ವಿದ್ಯಾರ್ಥಿ ಜೀವನದಿಂದಲೇ ಯೋಗದಲ್ಲಿ ಪಾಲ್ಗೊಳ್ಳಿ : ರಂಗನಾಥ ಹವಲ್ದಾರ್

ಹಗರಿಬೊಮ್ಮನಹಳ್ಳಿ

     ವಿದ್ಯಾರ್ಥಿ ಜೀವನದದಲ್ಲಿಯೇ ಯೋಗದಲ್ಲಿ ಪಾಲ್ಗೊಳ್ಳುವ ಮೂಲಕ ಮುಂದಿನ ಜೀವನದಲ್ಲಿ ಸಂಪೂರ್ಣ ಯೋಗ್ವನ್ನು ಅಳವಡಿಸಿಕೊಳ್ಳಬೇಕು ಎಂದು ಶಿಕ್ಷಕ ರಂಗನಾಥ ಹವಲ್ದಾರ್ ಕರೆನೀಡಿರು.

      ಪಟ್ಟಣದ ಹಳೇ ಊರಿನ ಸ.ಮಾ.ಹಿ.ಪ್ರಾ.ಶಾಲೆಯಲ್ಲಿ ದೈಹಿಕ ಶಿಕ್ಷಕರು ಹಮ್ಮಿಕೊಂಡಿದ್ದ ಯೋಗ್ಯಾಭ್ಯಾಸದ ಸಮರೋಪ ಸಮಾರಂಭ ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಮಕ್ಕಳು ಶಾಲಾವಧಿಯಿಂದಲೇ ಯೋಗಾಸನವನ್ನು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳುವುದ ರ ಮೂಲಕ ಸಮಾಜದಲ್ಲಿ ಉತ್ತಮ ಹಾಗೂ ಆರೋಗ್ಯವಂತ ನಾಗರಿಕರಾಗಿ ಹೊರಹೊಮ್ಮ ಬೇಕು ಎಂದರು.ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಒಂದುವಾರದಿಂದ ದೈಹಿಕ ಶಿಕ್ಷಕ ಶಾಂತಮೂರ್ತಿ ನಿತ್ಯ ಯೋಗಾಭ್ಯಾಸವನ್ನು ಮಾಡಿಸುತ್ತಿದ್ದರು. ಮತ್ತು ಮುಖ್ಯ ಶಿಕ್ಷಕ ಕೊಟ್ರೇಶ್ ಶೆಟ್ಟರ್ ಹಾಗೂ ಸಹಶಿಕ್ಷಕರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link