ಹಾವೇರಿ :
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯನ್ನು ಪಕ್ಷ ಸ್ಥಳೀಯರಿಗೆ ಪ್ರಾತಿನಿಧ್ಯ ನೀಡುವಂತೆ ಹಾಗೂ ಚುನಾವಣೆಯಲ್ಲಿ ಗೆಲ್ಲುವ ಸೂಕ್ತ ವ್ಯಕ್ತಿ ನಾನಾಗಿದ್ದು ಪಕ್ಷದ ಹೈಕಮಾಂಡ್ ನನಗೆ ಟಿಕೇಟ್ ನೀಡಬೇಕು ಎಂದು ಕಾಂಗ್ರೇಸ್ ಪಕ್ಷದ ಅಯುಬ್‍ಖಾನ್ ಎ. ಪಠಾಣ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಹಾವೇರಿ ಲೋಕಸಭಾ ಚುನಾವಣೆಯಲ್ಲಿ ಕಳೆದ ಎರಡು ಬಾರಿ ಸ್ಥಳೀಯ ಲೆಕ್ಕಾಚಾರವಾಗಿ ಕಾಂಗ್ರೇಸ್ ಪಕ್ಷದ ಗೆಲವು ತಪ್ಪಿದೆ.ನಾನು ಕಾಂಗ್ರೇಸ್ ಪಕ್ಷದ ಕಟಾಳುವಾಗಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದೇನೆ.
ಅಖಂಡ ಧಾರವಾಡ ಜಿಲ್ಲೆ ಇರುವಾಗಲು ನಿರಂತರವಾಗಿ ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಂಡು ಪಕ್ಷದ ನೀಡಿದ ಜವಾಬ್ದಾರಿ ನಿರ್ವಹಿಸಿದ್ದೇನೆ. ಗದಗ-ಹಾವೇರಿ ಜಿಲ್ಲೆಗಳ ಸೂಕ್ತ ಸ್ಥಳೀಯ ಮುಖಂಡರಿಗೆ ಈ ಬಾರಿ ಟಿಕೇಟ್ ನೀಡಿದರೆ ನೂರರಷ್ಟು ಗೆಲವು ನಿಶ್ಚಿತವಾಗಿದೆ ಎಂದರು.
ಕಳೆದ ಹಿರೆಕೇರೂರ ಕ್ಷೇತ್ರದ ವಿಧಾನಸಭಾ ಚುನಾವಣೆ ಹಾಗೂ ಜಿ.ಪಂ ಚುನಾವಣೆಯ ಎದುರಿಸಿದ್ದು ಮೈನಾರಿಟಿ ಕೊಟಾದ ಅಡಿಯಾದರೂ ನಾನು ಸ್ಥಳೀಯ ವ್ಯಕ್ತಿಯಾಗಿದ್ದೇನೆ. ಎರಡು ಜಿಲ್ಲೆಗಳ ವಕೀಲರು ಹಾಗೂ ಜನಸಮಾನ್ಯರು ಪರಿಚಯವಿದೆ. ವಕೀಲನಾಗಿ ತುಂಬಾ ಅನುಭವಿವಿದ್ದು, ಜಿಲ್ಲಾ ಪಂಚಾಯತಿಯ ಕಾನೂನು ಸಲಹೆಗಾರರಾಗಿ ಕೆಲಸ ಮಾಡಿದ್ದೇನೆ.
ಎಲ್ಲ ಹಂತದ ಪಕ್ಷದ ಕಾರ್ಯಗಳನ್ನು ಮಾಡಲಾದ್ದು, ಈ ಲೋಕಸಭಾ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ದುಡಿಯಲು ಅವಕಾಶವನ್ನು ಪಕ್ಷದ ಹೈಕಮಾಂಡ್ ನೀಡಿದಂತಾಗುತ್ತದೆ. ಜಿಲ್ಲೆ,ರಾಜ್ಯದ ಹಾಗೂ ರಾಷ್ಟೀಯ ನಾಯಕರು, ಪಕ್ಷದ ಹಿರಿಯರು ನನಗೆ ಟಿಕೇಟ್ ನೀಡಬೇಕು ನಾನು ಈ ಕ್ಷೇತ್ರದ ಪ್ರಬಲ ಟಿಕೇಟ್ ಆಕಾಂಕ್ಷಿಯಾಗಿದ್ದೇನೆ ಎಂದು ಎ.ಎ.ಪಠಾಣ ಕಾಂಗ್ರೇಸ್ ಪಕ್ಷದ ಹೈಕಮಾಂಡ್‍ಗೆ ಮನವಿ ಮಾಡಿದರು.
ಪಕ್ಷದ ಮುಖಂಡ ಚಂದ್ರಶೇಖರ ಮುದಕ್ಕಣ್ಣನವರ ಮಾತನಾಡಿ ಎರಡು ಬಾರಿ ಕಾಂಗ್ರೇಸ್ ಪಕ್ಷದ ಗೆಲವು ಕೈ ತಪ್ಪಿದ್ದು, ಈ ಬಾರಿ ಸೂಕ್ತ ಅಭ್ಯರ್ಥಿ ಹಾಕುವ ಮೂಲಕ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಗೆಲ್ಲಲು ಹಗಲಿರುಳು ಶ್ರಮವಹಿಸುತ್ತೇವೆ. ಪಕ್ಷದ ಗೆಲ್ಲುವ ಸೂಕ್ತ ವ್ಯಕ್ತಿಗೆ ನಾವು ಒತ್ತಾಯಿಸುತ್ತೇವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡರಾದ ಜಿ.ಬಿ ದೇವರಮನಿ.ಜಯರಾಂ ಮಾಳಾಪೂರ.ಸಿ.ಬಿ ಕುರವತ್ತಿಗೌಡ್ರ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








