ಹೊಸದುರ್ಗ:
ಮಾನವನ ಸಂಪನ್ಮೂಲ ಹಾಗೂ ಪರಿಸರ ಸಂರಕ್ಷಣೆ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಇಲ್ಲಿನ ಜೆಎಂಎಫ್‍ಸಿಹಿರಿಯ ಸಿವಿಲ್ ನ್ಯಾಯಾಧಿಶರಾದ ಬಿ.ಜಿ ದಿನೇಶ್ ತಿಳಿಸಿದರು.
ಪಟ್ಟಣದ ಎಸ್.ನಿಜಲಿಂಗಪ್ಪ ವಿದ್ಯಾಸಂಸ್ಥೆಯಲ್ಲಿಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪರಿಸರ ದಿನಾಚರಣೆಪ್ರಾಮಾಣಿಕವಾಗಿ ಆಚರಿಸದೇಸಾಂಕೇತಿಕವಾಗಿ, ಅದ್ದೂರಿಯಾಗಿ ಆಚರಿಸುತ್ತೇವೆ.ಹೀಗೆ ಆಚರಿಸುವುದು ಬದಲಾಗಬೇಕು. ಪ್ರತಿಯೊಬ್ಬರ ಮನೆಯಲ್ಲಿ ಮರ ಗಿಡಗಳನ್ನು ಕಡ್ಡಾಯವಾಗಿ ಬೆಳೆಸಬೇಕು. ಈ ರೀತಿ ಬೆಳೆಸಿದರೆ ಗಾಳಿ, ಆಹಾರ, ನೀರು ಯಥೇಚ್ಚವಾಗಿ ಸಿಗುತ್ತದೆ.
ಪಟ್ಟಣಗಳು ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ಸಹ ಪರಿಸರಕ್ಕೆ ಹೆಚ್ಚು ಹೊತ್ತು ಕೊಡಬೇಕು. ಜಾಗತೀಕ ಪ್ರಭಾವದಿಂದಾಗಿ ಈಗಿನ ಪೀಳಿಗೆ2ಜಿ ಯಿಂದ 5ಜಿ ವರೆಗೆ ನಮ್ಮ ಟೆಕ್ನಾಲಜಿ ಬೆಳೆದಿದೆ.ತಂದೆ ತಾಯಂದಿರು ತಮ್ಮ ಮಕ್ಕಳನ್ನು ಎಷ್ಟು ಜೋಪಾನವಾಗಿ ಮಾಡುತ್ತಾರೆ ಆದರೆ ನಮಗೆ ಜೀವ ನೀಡುವ ಪರಿಸರವನ್ನು ಏಕೆ ಜೋಪಾನ ಮಾಡುವುದಿಲ್ಲಮತ್ತು ಕಾಳಜಿ ವಹಿಸುವುದಿಲ್ಲಎಂದು ಬೇಸರ ವ್ಯಕ್ತಪಡಿಸಿದರು.
ಪರಿಸರವನ್ನು ಕಾಳಜಿ ವಹಿಸದೇ ನಮ್ಮ ನಾಗರೀಕರು ಟಿವಿ, ಮೊಬೈಲ್, ವಾಟ್ಸಪ್, ಟ್ವಿಟ್ಟರ್, ಪೊಗೊ, ಕಾರ್ಟೂನ್ ಚಾನಲ್ ನೋಡುವುದರ ಮೂಲಕ ಒಳಹೊಕ್ಕಿರುತ್ತಾರೆ. ಆದರೆ ಪರಿಸರವನ್ನು ಬೆಳೆಸಲು ಸಂರಕ್ಷಿಸಲು ಏಕೆ ಆಗುವುದಿಲ್ಲ..?ಪ್ರಾಣಿ ಪಕ್ಷಿಗಳು ಉಳಿದರೆ ನಾವು ಉಳಿಯುತ್ತೇವೆ.ನಮ್ಮ ಸ್ವಾರ್ಥ, ದುರಾಸೆಯಿಂದ ಮನುಷ್ಯ ಪರಿಸರ ನಾಶ ಮಾಡುತ್ತಿದ್ದಾನೆ.100ರಿಂದ150 ಅಡಿಯವರೆಗೆ ಮೊದಲು ನೀರು ಸಿಗುತ್ತಿತ್ತು ಆದರೆ ಈಗಿನ ಕಾಲದಲ್ಲಿ 600ರಿಂದ 1000 ಅಡಿಯವರೆಗೆ ಬೋರ್ ಕೊರೆಸಿದರೂ ನೀರು ಸಿಗುತ್ತಿಲ್ಲವೆಂದರೆ ನಮ್ಮ ನಿರ್ಲಕ್ಷ್ಯವೇ ಕಾರಣ ಎಂದರು.
ಎಸ್.ನಿಜಲಿಂಗಪ್ಪ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಎಸ್.ಕಲ್ಮಠ್ ಮಾತನಾಡಿ ನಾವು ಪರಿಸರವನ್ನು ಬೆಳೆಸಿ ಬದುಕಿಸಿದರೆ ನಾವು ಬದುಕುತ್ತೇವೆ. ಬರೀ ಅಡಂಬರಕ್ಕಾಗಿ ಐದಾರು ಗಿಡ ಮರಗಳನ್ನು ಹಾಕುವುದರ ಬದಲು ಒಂದೆರಡು ಗಿಡಗಳನ್ನು ನೆಟ್ಟು ಪ್ರಾಮಾಣಿಕವಾಗಿ ಪೋಷಿಸಬೇಕು.ವಿದೇಶದಲ್ಲಿ ಸಂಪೂರ್ಣ ಹಸಿರು ವಾತಾವರಣದಿಮದಕೂಡಿರುತ್ತದೆ.ಅದರಂತೆ ಈ ದೇಶವು ಕೂಡ ಸಮಗ್ರವಾಗಿ ಚಿಂತನೆ ಮೂಲಕ ಗಿಡ ಮರಗಳನ್ನು ಬೆಳೆಸಲು ಕೈ ಜೊಡಿಸಬೇಕು. ಪರಿಸರವನ್ನು ನಾಶವಾಗಿಸದೇ ಬದುಕಿಸುವ ಹೊಣೆ ಮುಂದಿನ ಪೀಳಿಗೆಯ ವಿಧ್ಯಾರ್ಥಿಗಳದ್ದು ಎಂದರು.
ಇದೇ ವೇಳೆ ಜೆಎಂಎಫ್‍ಸಿ ಸಿವಿಲ್ ನ್ಯಾಯಾಧೀಶರಾದ ಪ್ರಶಾಂತ್ ನಾಗಲಪೂರ,ಅಪರ ಸಿವಿಲ್ ನ್ಯಾಯಧೀಶರಾದ ಗಂಗಾಧರ್ ಬಡಿಗೇರ್, ಎಸ್.ನಿಜಲಿಂಗಪ್ಪ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ.ಶಿವಲಿಂಗಪ್ಪ, ಅರಣ್ಯ ವಲಯ ಅಧಿಕಾರಿ ಪ್ರದೀಪ್ ಪವಾರ್,ಖಜಾಂಚಿ ಕೆ.ಸಿ.ಮಲ್ಲಿಕಾರ್ಜುನಪ್ಪ, ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್. ಕಲ್ಮಠ್, ಹಾಗೂ ಶಾಲೆಯ ಭೋಧಕ ಮತ್ತು ಭೋಧಕೇತರ ಸಿಬ್ಬಂದಿಹಾಗೂ ಅರಣ್ಯ ಇಲಾಖೆ ಸಿಬ್ಬಂದಿವರ್ಗದವರು ಹಾಜರಿದ್ದರು.