ಕೆ.ಬಿ.ಕ್ರಾಸ್‍ನಲ್ಲಿ ಅಂಬೇಡ್ಕರ್ ಪರಿನಿರ್ವಾಣ ದಿನ ಆಚರಣೆ

ತಿಪಟೂರು

         ತಾಲ್ಲೂಕಿನ ಕೆ.ಬಿ.ಕ್ರಾಸ್‍ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಬೋಧಿವೃಕ್ಷ ಸಾಂಸ್ಕತಿಕ ಬಳಗದ ಸಂಯುಕ್ತಾಶ್ರಯಲ್ಲಿ ಅಂಬೇಡ್ಕರ್ ಪರನಿರ್ವಾಣ ದಿನವನ್ನು ಆಯೋಜಿಸಲಾಗಿತ್ತು.

          ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ದ.ಸಂ.ಸ ಜಿಲ್ಲಾ ಸಂಚಾಲಕರಾದ ಕುಂದೂರು ತಿಮ್ಮಯ್ಯ ಮಾತನಾಡುತ್ತಾ, ಅಂಬೇಡ್ಕರ್ ಪರಿನಿರ್ವಾಣದ ದಿನವೇ ಈ ದೇಶದ ಬಹು ಸಂಸ್ಕತಿಯ ಸಂಕೇತದಂತಿರುವ ಬಾಬರಿ ಮಸೀದಿಯನ್ನು ಧ್ವಂಸಮಾಡಿದ ಮನುವಾದಿಗಳ ಹುನ್ನಾರಗಳನ್ನು ಅರ್ಥಮಾಡಿಕೊಂಡು ಮುಂದಿನ ಸಾರ್ವತ್ರಿಕ ಚುನಾವಣೆಗಳನ್ನು ಎದುರಿಸಬೇಕು ಮತ್ತು ಬಹು ಸಂಸ್ಕತಿಯನ್ನು ಒಡೆಯುವ ಯಾವುದೇ ಪಕ್ಷಗಳಿಗೂ ಮತಚಲಾಯಿಸಬಾರದೆಂದು ಕರೆಕೊಟ್ಟರು.

          ಜಿಲ್ಲಾ ದ.ಸಂ.ಸ ವಿದ್ಯಾರ್ಥಿ ಒಕ್ಕೂಟದ ಸಂಚಾಲಕರಾದ ಜೆ.ಸಿ.ರಂಗಧಾಮಯ್ಯ ಮಾತನಾಡಿ, ಮನುವಾದಿಗಳಿಂದ ರೂಪಿತಗೊಂಡ ರಾಜಕೀಯ ಪಕ್ಷಗಳು ದೇಶದಲ್ಲಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕಡೆ ಯೋಚಿಸದೆ ನೋಟು ಅಮಾನ್ಯೀಕರಣ, ಮಂದಿರ ಮಸೀದಿಗಳ ಬಗ್ಗೆ ಜನರ ಗಮನ ಸೆಳೆಯುತ್ತಿರುವುದು ನಾಚಿಕೆಯ ಸಂಗತಿಯೆಂದು ತಿಳಿಸಿದರು.

          ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ಮಾತನಾಡಿ ಗ್ರಾಮಪಂಚಾಯತ್ ರಾಜಕಾರಣಕ್ಕೆ ಸಶಕ್ತವಾದ ಕಾಲಘಟ್ಟವಿದು. ಇಂತಹ ರಾಜಕಾರಣದಿಂದ ದೂರ ಸರಿಯುವುದು ಸರಿಯಲ್ಲ ಎಂದು ತಿಳಿಸಿದರು.

         ಕಾರ್ಯಕ್ರಮದಲ್ಲಿ ಅಶ್ವತ್‍ನಾರಾಯಣ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಕೆ.ಜಿ.ಶಂಕರಪ್ಪ, ಭಗತ್ ಸಿಂಗ್, ರವಿ ಕಂಟಲಗೆರೆ, ಗುರುಪ್ರಸಾದ್, ನಂಜುಂಡಯ್ಯ, ದಯಾನಂದ್ ಹಟ್ನ ಮುಂತಾವದರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link