿಕರಾಜ ಯಳವತ್ತಿ, ಮಹಾವೀರಪ್ಪ ಹೊನ್ನಾಳಿ, ಎಸ್.ಟಿ.ಸಣ್ಣಮ್ಮನವರ, ಬಿ.ಎಸ್.ಯಳವತ್ತಿ, ಮಂಜಪ್ಪ ಬಣಕಾರ, ನಾಗರಾಜ ಕಣಜದಮನಿ, ಅರುಣಕುಮಾರ ಕದರಮಂಡಲಗಿ, ಸೋಮೇಶ ಮೂಡೂರು, ಎಸ್.ಎಂ.ಚೌಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಜಯಣ್ಣ ಕಡೂರ ಸ್ವಾಗತಿಸಿದರು, ಬಬಿತಾ ಪ್ರೇಮಕುಮಾರ ಕಾರ್ಗಲ್ ನಿರೂಪಿಸಿದರು, ತರುಣಕುಮಾರ ಯಳವತ್ತಿ ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link