ಮತದಾನ ಮಾಡುವ ವ್ಯಕ್ತಿ ಅಪ್ಪಟ ದೇಶ ಪ್ರೇಮಿಯಾಗುತ್ತಾನೆ : ಪರಮೇಶ್ವರಪ್ಪ

ಚಳ್ಳಕೆರೆ
 
       ಮತದಾನ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಮತದಾರರನು ಪಾಲ್ಗೊಳ್ಳುವ ಮೂಲಕ ಸಂವಿಧಾನ ಬದ್ದ ಹಕ್ಕನ್ನು ಚಲಾಯಿಸಬೇಕಿದೆ. ಯಾವ ವ್ಯಕ್ತಿ ಮತದಾನ ಮಾಡುತ್ತಾನೋ ಅವನು ಈ ದೇಶದ ಬಗ್ಗೆ ಹೆಚ್ಚು ಅಭಿಮಾನ ಮತ್ತು ವಿಶ್ವಾಸವನ್ನು ಹೊಂದುತ್ತಾನೆಂದು ತಾಲ್ಲೂಕು ಸ್ವೀಫ್ ಸಮಿತಿ ನಿರ್ದೇಶಕ, ಪೌರಾಯುಕ್ತ ಪರಮೇಶ್ವರಪ್ಪ ತಿಳಿಸಿದರು. 
      ಅವರು, ಶನಿವಾರ ಸಂಜೆ ನಗರಸಭೆಯಿಂದ ಪೌರಕಾರ್ಮಿಕರ ಮತ್ತು ಅಧಿಕಾರಿಗಳ ಸಹಯೋಗದಲ್ಲಿ ನಡೆದ ಪಂಜಿನ ಮೆರವಣಿಗೆ ಚಾಲನೆ ನೀಡಿ ಮಾತನಾಡಿದರು. ಲೋಕಸಭಾ ಚುನಾವಣೆಯಲ್ಲಿ ಚಳ್ಳಕೆರೆ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.100ರ ಮತದಾನಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದ್ದು, ಇಂತಹ ಜಾಗೃತಿ ಕಾರ್ಯಕ್ರಮಗಳು ಹೆಚ್ಚಿನ ಮತದಾನ ಮಾಡಲು ಪ್ರೇರೇಪಣೆ ನೀಡುತ್ತವೆ ಎಂದರು. 
        ತಹಶೀಲ್ದಾರ್ ತುಷಾರ್ ಬಿ.ಹೊಸೂರ್ ಮಾತನಾಡಿ, ಕಳೆದ ಹಲವಾರು ದಶಕಗಳಿಂದ ವಿವಿಧ ಚುನಾವಣೆಗಳನ್ನು ನಡೆಸಲಾಗಿದೆ. ಎಲ್ಲಾ ಚುನಾವಣೆಗಳಲ್ಲೂ ಮತದಾನ ಮಾಡುವಂತೆ ಪ್ರೇರೇಪಣೆ ನೀಡುವ ಕಾರ್ಯ ನಿರಂತರವಾಗಿ ಸಾಗುತ್ತಿದೆ. ಆದರೆ, ಈ ಬಾರಿ ಮಾತ್ರ ಹೆಚ್ಚಿನ ಮತದಾನ ನಡೆಯಬೇಕೆಂಬುವುದು ಜಿಲ್ಲಾ ಚುನಾವಣಾಧಿಕಾರಿಗಳ ಸೂಚನೆಯಾಗಿದೆ. ಈ ಹಿನ್ನೆಲೆಯಲ್ಲಿ ತಾಲ್ಲೂಕು ಮಟ್ಟದ ಎಲ್ಲಾ ಚುನಾವಣಾಧಿಕಾರಿಗಳು ಸಭೆ ನಡೆಸಿ ಶೇ.100ರ ಮತದಾನವಾಗುವಂತೆ ಕಾರ್ಯನಿರ್ವಹಿಸಬೇಕೆಂಬ ನಿರ್ಧಾರ ಕೈಗೊಂಡಿದ್ದು, ಇದಕ್ಕೆ ತಾಲ್ಲೂಕು ಸ್ವೀಫ್ ಸಮಿತಿ ಸಹಕಾರ ನೀಡುತ್ತಿದೆ ಎಂದರು. 
       ಪಂಜಿನ ಮೆರವಣಿಗೆಯಲ್ಲಿ ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರಾದ ವಿನಯ್, ಸಹಾಯಕ ಇಂಜಿನಿಂiÀiರ್ ಲೋಕೇಶ್, ನೈರ್ಮಲ್ಯ ಇಂಜಿನಿಯರ್ ನರೇಂದ್ರಬಾಬು, ಸಮನ್ವಯಾಧಿಕಾರಿ ಪಿ.ಪಾಲಯ್ಯ, ತಿಪ್ಪೇಸ್ವಾಮಿ, ಹಿರಿಯ ಆರೋಗ್ಯ ನಿರೀಕ್ಷ ಮಹಲಿಂಗಪ್ಪ, ಕಿರಿಯ ಆರೋಗ್ಯ ನಿರೀಕ್ಷಕ ಗಣೇಶ್, ನಗರಸಭೆ ಸಿಬ್ಬಂದಿಯವರಾದ ಬೋರಯ್ಯ, ಮಂಜುನಾಥ, ತಿಪ್ಪೇಸ್ವಾಮಿ, ವೆಂಕಟೇಶ್, ಓಬಣ್ಣ, ಹರೀಶ್ ಮುಂತಾದವರು ಭಾಗವಹಿಸಿದ್ದರು. 

 

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link