ಹಗರಿಬೊಮ್ಮನಹಳ್ಳಿ:
ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜು.09ರಂದು ಬಳ್ಳಾರಿಯಲ್ಲಿ ನಡೆಯುವ ಜಿಲ್ಲಾ ಮಟ್ಟದ ಪ್ರತಿಭಟನೆಯಲ್ಲಿ, ತಾಲೂಕಿನ ಎಲ್ಲಾ ಶಿಕ್ಷಕರು ಪಾಲ್ಗೊಳ್ಳುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷರ ಸಂಘದ ಅಧ್ಯಕ್ಷ ಎಚ್.ಲೋಕಪ್ಪ ಕರೆ ನೀಡಿದರು.
ಪಟ್ಟಣದ ಗುರುಭವನದಲ್ಲಿ ಶಿಕ್ಷಕರ ಸಂಘದ ತಾಲೂಕು ಪದಾಧಿಕಾರಿಗಳು ಶನಿವಾರ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಮಟ್ಟದ ಕಾರ್ಯಕಾರಿ ಸಮಿತಿ ಸಭೆಯ ನಿರ್ಣಯದಂತೆ ಶಿಕ್ಷಕರ ಪ್ರಮುಖ ಬೇಡಿಕೆಯಾದ ಪದವೀಧರ ಶಿಕ್ಷಕರನ್ನು 6ರಿಂದ ಬಡ್ತಿಮಾಡುವಂತೆ ಸೇರಿದಂತೆ, ಶಿಕ್ಷಕರ ವರ್ಗಾವಣೆ, ನೂತನ ಪಿಂಚಣಿ ಯೋಜನೆ ರದ್ಧುಗೊಳಿಸಿ ಹಳೇ ಪಿಂಚಣಿ ಮುಂದುವರೆಸುವಂತೆ, ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ಎಲ್.ಕೆ.ಜಿ. ಯು.ಕೆ.ಜಿ ಆರಂಭಿಸಬೇಕೆಂದು ಆಗ್ರಹ, ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆಯಲ್ಲಿರುವ ನ್ಯೂನ್ಯತೆ ಸರಿಪಡಿಸುವಂತೆ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಅನುಪಾತ ಗುರುತಿಸುವಾಗ ಮುಖ್ಯೋಪಾಧ್ಯಾಯರು ಹಾಗೂ ದೈಹಿಕ ಶಿಕ್ಷಕರುಗಳನ್ನು ಹೊರತುಪಡಿಸುವ ಪ್ರಕ್ರಿಯೆ ಇನ್ನು ಹಲವಾರು ಸಮಸ್ಯೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎಲ್ಲಾ ಶಾಲಾ ಶಿಕ್ಷಕರು ಸಮೂಹಿಕವಾಗಿ ರಜೆ ಹಾಕುವ ಮೂಲಕ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.ಅಂದು ಬೆಳಗ್ಗೆ 10ರಿಂದ ಸಂಜೆ 4ಗಂಟೆಯವರೆಗೆ ಡಿಡಿಪಿಐ ಕಚೇರಿಯ ಮುಂದೆ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಬಿ.ಕೊಟ್ರಪ್ಪ, ಉಪಾಧ್ಯಕ್ಷರಾದ ಡಿ.ಬೆಟ್ಟಪ್ಪ, ಸಿ.ಶಾಂತಮ್ಮ, ಜಿಲ್ಲಾ ಖಜಾಂಚಿ ಜಿ.ಪ್ರಭಗೌಡ , ಆರ್.ಕೊಟ್ರಗೌಡ, ಯು.ಎಂ.ಶಾಂತಕುಮಾರಿ, ಹುಳಿಮಜ್ಗಿ ಸುರೇಶ್, ಆರ್.ಎಲ್.ಮಹಾಂತೇಶ್, ರಂಗನಾಥ ಹವಲ್ದಾರ್, ಯು.ಎಂ. ಗುರುಮೂರ್ತಿ, ಮಂಜುಳ ಹವಲ್ದಾರ್, ಬಿ.ಚಂದ್ರಪ್ಪ, ಎ.ಕರಿಯಪ್ಪ, ಟಿ.ಸೋಮಶೇಖರ, ಎಂ.ಯಂಕಾರೆಡ್ಡಿ, ಎಂ.ಮಂಜುನಾಥ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
