ಮಕ್ಕಳ ಅಂತರಂಗ ಸ್ವಚ್ಚತೆಗೆ ಪೋಷಕರು ಆದ್ಯತೆ ಕೊಡಲಿ

ಹುಳಿಯಾರು

        ಮಕ್ಕಳ ಆಂತರಂಗದ ಸ್ವಚ್ಚತೆಗೆ ಪೋಷಕರು ಆದ್ಯತೆ ಕೊಡಬೇಕಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ನೀತಿ ಕತೆ ಹೇಳಬೇಕು. ಮಕ್ಕಳೆದರು ದುಶ್ಚಟ, ದುರ್ಬುದ್ಧಿ ಪ್ರದರ್ಶಿಸಬಾರದು. ನಿತ್ಯ ಕನಿಷ್ಠ 1 ಗಂಟೆ ಮಕ್ಕಳೊಂದಿಗೆ ಕಾಲಕಳೆಯಬೇಕು ಎಂದು ಶರಣ ಸಾಹಿತಿಗಳಾದ ದಿಬ್ಬದಹಳ್ಳಿ ಶ್ಯಾಮಸುಂದರ್ ಸಲಹೆ ನೀಡಿದರು.

     ಹುಳಿಯಾರು ಕೋಡಿಪಾಳ್ಯದ ಸೇವಾಲಾಲ್ ಸಾಂಸ್ಕತಿಕ ಸದನದಲ್ಲಿ ಇಲ್ಲಿನ ವಿವೇಕಾನಂದ ಇಂಟರ್ ನ್ಯಾಷನಲ್ ಸ್ಕೂಲ್‍ನಿಂದ ಏರ್ಪಡಿಸಿದ್ದ ವಿವೇಕ ವೈಭದ-2019 ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

       ಮಕ್ಕಳನ್ನು ಇನ್ನೊಬ್ಬರಿಗೆ ಓಲಿಕೆ ಮಾಡಿ ತೆಗಳುವುದರಿಂದ ಅವರಲ್ಲಿ ಖಣಾತ್ಮಕ ಗುಣಗಳು ಬೆಳೆಯುತ್ತವೆ. ಹಾಗಾಗಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹಾಡಿ ಬದಲಾವಣೆಗೆ ಪ್ರಯತ್ನಿಸಿ. ಬಹುಮುಖ್ಯವಾಗಿ ಅವರೊಂದಿಗೆ ಸ್ನೇಹಿತರಂತೆ ಬೆರೆಯಿರಿ. ಮಕ್ಕಳು ನಿಮ್ಮ ಕಣ್ತಪ್ಪಿಸಿ ಪೋನ್‍ನಲ್ಲಿ ಮಾತನಾಡಲು ಬಿಡಬೇಡಿ. ಟೀವಿ, ಮೊಬೈಲ್‍ಗಳಿಂದ ಆದಷ್ಟು ದೂರವಿಡಿ ಎಂದರು.

       ಮಕ್ಕಳಿಗೆ ದೇಶದ ಹಾಗುಹೋಗುಗಳ ಬಗ್ಗೆ ಮಾಹಿತಿ ಕೊಡಿ, ಪರಿಸರದಲ್ಲಾಗುತ್ತಿರುವ ಬದಲಾವಣೆಗಳ ಬಗ್ಗೆ ತಿಳಿಹೇಳಿ. ಡಾಕ್ಟರ್, ಲಾಯರ್ ಆಗು ಎನ್ನುವುದನ್ನು ಬಿಟ್ಟು ಸತ್ಪ್ರಜೆಯಾಗು ಎನ್ನಿ. ಮಕ್ಕಳ ಓದುವ ಶಾಲಾಕಾಲೇಜಿನ ಶಿಕ್ಷಕರನ್ನು ಭೇಟಿಯಾಗಿ ಮಕ್ಕಳ ಕಲಿಕೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಿ. ಸ್ನೇಹ ವಲಯದ ಬಗ್ಗೆ ಹದ್ದಿನಕಣ್ಣಿಡಿ ಎಂದರು.

      ಶಾಲೆಯ ಗೌರವ ಅಧ್ಯಕ್ಷ ಜಿ.ಎಸ್.ಚಂದ್ರಶೇಖರಯ್ಯ ಅವರು ಮಾತನಾಡಿ ಮಕ್ಕಳು ಪೋಷಕರಿಗಿಂತ ಶೀಕ್ಷಕರಿಂದ ಪ್ರಬಾವಿತರಾಗುತ್ತಾರೆ. ಶಿಕ್ಷಕರು ಹೇಳುವ ಮಾತು ವೇದವಾಕ್ಯ ಎಂದು ಪಾಲಿಸುತ್ತಾರೆ. ಹಾಗಾಗಿ ಶಿಕ್ಷಕರ ವರ್ತನೆ, ನಡೆನುಡಿ ಹಾಗೂ ಬೋದನೆಯ ಬಗ್ಗೆ ಸದಾ ಎಚ್ಚರಿಕೆಯಿಂದಿರಬೇಕು. ಆಡಳಿತ ಮಂಡಳಿ ಸಹ ಮಕ್ಕಳ ಸರ್ವತೋಮುಖ ಬೆಳವಣಿಗೆ ನೆರವಾಗುವ ವಾತವರಣವನ್ನು ಶಾಲೆಯಲ್ಲಿ ಕಲ್ಪಿಸಬೇಕು ಎಂದರು.

        ನಿವೃತ್ತ ಡಿವೈಎಸ್‍ಪಿ ಉಮಾಪತಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಸಮಾಜ ಸೇವಕರಾದ ಆರ್.ಮಂಜುನಾಥ್, ಶಾಲೆಯ ಅಧ್ಯಕ್ಷ ಅಶೋಕ್ ಮೂರ್ತಿ, ಪ್ರಾಚಾರ್ಯೆ ಕುಮಾರಿ ಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap