ಹಾನಗಲ್ಲ :
ವೀರ ರಾಣಿ ಕಿತ್ತೂರು ಚನ್ನಮ್ಮನ ಜಯಂತ್ಯುತ್ಸವವನ್ನು ಅಕ್ಟೋಬರ್ 23 ರಂದು ಸರಕಾರ ಹಾಗೂ ಪಂಚಮಸಾಲಿ ಸಮಾಜ ಸಂಯುಕ್ತವಾಗಿ ಅರ್ಥಪೂರ್ಣವಾಗಿ ಆಚರಿಸಲು ವೀರಶೈವ ಲಿಂಗಾಯತ ಪಂಚಾಮಸಾಲಿ ಸಂಘದ ತಾಲೂಕು ಘಟಕದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ರವಿವಾರ ಹಾನಗಲ್ಲಿನಲ್ಲಿ ತಾಲೂಕು ಘಟಕದ ಆದ್ಯಕ್ಷ ನಿಜಲಿಂಗಪ್ಪ ಮುದೆಪ್ಪನವರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರಕಾರ ವೀರ ರಾಣಿ ಕಿತ್ತೂರು ಚನ್ನಮ್ಮನ ಜಯಂತ್ಯುತ್ಸವವನ್ನು ಸರಕಾರದಿಂದಲೇ ಆಚರಿಸಲು ಮುಂದಾಗಿರುವುದು ಸ್ವಾಗತಾರ್ಹ ಸಂಗತಿ. ಕೆಳೆದ ವರ್ಷ ಅತ್ಯಂತ ಆತುರದಲ್ಲಿ ಕಾರ್ಯಕ್ರಮ ನಡೆಸಲಾಗಿತ್ತು.
ಈ ಬಾರಿ ಸಾಕಷ್ಟು ಕಾಲಾವಕಾಶವಿರುವುದರಿಂದ ಅತ್ಯಂತ ಸುಸಜ್ಜಿತ ವೇದಿಕೆಯಲ್ಲಿ ಅರ್ಥಪೂರ್ಣವಾಗಿ ಕಾರ್ಯಕ್ರಮ ನಡೆಸಲು ತಾಲೂಕಿನ ಎಲ್ಲ ಪಂಚಮಸಾಲಿ ಸಮುದಾಯ ಹಾಗೂ ವೀರ ರಾಣಿ ಕಿತ್ತೂರು ಚನ್ನಮ್ಮನ ಅಭಿಮಾನಿಗಳು ಸಹಕಾರಿಬೇಕು. ಅದಕ್ಕಾಗಿ ತಾಲೂಕಿನಾದ್ಯಂತ ಜಾಗೃತಿ ಮೂಡಿಸಲು ಸಭೆ ತೀರ್ಮಾನಿಸಿತು.
ಇದೇ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 85 ಕ್ಕಿಂತ ಹೆಚ್ಚು ಅಂಕ ಗಳಿಸಿದ ಪಂಚಮಸಾಲಿ ಸಮುದಾಯದ ವಿದ್ಯಾರ್ಥಿಗಳನ್ನು ಅಕ್ಟೋಬರ್ 23 ರ ಸಮಾರಂಭದಲ್ಲಿ ಗೌರವಿಸಲು ತೀರ್ಮಾನಿಸಲಾಯಿತು. ಅಂಥ ವಿದ್ಯಾರ್ಥಿಗಳು ಶಿವಣ್ಣ ಹೋತನಹಳ್ಳಿ (ಅಕ್ಕಿಆಲೂರ 8095529153), ಎಸ್.ಬಿ.ಚನ್ನಗೌಡರ, ಶಂಕರಮಠದ ಹತ್ತಿರ (ಹಾನಗಲ್ಲ 8105096024)ಇವರಲ್ಲಿ ಹೆಸರು ನೊಂದಾಯಿಸುವಂತೆ ಕರೆ ನೀಡಿದ್ದಾರೆ.
ಇದೇ ವರ್ಷದಲ್ಲಿ ಹಾನಗಲ್ಲ ತಾಲೂಕಿನ ಪಂಚಾಮಸಾಲಿ ಸಮಾಜದ ಬೃಹತ್ ಸಮಾವೇಶವನ್ನು ನಡೆಸುವ ವಿಚಾರವನ್ನು ವ್ಯಕ್ತಪಡಿಸಿದ ಸಭೆ ತಾಲೂಕಿನ ಎಲ್ಲ ಸಮಾಜ ಬಂಧುಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಜಾಗೃತಿ ಮೂಡಿಸುವ ತೀರ್ಮಾನ ಕೈಗೊಂಡಿತು.
ಸಭೆಯಲ್ಲಿ ಗಣ್ಯರಾದ ಎ.ಎಸ್.ಬಳ್ಳಾರಿ, ತಾಲೂಕು ಘಟಕದ ಮಾಜಿ ಅಧ್ಯಕ್ಷ ಚಂದ್ರಣ್ಣ ಕಳ್ಳಿ, ಜಿಲ್ಲಾ ಗೌರವಾಧ್ಯಕ್ಷ ಎನ್.ಎಸ್.ಪಡೆಪ್ಪನವರ, ಜಿಪಂ ಸದಸ್ಯ ಮಾಲತೇಶ ಸೊಪ್ಪಿನ, ತಾಪಂ ಸದಸ್ಯ ಬಸವರಾಜ ಬೂದಿಹಾಳ, ಬಸವರಾಜ ಎಲಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷೆ ನ್ಯಾಯವಾದಿ ಎಸ್.ಎಂ.ಕೋತಂಬರಿ, ಮಾಜಿ ತಾಪಂ ಸದಸ್ಯ ಎಂ.ಜಿ.ಪಾಣಿಗಟ್ಟಿ, ನ್ಯಾಯವಾದಿ ಶಿವಲಿಂಗಪ್ಪ ಬೈಲಣ್ಣನವರ, ಮಲ್ಲನಗೌಡ ಪಾಟೀಲ, ಶೇಖರಗೌಡ ಕುಂದೂರ, ಮಲ್ಲಿಕಾರ್ಜುನ ಪಾಟೀಲ, ಅಂದಾನೆಪ್ಪ ಮೆಣಸಿನಕಾಯಿ, ಬಿ.ಐ.ಹುನಗುಂದ, ವಿ.ಎಲ್.ಪಾಟೀಲ, ಎಂ.ಬಿ.ಗುಳೇದ, ಮಲ್ಲಿಕಾರ್ಜುನ ಹೋತನಹಳ್ಳಿ, ಶಿವಕುಮಾರಗೌಡ ಪಾಟೀಲ, ಪ್ರಭು ಆಲದಕಟ್ಟಿ, ಕಲ್ಲಪ್ಪ ಪೂಜಾರ, ಬಸವರಾಜ ಆಲದಕಟ್ಟಿ, ಸಿ.ವಿ.ಬೆಳವತ್ತಿ, ಸಿ.ಪಿ.ಬಾಸೂರ, ಪಿ.ಎಂ.ಮಾಳಗಿ ಮೊದಲಾದವರು ಸಭೆಯಲ್ಲಿ ಪಾಲ್ಗೊಂಡು ಸಲಹೆ ನೀಡಿದರು.
ಫೋಟೋ :8ಎಚ್‍ಎನ್‍ಎಲ್1
ಶೀರ್ಷಿಕೆ :
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
