ಹುಳಿಯಾರು:
ಹುಳಿಯಾರು ಹೋಬಳಿಯ ಲಿಂಗಪ್ಪನಪಾಳ್ಯದ ಗ್ರಾಮಸ್ಥರ ಮನವಿಗೆ ತಹಶೀಲ್ದಾರ್ ತೇಜಸ್ವಿನಿ ಅವರು ಸ್ಪಂಧಿಸಿದ್ದು ಮೂಲಸೌಕರ್ಯ ಕಲ್ಪಿಸುವ ಕಾರ್ಯ ಭರದಿಂದ ಸಾಕುತ್ತಿದೆ.
ಲಿಂಗಪ್ಪನಪಾಳ್ಯಕ್ಕೆ ತಹಶೀಲ್ದಾರ್ ಆಗಮಿಸಿದ್ದ ಸಂದರ್ಭದಲ್ಲಿ ಇಲ್ಲಿನ ಗ್ರಾಮಸ್ಥರು ಲೈಟ್ ಕಂಬಗಳಿಗೆ ಬೀದಿ ದೀಪ ಕಟ್ಟಿಸಿ ಎಂದರೂ ಕಟ್ಟಿಸಿಲ್ಲ, ಚರಂಡಿ ಕಟ್ಟಿಕೊಂಡು ವರ್ಷವಾದರೂ ಕ್ಲೀನ್ ಮಾಡಿಲ್ಲ, ಚರಂಡಿ ಕ್ಲೀನ್ ಆಗದೆ ಇಡೀ ಊರಲ್ಲಿ ಸೊಳ್ಳೆಗಳು ಹೆಚ್ಚಾಗಿದ್ದು ಗ್ರಾಮಸ್ಥರು ರೋಗ ರುಜಿನಗಳಿಂದ ನರಳುತ್ತಿದ್ದಾರೆ ಎಂದು ದೂರಿದ್ದರು.
ಆಗ ಪಪಂ ಮುಖ್ಯಾಧಿಕಾರಿಗಳಿಗೆ ಸೂಚನೆ ಕೊಟ್ಟು ನಿಮ್ಮ ಸಮಸ್ಯೆ ಸರಿಪಡಿಸುವ ಭರವಸೆಯನ್ನು ತಹಶೀಲ್ದಾರ್ ನೀಡಿದ್ದರು. ಅದರಂತೆ ಕಳೆದ 2 ದಿನಗಳಿಂದ ಪೌರಕಾರ್ಮಿಕರು ಊರಿನ ಚರಂಡಿ ಕ್ಲೀನ್ ಮಾಡುತ್ತಿದ್ದು ಎಲೆಕ್ಟ್ರೀಷಿಯನ್ ಬೀದಿ ಕಂಬಗಳಿಗೆ ಟ್ಯೂಬ್ ಲೈಟ್ ಕಟ್ಟಿದ್ದಾರೆ.
ಚರಂಡಿ ತ್ಯಾಜ್ಯ ವಿಲೇ ಮಾಡುವ ಕೆಲಸ ಬಾಕಿ ಉಳಿದಿದೆ. ಜೊತೆಗೆ ಊರೊಳಗೆ ಬೀದಿದೀಪ ಅಳವಡಿಸುವುದು ಹಾಗೂ ನಿರಿನ ಸಿಸ್ಟನ್‍ಗಳನ್ನು ಕ್ಲೀನ್ ಮಾಡಿಸುವ ಕಾರ್ಯ ಮಾತ್ರ ಬಾಕಿ ಉಳಿದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
